ಶಂಕರ್

ಮಂಗಳೂರು, ಮಾ.3: ನಗರದ ಬಿಜೈ ನಿವಾಸಿ, ಬೆಂಗಳೂರು ಮತ್ತು ಮಂಗಳೂರಿನಲ್ಲಿರುವ ಸೋಲಾರ್ ಆಟೋಮೊಬೈಲ್ಸ್‌ನ ಮಾಲಕ, ಮಾರುತಿ ಸುಜುಕಿಯ ಅಧಿಕೃತ ಡೀಲರ್ ಆಗಿದ್ದ ಜೆ.ಶಂಕರ್ (92) ವಯೋಸಹಜ ಅಸೌಖ್ಯದಿಂದ ಮಂಗಳವಾರ ನಿಧನರಾದರು.
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಭಿವೃದ್ಧಿ ಸಮಿತಿ ಸದಸ್ಯರಾಗಿದ್ದ ಇವರು ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದರು. ಮೂವರು ಪುತ್ರರು ಹಾಗೂ ಅಪಾರ ಬಂಧುಬಳಗವನ್ನು ಮೃತರು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಬುಧವಾರ ಬೆಳಗ್ಗೆ 10ಕ್ಕೆ ಸ್ವಗೃಹದಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
Next Story





