ಹಳ್ಳಿ ಎಸ್.ರಾಮಚಂದ್ರ ಶಾಸ್ತ್ರಿ

ಉಡುಪಿ : ಬ್ರಹ್ಮಾವರ ತಾಲೂಕಿನ ಕೊಕ್ಕರ್ಣೆಯ ಹಳ್ಳಿಮಠದ ಎಸ್.ರಾಮಚಂದ್ರ ಶಾಸ್ತ್ರಿ (52) ಇಂದು ಮನೆಯ ಛಾವಣಿಯಿಂದ (ಮಾಡಿನಿಂದ) ಬಿದ್ದು ನಿಧನರಾದರು. ಸರಳ ವ್ಯಕ್ತಿತ್ವದ ಇವರು ಯಕ್ಷಗಾನ ಪ್ರೇಮಿಯಾಗಿದ್ದು, ಪತ್ನಿ, ಓರ್ವ ಪುತ್ರಿ, ಪುತ್ರ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಯಕ್ಷಗಾನ ಕಲಾರಂಗದ ಆಜೀವ ಸದಸ್ಯರಾಗಿದ್ದ ಇವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.
Next Story




