ಹವ್ಯಾಸಿ ಭಾಗವತ ನಿಟ್ಟೂರು ಶೀನಪ್ಪ ಸುವರ್ಣ

ಉಡುಪಿ, ನ.26: ಹವ್ಯಾಸಿ ಯಕ್ಷಗಾನ ಕ್ಷೇತ್ರದ ಪ್ರಸಿದ್ಧ ಭಾಗವತ ನಿಟ್ಟೂರು ಶೀನಪ್ಪ ಸುವರ್ಣ (79) ಬುಧವಾರ ಸ್ವಗೃಹದಲ್ಲಿ ನಿಧನ ಹೊಂದಿದರು. ಅವರು ಪತ್ನಿ, ಪುತ್ರ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ನೀಲಾವರ ರಾಮಕೃಷ್ಣಯ್ಯ ಅವರಲ್ಲಿ ಯಕ್ಷಗಾನ ಭಾಗವತಿಕೆ ಅಭ್ಯಾಸ ಮಾಡಿ ಐದು ದಶಕಗಳ ಸುಧೀರ್ಘ ಕಾಲ ಯಕ್ಷಗಾನ ಭಾಗವತರಾಗಿ ಸೇವೆಸಲ್ಲಿಸಿದ್ದರು. ಉಡುಪಿಯ ಅತ್ಯಂತ ಹಿರಿಯ ಯಕ್ಷಗಾನ ಮಂಡಳಿ ಯಕ್ಷಗಾನ ಕಲಾರಂಗದಿಂದ ಶ್ರೀವಿಶ್ವೇಶತೀರ್ಥ ಪ್ರಶಸ್ತಿಯನ್ನು ಪಡೆದು, ಯಕ್ಷಗಾನ ಕಲಾಕ್ಷೇತ್ರ ಗುಂಡಿಬೈಲು ಸಂಸ್ಥೆಯಲ್ಲಿ ಆರು ದಶಕಗಳ ಕಾಲ ಪದಾಧಿಕಾರಿಯಾಗಿ ವಿವಿಧ ಹುದ್ದೆಗಳನ್ನು ಅಲಂಕರಿಸಿ, ಆ ಸಂಸ್ಥೆಯ ಅವಿಭಾಜ್ಯ ಅಂಗವೇ ಆಗಿದ್ದರು.
ಯಕ್ಷಗಾನ ಕಲಾರಂಗದ ಆಜೀವ ಸದಸ್ಯರಾಗಿದ್ಧ ಸುವರ್ಣರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಗಾಢ ಸಂತಾಪ ವ್ಯಕ್ತಪಡಿಸಿದ್ದಾರೆ.
Next Story





