ಸದಾನಂದ ಆಚಾರ್ಯ

ಉಡುಪಿ, ಜು.31: ಮೂಲತಃ ಉಡುಪಿಯವರಾದ, ಮೈಸೂರಿನಲ್ಲಿ ನೆಲೆಸಿದ್ದ ಸದಾನಂದ ಆಚಾರ್ಯ (85) ಮಂಗಳವಾರ ನಿಧನರಾದರು. ಮಂಡ್ಯ, ಅಕ್ಕಿಹೆಬ್ಬಾಳ, ಕೆ.ಆರ್.ಪೇಟೆ, ಬೆಳಗೋಳಗಳಲ್ಲಿ ಹೋಟೆಲ್ ಉದ್ಯಮ ನಡೆಸಿದ್ದ ಇವರು ವೈದಿಕ ವೃತ್ತಿಯನ್ನು ಶ್ರದ್ಧೆುಂದ ನಿರ್ವಹಿಸುತ್ತಾ ಬಂದಿದ್ದರು. ಸದಾನಂದ ಆಚಾರ್ಯರು ಪುತ್ರಿ, ಇಬ್ಬರು ಪುತ್ರರು ಹಾಗೂ ಅಪಾರ ಸಂಖ್ಯೆಯ ಬಂಧುಬಾಂಧವರನ್ನು ಅಗಲಿದ್ದಾರೆ.
Next Story





