ಪೆರ್ಮುದೆ : ವೇದವ್ಯಾಸ ರಾವ್ ನಿಧನ

ಮಂಗಳೂರು: ಪೆರ್ಮುದೆ ಚಂದ್ರಹಾಸ ನಗರದ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕರಾಗಿದ್ದ ವೇದವ್ಯಾಸ ರಾವ್ ಅವರು ಅ. 2 ರಂದು ನಿಧನರಾಗಿದ್ದಾರೆ.
ಸ್ಥಳೀಯ ಪೆರ್ಮುದೆ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಧರ್ಮದರ್ಶಿಗಳಲ್ಲಿ ಒಬ್ಬರಾಗಿದ್ದರು. 2007-08ರಲ್ಲಿ ಭೂಮಿಯನ್ನು ಉಳಿಸಲು 'ಕೃಷಿ ಭೂಮಿ ಸಂರಕ್ಷಣಾ ಸಮಿತಿ' (KBSS) ರಚನೆಯಾದಾಗ, ಅದರ ಖಜಾಂಚಿಯಾಗಿದ್ದರು. 2011 ರಲ್ಲಿ ರಾಜ್ಯ ಸರಕಾರ ಭೂಸ್ವಾಧೀನತೆಯ ಅಧಿಸೂಚನೆ ಹಿಂದೆಗೆಯುವವರೆಗೂ ಹೋರಾಟದ ಮುಂಚೂಣಿಯಲ್ಲಿದ್ದರು.
2016ರಲ್ಲಿ, ಪೆರ್ಮುದೆ ಮತ್ತು ಕುತ್ತೆತ್ತೂರಿನ ಭೂಮಿಯನ್ನು ಎಮ್.ಆರ್.ಪಿ.ಎಲ್ (MRPL) ನಾಲ್ಕನೇ ಹಂತಕ್ಕಾಗಿ ಅಧಿಸೂಚಿಸಿದಾಗ, ವಯೋಸಹಜ ಸಮಸ್ಯೆಗಳು ಮತ್ತು ಕ್ಷೀಣಿಸುತ್ತಿದ್ದ ಆರೋಗ್ಯದ ನಡುವೆಯೂ, ಅವರು ಈ ಭೂಸ್ವಾಧೀನವನ್ನು ವಿರೋಧಿಸಲು ತಮ್ಮಿಂದ ಸಾಧ್ಯವಾದ ಎಲ್ಲಾ ರೀತಿಯ ಕೊಡುಗೆಯನ್ನು ನೀಡಿದ್ದಾರೆ.
ಮೃತರು ಪತ್ನಿ, ಪುತ್ರಿ ಹಾಗೂ ಇಬ್ಬರು ಪುತ್ರರನ್ನು ಅಗಲಿರುತ್ತಾರೆ.
Next Story




