ಲೇಖಕಿ ವೈದೇಹಿಗೆ ಪತಿ ವಿಯೋಗ

ಮಣಿಪಾಲ: ಕನ್ನಡದ ಪ್ರಸಿದ್ಧ ಸಾಹಿತಿ ಹಾಗೂ ಲೇಖಕಿ ವೈದೇಹಿ ಅವರ ಪತಿ ಕೆ.ಎಲ್. ಶ್ರೀನಿವಾಸ ಮೂರ್ತಿ (84) ಇಂದು ಮುಂಜಾನೆ ತೀವ್ರ ಹೃದಯಾಘಾತದಿಂದ ನಿಧನರಾದರು.
ಮೂಲತಃ ಶಿವಮೊಗ್ಗದವರಾದ ಶ್ರೀನಿವಾಸ ಮೂರ್ತಿ ಅವರು ನಿವೃತ್ತಿಯ ಬಳಿಕ ಮಣಿಪಾಲದ 'ಇರುವಂತಿಗೆ' ಮನೆಯಲ್ಲಿ ವಾಸ್ತವ್ಯದಲ್ಲಿದ್ದರು.
ಅವರು ಪತ್ನಿ ಹಾಗೂ ಇಬ್ಬರು ಲೇಖಕ ಪುತ್ರಿಯರಾದ ನಯನ ಕಶ್ಯಪ್ ಹಾಗೂ ಪಲ್ಲವಿ ರಾವ್ ಅವರನ್ನು ಅಗಲಿದ್ದಾರೆ.
Next Story





