Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಅನ್ವೇಷ: ಉಡಾವಣೆಗೆ ಸಜ್ಜಾದ ರಕ್ಷಣಾ...

ಅನ್ವೇಷ: ಉಡಾವಣೆಗೆ ಸಜ್ಜಾದ ರಕ್ಷಣಾ ಉಪಗ್ರಹ

ಗಿರೀಶ್ ಲಿಂಗಣ್ಣಗಿರೀಶ್ ಲಿಂಗಣ್ಣ11 Jan 2026 11:27 AM IST
share
ಅನ್ವೇಷ: ಉಡಾವಣೆಗೆ ಸಜ್ಜಾದ ರಕ್ಷಣಾ ಉಪಗ್ರಹ

ಸೋಮವಾರ ಬೆಳಗ್ಗೆ ತಮ್ಮ ಮನೆಗಳಲ್ಲಿ ಕುಳಿತು ಉಡಾವಣೆಯನ್ನು ವೀಕ್ಷಿಸುವ ಭಾರತೀಯರ ಪಾಲಿಗೆ ಶ್ರೀಹರಿಕೋಟಾದಿಂದ ಉಡಾವಣೆಯಾಗುವುದು ಕೇವಲ ರಾಕೆಟ್ ಮಾತ್ರವಲ್ಲ. ಇದು ಭಾರತದ ತಾಂತ್ರಿಕ ಸಾಮರ್ಥ್ಯದ ಸಂಪೂರ್ಣ ಪ್ರದರ್ಶನವಾಗಿದ್ದು, ನಾಗರಿಕ ಪ್ರಯೋಜನಗಳಲ್ಲಿ ರಾಜಿ ಮಾಡಿಕೊಳ್ಳದೆ, ರಾಷ್ಟ್ರೀಯ ಭದ್ರತೆಗೆ ನಮ್ಮ ಸಮಗ್ರ ಬದ್ಧತೆಯಾಗಿದೆ. ಇದರೊಂದಿಗೆ ಜಗತ್ತಿನ ವಿವಿಧ ದೇಶಗಳಿಗೆ ಭಾರತ ನಂಬಿಕಾರ್ಹ ಬಾಹ್ಯಾಕಾಶ ಸಹಯೋಗಿ ಎನ್ನುವುದು ಮತ್ತೆ ಸಾಬೀತಾಗಲಿದೆ.

ಈಗ ಒಂದು ವಿಚಾರವನ್ನು ಕಲ್ಪಿಸಿಕೊಳ್ಳಿ: ನೀವು ಬಿಸಿಲಿಗೆ ಹಾಕಿಕೊಳ್ಳುವ ಒಂದು ಸಾಮಾನ್ಯ ತಂಪು ಕನ್ನಡಕವನ್ನು ಹಾಕಿಕೊಂಡಿದ್ದೀರಿ. ಅದು ನಿಮಗೆ ಜಗತ್ತನ್ನು ಕೇವಲ ಮೂರು ಬಣ್ಣಗಳಲ್ಲಿ ತೋರಿಸುತ್ತದೆ. ಈಗ, ಅದರ ಬದಲಿಗೆ ಒಂದು ಮ್ಯಾಜಿಕ್ ಕನ್ನಡಕವನ್ನು ಹಾಕಿಕೊಳ್ಳುವುದನ್ನು ಕಲ್ಪಿಸಿಕೊಳ್ಳಿ. ಈ ಕನ್ನಡಕ ಬರಿಗಣ್ಣಿಗೆ ಕಾಣದ, ನೂರಾರು ಅಗೋಚರ ಬಣ್ಣಗಳನ್ನು ನಿಮಗೆ ತೋರಿಸುತ್ತದೆ! ಜನವರಿ 12ರ ಸೋಮವಾರ ಬೆಳಗ್ಗೆ 10:17ಕ್ಕೆ ಭಾರತ ಇಂತಹದ್ದೇ ಒಂದು ಮ್ಯಾಜಿಕ್ ಕನ್ನಡಕದಂತಹ ಉಪಗ್ರಹವನ್ನು ಶ್ರೀಹರಿಕೋಟಾದಿಂದ ನಮ್ಮ ನಂಬಿಕಾರ್ಹ ಪಿಎಸ್‌ಎಲ್‌ವಿ ರಾಕೆಟ್ ಮೂಲಕ ಬಾಹ್ಯಾಕಾಶಕ್ಕೆ ರವಾನಿಸಲಿದೆ. ‘ಅನ್ವೇಷ’ ಎನ್ನುವ ಹೆಸರಿನ ಈ ರಾಕೆಟ್, ‘ಶೋಧಿಸು’ ಎನ್ನುವ ಅರ್ಥವನ್ನು ಹೊಂದಿದೆ.

ಕಳೆದ ವರ್ಷ ಒಂದು ಅಪರೂಪದ ಹಿನ್ನಡೆಯ ಹೊರತಾಗಿಯೂ, ಪಿಎಸ್‌ಎಲ್‌ವಿ ಇಂದಿಗೂ ಭಾರತದ ಅತ್ಯಂತ ನಂಬಿಕಾರ್ಹ ರಾಕೆಟ್ ಆಗಿದ್ದು, ಮುಂದಿನ ಸೋಮವಾರ ಬಾಹ್ಯಾಕಾಶಕ್ಕೆ ಚಿಮ್ಮಿ, ತನ್ನ ಸ್ಥಾನಮಾನ, ಸಾಮರ್ಥ್ಯವನ್ನು ಮರಳಿ ಪ್ರದರ್ಶಿಸಲು ಸಿದ್ಧವಾಗಿದೆ. 44 ಮೀಟರ್ ಎತ್ತರ, ಮತ್ತು 260 ಟನ್‌ಗಳಷ್ಟು ತೂಕ ಹೊಂದಿರುವ ಈ ರಾಕೆಟ್, ಇಲ್ಲಿಯ ತನಕ 63 ಯೋಜನೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದೆ. ಇದೇ ರಾಕೆಟ್ ಭಾರತದ ಚಂದ್ರಯಾನ ಯೋಜನೆಯನ್ನು ಚಂದ್ರನತ್ತ ಒಯ್ದಿತ್ತು. ಇದೇ ರಾಕೆಟ್ ಮೂಲಕ ಭಾರತ ಮಂಗಳಯಾನ ಯೋಜನೆಯನ್ನು ಉಡಾವಣೆಗೊಳಿಸಿತ್ತು. 2017ರಲ್ಲಿ ಇದೊಂದೇ ರಾಕೆಟ್ 104 ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಒಯ್ದು, ದಾಖಲೆ ನಿರ್ಮಿಸಿತ್ತು. ಇದೇ ಸೋಮವಾರ ನಡೆಯಲಿರುವ ಉಡಾವಣೆಗೆ ಪಿಎಸ್‌ಎಲ್‌ವಿ-ಸಿ62 ಎಂದು ಹೆಸರಿಡಲಾಗಿದ್ದು, ಇದು ರಾಕೆಟ್‌ನ 64ನೇ ಬಾಹ್ಯಾಕಾಶ ಯಾತ್ರೆಯಾಗಿದೆ. ಈ ಬಾರಿ ರಾಕೆಟ್ ಕೇವಲ ಅನ್ವೇಷ ಉಪಗ್ರಹ ಒಂದನ್ನು ಮಾತ್ರವಲ್ಲದೆ, ಭಾರತ, ಬ್ರೆಝಿಲ್, ಯುಕೆ, ಥಾಯ್ಲೆಂಡ್, ನೇಪಾಳ, ಸ್ಪೇನ್ ಮತ್ತು ಫ್ರಾನ್ಸ್ ಗಳ 15 ಉಪಗ್ರಹಗಳನ್ನೂ ಒಯ್ಯಲಿದ್ದು, ನಿಜಕ್ಕೂ ಇದೊಂದು ಜಾಗತಿಕ ಮಟ್ಟದ ಬಾಹ್ಯಾಕಾಶ ಉಡಾವಣೆ ಎನಿಸಲಿದೆ.

ಆದರೆ, ಅನ್ವೇಷ ಯೋಜನೆಯನ್ನು ನಿಜಕ್ಕೂ ವಿಶೇಷವಾಗಿಸುವುದು ಏನು? ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿ ಪಡಿಸಿರುವ ಈ ಉಪಗ್ರಹ ಬಾಹ್ಯಾಕಾಶದಲ್ಲಿರುವ ಯಾವುದೋ ಸಾಮಾನ್ಯ ಕ್ಯಾಮರಾ ರೀತಿಯದಲ್ಲ. ಇದು ‘ಹೈಪರ್ ಸ್ಪೆಕ್ಟ್ರಲ್ ಇಮೇಜಿಂಗ್’ ಎನ್ನುವ ವಿಶಿಷ್ಟ ತಂತ್ರಜ್ಞಾನವನ್ನು ಬಳಸುತ್ತದೆ. ಮೂರು ಮೂಲ ಬಣ್ಣಗಳನ್ನು ಮಾತ್ರ ಸೆರೆಹಿಡಿಯುವ ನಿಮ್ಮ ಸ್ಮಾರ್ಟ್ ಫೋನ್ ಕ್ಯಾಮರಾವನ್ನು ಒಮ್ಮೆ ಕಲ್ಪಿಸಿ. ಇದಕ್ಕೆ ಹೋಲಿಸಿದರೆ, ಅನ್ವೇಷ ಬೆಳಕಿನ ನೂರಾರು ತರಂಗಾಂತರಗಳನ್ನು, ಅದರಲ್ಲೂ ಮಾನವರ ಕಣ್ಣಿಗೆ ಕಾಣಿಸದ ಅತಿಗೆಂಪು (ಇನ್‌ಫ್ರಾರೆಡ್) ಮತ್ತು ನೇರಳಾತೀತ (ಅಲ್ಟ್ರಾವಯೊಲೆಟ್) ಬೆಳಕನ್ನೂ ಸೆರೆಹಿಡಿಯುತ್ತದೆ. ಮಣ್ಣು, ನೀರು, ಕಾಂಕ್ರಿಟ್, ಸಸ್ಯಗಳು, ಮಿಲಿಟರಿ ಉಪಕರಣಗಳು ಸೇರಿದಂತೆ, ಭೂಮಿಯಲ್ಲಿರುವ ಪ್ರತಿಯೊಂದು ವಸ್ತುವೂ ಬೆಳಕನ್ನು ಈ ವಿಭಿನ್ನವಾಗಿ, ಈ ನೂರಾರು ತರಂಗಾಂತರಗಳಲ್ಲಿ ಪ್ರತಿಫಲಿಸುತ್ತದೆ. ಇದು ಒಂದು ರೀತಿಯಲ್ಲಿ ಪ್ರತಿಯೊಂದು ವಸ್ತುವೂ ತನ್ನದೇ ಆದ, ಬೆಳಕಿನಿಂದ ಮಾಡಿದ ಬೆರಳಚ್ಚು ಹೊಂದಿರುವಂತಾಗುತ್ತದೆ.

ಇದು ಅನ್ವೇಷ ಉಪಗ್ರಹಕ್ಕೆ ಮಾನವಾತೀತ ನೋಟವನ್ನು ಒದಗಿಸುತ್ತದೆ. ಕಾಡಿನಲ್ಲಿ ಯಾರಾದರೂ ಮರೆಮಾಚುವ ವಸ್ತ್ರವನ್ನು (ಕ್ಯಾಮಫ್ಲೇಜ್) ಧರಿಸಿ ಅವಿತಿರುವುದನ್ನು ಊಹಿಸಿ. ನಮ್ಮ ಕಣ್ಣುಗಳಿಂದ ಅವರು ಸಂಪೂರ್ಣವಾಗಿ ತಪ್ಪಿಸಿಕೊಳ್ಳಬಹುದು. ಆದರೆ, ಅನ್ವೇಷ ನೈಜ ಎಲೆಗಳು ಮತ್ತು ಎಲೆಗಳ ಬಣ್ಣದಲ್ಲಿ ಕಾಣುವ ಕೃತಕ ವೇಷದ ನಡುವಿನ ವ್ಯತ್ಯಾಸ ಸ್ಪಷ್ಟವಾಗಿ ಗುರುತಿಸಬಲ್ಲದು. ಇದು ಆರೋಗ್ಯಕರ ಸಸ್ಯಗಳು ಮತ್ತು ಒಣಗುವಂತಾದ ಸಸ್ಯಗಳ ವ್ಯತ್ಯಾಸವನ್ನೂ ಗುರುತಿಸಬಲ್ಲದು, ಶುದ್ಧ ನೀರು ಮತ್ತು ಮಲಿನ ನೀರನ್ನು ಪತ್ತೆಹಚ್ಚಬಲ್ಲದು, ನೈಸರ್ಗಿಕ ಹುಲ್ಲು ಮತ್ತು ಕೃತಕ ಟರ್ಫ್ ನಡುವಿನ ವ್ಯತ್ಯಾಸ ಕಂಡುಹಿಡಿಯಬಲ್ಲದು. ಎಲ್ಲಕ್ಕಿಂತ ಮುಖ್ಯವಾಗಿ ಇದು ಮಿಲಿಟರಿ ಉಪಕರಣಗಳು, ವಾಹನಗಳನ್ನು ಉದ್ದೇಶಪೂರ್ವಕವಾಗಿ ಬಚ್ಚಿಟ್ಟಾಗಲೂ, ಅವುಗಳು ಮತ್ತು ನಾಗರಿಕ ವಾಹನಗಳ ನಡುವಿನ ವ್ಯತ್ಯಾಸ ಕಂಡುಹಿಡಿಯಬಲ್ಲವು.

ಅತ್ಯಂತ ಸುದೀರ್ಘವಾದ, ಕಷ್ಟಕರ ಗಡಿಗಳನ್ನು ಹೊಂದಿರುವ ಭಾರತದಂತಹ ದೇಶಕ್ಕೆ ಈ ಉಪಗ್ರಹ ನಿಜಕ್ಕೂ ಗೇಮ್ ಚೇಂಜರ್. ಲಡಾಖ್ ಅಥವಾ ಕಾಶ್ಮೀರದ ಕಷ್ಟಕರ ಪ್ರದೇಶಗಳಲ್ಲಿ ನೆಲೆಸಿರುವ ನಮ್ಮ ಸೇನಾಪಡೆಗಳಿಗೆ ಅನ್ವೇಷದ ಕಣ್ಣುಗಳು ಯಾವುದೇ ಜೀವಾಪಾಯ ಉಂಟಾಗದ ರೀತಿಯಲ್ಲಿ ನಿರಂತರವಾಗಿ ಕಣ್ಗಾವಲು ಒದಗಿಸಲಿವೆ. ಒಂದು ವೇಳೆ ಯಾರಾದರೂ ಶತ್ರುಗಳು ಗಡಿ ಪ್ರದೇಶಗಳಲ್ಲಿ ಹೊಸ ರಸ್ತೆ, ಸೇತುವೆ ಅಥವಾ ಬಂಕರ್ ನಿರ್ಮಿಸಿದರೆ, ಅದನ್ನೂ ಅನ್ವೇಷ ಗುರುತಿಸಬಲ್ಲದು. ಇನ್ನು ಉದ್ವಿಗ್ನ ಸಂದರ್ಭಗಳಲ್ಲಿ, ಇದು ನೀಡಬಲ್ಲ ಆರಂಭಿಕ ಎಚ್ಚರಿಕೆಗಳಿಂದಾಗಿ, ನಮ್ಮ ರಕ್ಷಣಾ ಯೋಜಕರಿಗೆ ಸರಿಯಾಗಿ ಪ್ರತಿಕ್ರಿಯೆ ನೀಡಲು ಸೂಕ್ತ ಸಮಯಾವಕಾಶ ಲಭಿಸುತ್ತದೆ. ಇದು ಅನಧಿಕೃತ ಗಡಿ ದಾಟುವ ಪ್ರದೇಶಗಳಲ್ಲಿ ಅಕ್ರಮ ಕಳ್ಳ ಸಾಗಣೆಗಳನ್ನೂ ಗುರುತಿಸಬಲ್ಲದು.

ಹಾಗೆಂದು ಅನ್ವೇಷ ಕೇವಲ ಮಿಲಿಟರಿ ಬಳಕೆಗೆ ಮಾತ್ರವೇ ಸೀಮಿತವಾಗಿಲ್ಲ. ಇದರ ಮಾಹಿತಿಗಳನ್ನು ಅಧ್ಯಯನ ಮಾಡುವ ಮೂಲಕ, ರೈತರು ಬರಿಗಣ್ಣಿಗೆ ಸಮಸ್ಯೆ ಕಾಣಿಸುವ ಮುನ್ನವೇ ಬೆಳೆ ಆರೋಗ್ಯದ ಬಗ್ಗೆ ತಿಳಿಯಲು ಸಾಧ್ಯ. ನಗರ ಯೋಜಕರು ನಗರಗಳನ್ನು ಉತ್ತಮವಾಗಿ ಯೋಜಿಸಲು ಸಾಧ್ಯವಾಗುತ್ತದೆ. ಇನ್ನು ಪರಿಸರ ವಿಜ್ಞಾನಿಗಳಿಗೆ ಇದರಿಂದ ಅರಣ್ಯ ವೀಕ್ಷಣೆ, ನೀರಿನ ಸಂಪನ್ಮೂಲಗಳು ಮತ್ತು ಖನಿಜ ಸಂಪನ್ಮೂಲಗಳನ್ನು ಗಮನಿಸಲು ಸಾಧ್ಯವಾಗುತ್ತದೆ. ವಿಪತ್ತು ನಿರ್ವಹಣಾ ತಂಡಗಳಿಗೆ ಪ್ರವಾಹ ಅಥವಾ ಭೂಕಂಪಗಳಿಂದ ಉಂಟಾದ ಹಾನಿಯ ಪ್ರಮಾಣವನ್ನು ಅಳೆಯಲು ಇದರಿಂದ ಸಾಧ್ಯವಾಗುತ್ತದೆ. ಈ ಒಂದೇ ಉಪಗ್ರಹ ಭಾರತದ ರಾಷ್ಟ್ರೀಯ ಭದ್ರತೆ ಮತ್ತು ನಾಗರಿಕ ಪ್ರಗತಿ ಎರಡಕ್ಕೂ ಕೊಡುಗೆ ನೀಡಬಲ್ಲದು.

ಸೋಮವಾರದ ಉಡಾವಣಾ ಯೋಜನೆಯೇ ಅತ್ಯಂತ ಆಸಕ್ತಿಕರವಾಗಿದೆ. ಭೂಮಿಯಿಂದ ಉಡಾವಣೆಗೊಂಡ ಬಳಿಕ, ಈ ರಾಕೆಟ್ ಭೂಮಿಯಿಂದ 511 ಕಿಲೋಮೀಟರ್‌ಗಳಷ್ಟು ಎತ್ತರಕ್ಕೆ ಹಾರಲಿದೆ. ಹಾರಾಟ ಆರಂಭಿಸಿ 18 ನಿಮಿಷಗಳ ಬಳಿಕ, ರಾಕೆಟ್ ಬಾಹ್ಯಾಕಾಶದಲ್ಲಿ ಪ್ರತೀ ಗಂಟೆಗೆ 27,400 ಕಿಲೋಮೀಟರ್ ವೇಗದಲ್ಲಿ ಸಾಗುವಾಗ ಅನ್ವೇಷ ಮೊದಲಿಗೆ ರಾಕೆಟ್‌ನಿಂದ ಬೇರ್ಪಡಲಿದೆ. ಬಳಿಕ, ಒಂದರ ನಂತರ ಒಂದರಂತೆ ಎಲ್ಲಾ ಉಪಗ್ರಹಗಳು ನಿಯೋಜನೆಗೊಳ್ಳಲಿವೆ. ಕೊನೆಯದಾಗಿ ಬಿಡುಗಡೆಗೊಳ್ಳುವ ಪ್ರಯಾಣಿಕ ಮಾತ್ರ ವಿಭಿನ್ನವಾಗಿದೆ! ಇದೊಂದು ಸ್ಪ್ಯಾನಿಷ್ ಕ್ಯಾಪ್ಸೂಲ್ ಆಗಿದ್ದು, ಕಿಡ್ (ಏIಆ) ಎನ್ನುವ ಹೆಸರು ಹೊಂದಿದೆ. ಇದು ಭೂಮಿಗೆ ಮರು ಪ್ರವೇಶ ನಡೆಸುವ ತಂತ್ರಜ್ಞಾನದ ಪರೀಕ್ಷೆ ನಡೆಸಲಿದ್ದು, ಬಾಹ್ಯಾಕಾಶದಿಂದ ಬೇರ್ಪಟ್ಟ ಬಳಿಕ, ದಕ್ಷಿಣ ಪೆಸಿಫಿಕ್ ಸಾಗರದಲ್ಲಿ ಇಳಿಯಲಿದೆ. ಉಡಾವಣೆಯಿಂದ, ಅಂತಿಮ ಬೇರ್ಪಡುವಿಕೆಯ ತನಕದ ಈ ಸಂಪೂರ್ಣ ಯೋಜನೆ ಒಟ್ಟು 108 ನಿಮಿಷಗಳನ್ನು ತೆಗೆದುಕೊಳ್ಳಲಿದೆ.

ಈ ಯೋಜನೆಯಲ್ಲಿರುವ ಭಾರತೀಯ ಉಪಗ್ರಹಗಳ ಪೈಕಿ ಒಂದಾದ ಆಯುಲ್‌ಸ್ಯಾಟ್ ಅನ್ನು ಆರ್ಬಿಟ್ ಏಯ್ಡ್ ಸಂಸ್ಥೆ ಅಭಿವೃದ್ಧಿ ಪಡಿಸಿದ್ದು, ಇದು ಬಾಹ್ಯಾಕಾಶದಲ್ಲಿ ಉಪಗ್ರಹಗಳಿಗೆ ಇಂಧನ ಮರುಪೂರಣ ನಡೆಸುವ ತಂತ್ರಜ್ಞಾನವನ್ನು ಪರೀಕ್ಷಿಸಲಿದೆ. ಈ ತಂತ್ರಜ್ಞಾನ ಬಾಹ್ಯಾಕಾಶದಲ್ಲಿ ಉಪಗ್ರಹಗಳ ಜೀವಿತಾವಧಿಯನ್ನು ಗಣನೀಯವಾಗಿ ಹೆಚ್ಚಿಸಲಿದೆ. ಇನ್ನೊಂದು ಯೋಜನೆ ಧ್ರುವ ಸ್ಪೇಸ್ ಸಂಸ್ಥೆಯ ಎಂಒಐ-1 ಆಗಿದ್ದು, ಇದು ಆಧುನಿಕ ಕೃತಕ ಬುದ್ಧಿಮತ್ತೆಯ ಕಾರ್ಯಕ್ರಮಗಳು ಭೂಮಿಯ ಬದಲು ನೇರವಾಗಿ ಉಪಗ್ರಹದಲ್ಲಿ ಕಾರ್ಯಾಚರಿಸುವಂತೆ ಮಾಡಲಿದೆ. ಲಚಿತ್ ಮತ್ತು ಥೈಬೋಲ್ಟ್-3 ಉಪಗ್ರಹಗಳು ಬಾಹ್ಯಾಕಾಶದಲ್ಲಿರುವ ಉಪಗ್ರಹ ಗುಂಪುಗಳು ಹೇಗೆ ಜೊತೆಯಾಗಿ ಕಾರ್ಯಾಚರಿಸಿ, ಏಕಕಾಲದಲ್ಲಿ ಹಲವು ಬಳಕೆದಾರರಿಗೆ ಸೇವೆ ಸಲ್ಲಿಸಬಹುದು ಎನ್ನುವುದನ್ನು ಪರೀಕ್ಷಿಸಲಿವೆ.

ಸೋಮವಾರ ಬೆಳಗ್ಗೆ ತಮ್ಮ ಮನೆಗಳಲ್ಲಿ ಕುಳಿತು ಉಡಾವಣೆಯನ್ನು ವೀಕ್ಷಿಸುವ ಭಾರತೀಯರ ಪಾಲಿಗೆ ಶ್ರೀಹರಿಕೋಟಾದಿಂದ ಉಡಾವಣೆಯಾಗುವುದು ಕೇವಲ ರಾಕೆಟ್ ಮಾತ್ರವಲ್ಲ. ಇದು ಭಾರತದ ತಾಂತ್ರಿಕ ಸಾಮರ್ಥ್ಯದ ಸಂಪೂರ್ಣ ಪ್ರದರ್ಶನವಾಗಿದ್ದು, ನಾಗರಿಕ ಪ್ರಯೋಜನಗಳಲ್ಲಿ ರಾಜಿ ಮಾಡಿಕೊಳ್ಳದೆ, ರಾಷ್ಟ್ರೀಯ ಭದ್ರತೆಗೆ ನಮ್ಮ ಸಮಗ್ರ ಬದ್ಧತೆಯಾಗಿದೆ. ಇದರೊಂದಿಗೆ ಜಗತ್ತಿನ ವಿವಿಧ ದೇಶಗಳಿಗೆ ಭಾರತ ನಂಬಿಕಾರ್ಹ ಬಾಹ್ಯಾಕಾಶ ಸಹಯೋಗಿ ಎನ್ನುವುದು ಮತ್ತೆ ಸಾಬೀತಾಗಲಿದೆ. ಚಂದ್ರನಿಂದ ಮಂಗಳನ ತನಕ, ಭೂ ವೀಕ್ಷಣೆಯಿಂದ ಸಂಚರಣೆಯ ತನಕ (ನ್ಯಾವಿಗೇಶನ್), ಭಾರತದ ಬಾಹ್ಯಾಕಾಶ ಕಥೆ ದಿನೇ ದಿನೇ ವಿಸ್ತರಿಸುತ್ತಾ ಸಾಗುತ್ತಿದೆ. ಈ ಸೋಮವಾರ, ಅನ್ವೇಷ ಬಾಹ್ಯಾಕಾಶದಿಂದ ತನ್ನ ಮಾನವಾತೀತ ಕಣ್ಣುಗಳನ್ನು ತೆರೆದಾಗ, ನಾವು ಭಾರತದ ಬಾಹ್ಯಾಕಾಶ ಕಥನದಲ್ಲಿ ಹೊಸದೊಂದು ಅಧ್ಯಾಯವನ್ನು ಬರೆಯಲಿದ್ದೇವೆ.

ಅನ್ವೇಷ ಉಡಾವಣೆಗೆ ಕೌಂಟ್‌ಡೌನ್ ಆರಂಭಗೊಂಡಿದೆ. ಬಾಹ್ಯಾಕಾಶದ ಕುರಿತು ಭಾರತದ ಅನ್ವೇಷಣೆ ಇನ್ನೂ ಮುಂದುವರಿದಿದೆ.

Tags

Defence satellitelaunch
share
ಗಿರೀಶ್ ಲಿಂಗಣ್ಣ
ಗಿರೀಶ್ ಲಿಂಗಣ್ಣ

ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

Next Story
X