ಮುದ್ರಾಡಿ ಮಂಜುನಾಥ ಆಚಾರ್ಯ

ಹೆಬ್ರಿ , ಜು.18: ಮಂಗಳೂರಿನ ಪ್ರಖ್ಯಾತ ಉದ್ಯಮಿ ಕೊಡುಗೈದಾನಿ ಮುದ್ರಾಡಿ ಬೆಳಗುಂಡಿಯ ಮಂಜುನಾಥ ಆಚಾರ್ಯ ಮಂಗಳೂರು (70) ಅವರು ಶುಕ್ರವಾರ ಅನಾರೋಗ್ಯದಿಂದ ನಿಧನರಾದರು.
ಮೃತರು ಪತ್ನಿ, ಮೂವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಇತ್ತೀಚೆಗೆ ಲೋಕಾರ್ಪಣೆಗೊಂಡ ಕಜ್ಕೆ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ತೀರ್ಥಮಂಟಪದ ಕೊಡುಗೆಯನ್ನು ನೀಡಿದ್ದಲ್ಲದೇ ದೇವಸ್ಥಾನದ ಅಭಿವೃದ್ಧಿ ಸಹಕಾರವನ್ನು ನೀಡಿದ್ಡುದರು.
ಮಂಜುನಾಥ ಆಚಾರ್ಯರ ಅಂತ್ಯಸಂಸ್ಕಾರ ಮುದ್ರಾಡಿ ಬೆಳಗುಂಡಿಯ ಅವರ ನಿವಾಸದ ಪರಿಸರದಲ್ಲಿ ಜುಲೈ 19ರ ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮಂಜುನಾಥ ಆಚಾರ್ಯ ಅವರ ನಿಧನಕ್ಕೆ ಕಜ್ಕೆ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ, ವಿಶ್ವಕರ್ಮ ಸಮಾಜದ ನೂರಾರು ಗಣ್ಯರು, ಪ್ರಮುಖರು, ಮುದ್ರಾಡಿ ಗಣ್ಯರು ಪ್ರಮುಖರು ಸಂತಾಪ ಸೂಚಿಸಿದ್ದಾರೆ.
Next Story





