ಮೊಯ್ದುಕುಟ್ಟಿ ಹಾಜಿ

ಪುತ್ತೂರು: ಪರ್ಲಡ್ಕ ಗೋಳಿಕಟ್ಟೆ ನಿವಾಸಿಯಾದ ಮೊಯ್ದುಕುಟ್ಟು ಹಾಜಿ (99) ವಯೋಸಹಜ ಅನಾರೋಗ್ಯದಿಂದ ಬುಧವಾರ ಪೂರ್ವಾಹ್ನ ಸ್ವಗೃಹದಲ್ಲಿ ನಿಧನರಾದರು.
ಪುತ್ತೂರಿನ ಎಪಿಎಂಸಿ ಯಾರ್ಡ್ನಲ್ಲಿ ಶಾಲಿಮಾರ್ ಟ್ರೇರ‍್ಸ್ ಎಂಬ ಅಡಿಕೆ ಉದ್ಯಮವನ್ನು ಹೊಂದಿದ್ದ ಅವರು ಪರ್ಲಡ್ಕ ಮುಹಿಯುದ್ದೀನ್ ಜುಮ್ಮಾ ಮಸೀದಿಯ ಆಡಳಿತ ಸಮಿತಿಯ ಮಾಜಿ ಅಧ್ಯಕ್ಷರಾಗಿದ್ದರು.
ಮೃತರು ಐವರು ಹೆಣ್ಣು ಮಕ್ಕಳು, ಅಳಿಯಂದಿರು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ದಫನ ಕಾರ್ಯವು ಬುಧವಾರ ಸಂಜೆ ಪರ್ಲಡ್ಕ ಮುಹಿಯುದ್ದೀನ್ ಜುಮ್ಮಾ ಮಸೀದಿಯ ದಫನ ಭೂಮಿಯಲ್ಲಿ ನಡೆಯಿತು.
Next Story





