ಸತ್ಯವತಿ ಶೆಣೈ

ಉಡುಪಿ: ಪರ್ಕಳ ಶೆಣೈ ಕುಟುಂಬದ ದಿ.ಡಾ.ಅನಂತ ಶೆಣೈ ಅವರ ಪತ್ನಿ ಸತ್ಯವತಿ ಶೆಣೈ ಯಾನೆ ನಾರಾಯಣಿ ಶರ್ಮಾ(84) ಅಲ್ಪಕಾಲದ ಅನಾರೋಗ್ಯದಿಂದ ಉಡುಪಿ ವಳಕಾಡಿನ ಸ್ವಗೃಹದಲ್ಲಿ ನಿಧನರಾದರು.
ಅವರು ಸಿಂಡಿಕೇಟ್ ಬ್ಯಾಂಕಿನಲ್ಲಿ ಅಧಿಕಾರಿಯಾಗಿ ಮಣಿಪಾಲದ ಪ್ರಧಾನ ಕಾರ್ಯಾಲಯ ಹಾಗೂ ಉಡುಪಿ ಕ್ಷೇತ್ರೀಯ ಕಾರ್ಯಾಲಯದಲ್ಲಿ ಕಾರ್ಯ ನಿರ್ವಹಿಸಿದ್ದರು.
ಧಾರ್ಮಿಕ, ಸಮಾಜ ಸೇವೆಗಳಲ್ಲಿ ತೊಡಗಿಸಿಕೊಂಡು ಜನಾನುರಾಗಿಯಾಗಿದ್ದ ಇವರು, ಇಬ್ಬರು ಪುತ್ರರಾದ ನೇತ್ರತಜ್ಞ ಡಾ.ನರೇಂದ್ರ ಶೆಣೈ ಮತ್ತು ಉದ್ಯಮಿ ಅಮೃತ್ ಶೆಣೈ ಸೇರಿದಂತೆ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
Next Story