Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಚಾರಣಿಗರ ಮೆಚ್ಚಿನ ತಾಣ ದೇವರಾಯನ ದುರ್ಗ

ಚಾರಣಿಗರ ಮೆಚ್ಚಿನ ತಾಣ ದೇವರಾಯನ ದುರ್ಗ

ರಂಗರಾಜು ತುಮಕೂರುರಂಗರಾಜು ತುಮಕೂರು5 Jan 2026 2:07 PM IST
share
ಚಾರಣಿಗರ ಮೆಚ್ಚಿನ ತಾಣ ದೇವರಾಯನ ದುರ್ಗ

ತುಮಕೂರು: ತುಮಕೂರು ಜಿಲ್ಲೆ ಗಿರಿ ಕಂದರಗಳನ್ನು ಒಳಗೊಂಡ ಜಿಲ್ಲೆ. ಸಿದ್ದಗಂಗೆ, ಶ್ರೀರಾಮದೇವರ ಬೆಟ್ಟ, ಬೀರನಕಲ್ಲು ರಂಗನಾಥಸ್ವಾಮಿ ಬೆಟ್ಟ, ಜೈನರ ಪವಿತ್ರ ಸ್ಥಳ ಮಂದರಗಿರಿ ಹಾಗೂ ದೇವರಾಯನದುರ್ಗ ನಗರ ಕೂಗಳತೆ ದೂರದಲ್ಲಿರುವ ಬೆಟ್ಟಗಳು, ಇವುಗಳಲ್ಲಿ ಹಲವಾರು ವರ್ಷಗಳಿಂದ ಚಾರಣಿಗರ ಮೆಚ್ಚಿನ ತಾಣವಾಗಿದೆ ದೇವರಾಯನದುರ್ಗ.

ದೇವರಾಯನದುರ್ಗ ತುಮಕೂರಿನಿಂದ 16 ಕಿ.ಮೀ. ದೂರದಲ್ಲಿದೆ. ತುಮಕೂರಿನಿಂದ 10 ಕಿ.ಮೀ. ದಾಟಿದರೆ, ದೇವರಾಯನದುರ್ಗ ಕಾಡು ಗೋಚರಿಸುತ್ತದೆ. ಈ ಜಾಗ ಒಂದು ದಿನದ ಪ್ರವಾಸಕ್ಕೆ ಯೋಗ್ಯವಾದ ಸ್ಥಳ. ಈ ಬೆಟ್ಟದ ಮೂರು ವಿಭಿನ್ನ ಎತ್ತರಗಳಲ್ಲಿ ಭೋಗ ನರಸಿಂಹ, ಯೋಗನರಸಿಂಹ ಮತ್ತು ಲಕ್ಷ್ಮೀನರಸಿಂಹ ಎಂಬ ಮೂರು ದೇವಾಲಯಗಳಿವೆ. ಭೋಗನರಸಿಂಹ ದೇವಾಲಯವು ಬೆಟ್ಟದ ಬುಡದಲ್ಲಿದೆ. ಯೋಗನರಸಿಂಹ ದೇವಾಲಯವು ಬೆಟ್ಟದ ತುದಿಯಲ್ಲಿ ಇದೆ. ಲಕ್ಷ್ಮೀನರಸಿಂಹ ದೇವಾಲಯವು ಬೆಟ್ಟದ ಮೊದಲ ಭಾಗದಲ್ಲಿ ಕಂಡು ಬರುತ್ತದೆ.

ಬೆಟ್ಟದ ಕೆಳ ಭಾಗದಲ್ಲಿ ನಾಮದ ಚಿಲುಮೆ ಎಂಬ ಐತಿಹಾಸಿಕ ಸ್ಥಳವಿದ್ದು, ಶ್ರೀರಾಮ ವನವಾಸ ಕಾಲದಲ್ಲಿ ಬೆಳಗಿನ ಪೂಜೆಗೆ ಹಣೆಗೆ ತಿಲಕವಿಡಲು ನೀರಿಲ್ಲದೆ, ಬಂಡೆಗೆ ಬಾಣ ಬಿಟ್ಟು ನೀರು ತೆಗದ ಎಂದು ಹೇಳಲಾಗುತ್ತದೆ. ಅಲ್ಲದೆ ಶಿಂಷಾ, ಸುವರ್ಣಮುಖಿ ಸಹಿತ ಐದು ನದಿಗಳ ಉಗಮ ಸ್ಥಾನ ದೇವರಾಯನದುರ್ಗ ಬೆಟ್ಟವಾಗಿದೆ. ತುಮಕೂರು ಜಿಲ್ಲೆಯ ನಂದಿ ಹಿಲ್ಸ್ ಎಂದೇ ದೇವರಾಯನದುರ್ಗವನ್ನು ಕರೆಯಲಾಗುತ್ತದೆ. ಸಮುದ್ರ ಮಟ್ಟಕ್ಕಿಂತ ಸುಮಾರು 3,000 ಅಡಿಗಳ ಎತ್ತರವಿರುವ ಬೆಟ್ಟವನ್ನು ರಸ್ತೆ ಮಾರ್ಗವಲ್ಲದೆ, ಬೆಟ್ಟದ ನಾಲ್ಕು ದಿಕ್ಕುಗಳಿಂದಲೂ ಚಾರಣದ ಮೂಲಕ ಹತ್ತಲು ಅವಕಾಶವಿದೆ. ತೀರ ಕಡಿದಾದ ಬಂಡೆಯಿಲ್ಲದ ಕಾರಣ ಬೆಟ್ಟವನ್ನು ವಯೋವೃದ್ಧರನ್ನು ಹೊರತು ಪಡಿಸಿ, ಉಳಿದವರು ಸರಾಗವಾಗಿ ಹತ್ತಬಹುದು. ಪ್ರತೀ ದಿನ ಬೆಳಗ್ಗೆ ತುಮಕೂರಿನಿಂದ ದೇವರಾಯನದುರ್ಗವರೆಗೆ ಸೈಕಲಿಂಗ್ ಮಾಡುವ ಯುವಕರ ದಂಡೇ ಇದೆ. ಅಲ್ಲದೆ ಎನ್‌ಸಿಸಿ ವಿದ್ಯಾರ್ಥಿಗಳು ತಮ್ಮ ದೈಹಿಕ ಶ್ರಮ ಮತ್ತು ವಾರ್ಷಿಕ ಚಟುವಟಿಕೆಗಳಿಗಾಗಿ ದೇವರಾಯನದುರ್ಗವನ್ನು ಬಳಸುವುದು ಉಂಟು. ಅಲ್ಲದೆ ಪ್ರತೀ ವಾರದ ಕೊನೆಯಲ್ಲಿ ಬದಲಾವಣೆ ಬಯಸುವ ವಾಯು ವಿಹಾರಿಗಳು ದೇವರಾಯನದುರ್ಗ ಬೆಟ್ಟವನ್ನು ರಸ್ತೆಯ ಮೂಲಕ ಕಾಲ್ನ್ನಡಿಗೆಯಲ್ಲಿ ಹತ್ತುವುದನ್ನು ನೋಡಬಹುದು. ಪೂರ್ವದಿಂದ ಉರ್ಡಿಗೆರೆ ಭಾಗದಿಂದ, ಪಶ್ಚಿಮದಲ್ಲಿ ರಸ್ತೆ ಮೂಲಕ, ಉತ್ತರದಿಂದಿಂದ ದುರ್ಗದಹಳ್ಳಿಯ ಹಳೆಕೋಟೆ ಭಾಗದಿಂದ ಬೆಟ್ಟವನ್ನು ಹತ್ತಬಹುದು.

ಹತ್ತಿರದಲ್ಲೇ ದುರ್ಗದಹಳ್ಳಿ ಎಂಬ ಹಳ್ಳಿಯಲ್ಲಿ 8ನೇ ಶತಮಾನದ ಶಂಕರಾಚಾರ್ಯರು ಕಟ್ಟಿರುವ ಸುಂದರವಾದ ದೇವಾಲಯವಿದೆ. ಹಾಗೆಯೇ ಸಮೀಪದಲ್ಲಿ ನಾಯಕನ ಕೆರೆ ಎಂಬ ಸುಂದರ ಮತ್ತು ಮನೋಹರವಾದ ಕೆರೆ ಇದೆ. ದೇವರಾಯನ ದುರ್ಗದ ಕಾಡಿನಲ್ಲಿ ಚಿರತೆ, ಕಾಡು ಹಂದಿ, ಮುಳ್ಳು ಹಂದಿ, ಜಿಂಕೆ ಮುಂತಾದ ಪ್ರಾಣಿಗಳು ಕಂಡು ಬರುತ್ತವೆ. ಆದರೆ ಇದು ಅಭಯಾರಣ್ಯವಲ್ಲದಿದ್ದರಿಂದ ಕಾಣಲು ಸಿಗುವುದು ಅಪರೂಪ.ಇತ್ತೀಚಿನ ವರದಿ ಪ್ರಕಾರ ದೇವರಾಯನ ದುರ್ಗದಲ್ಲಿ ಹುಲಿ ಕೂಡ ಪತ್ತೆಯಾಗಿದೆ.

ದುರ್ಗದ ಮೇಲೆ ಸರಕಾರದ ಪ್ರವಾಸಿ ಬಂಗಲೆಗಳಿವೆ. ಜಿಲ್ಲೆಯ ಪೊಲೀಸ್ ನಿಸ್ತಂತು ಜಾಲದ ನಿಯಂತ್ರಣ ಕೇಂದ್ರವೂ ಸಹ ಇದೆ. ಬೆಟ್ಟದ ತುದಿಯಿಂದ ನಿಂತು ನೋಡಿದರೆ ಸುಮಾರು 25 ಕಿ.ಮೀ. ದೂರದಲ್ಲಿರುವ ಶಿವಗಂಗೆ ಬೆಟ್ಟ ಕಾಣುತ್ತದೆ. ಸುತ್ತಲೂ ಹತ್ತಾರು ಕೆರೆಗಳು ನೀರಿನಿಂದ ತುಂಬಿರುವುದೂ ಸಹ ಗೋಚರಿಸುತ್ತದೆ.ಚಳಿಗಾಲದಲ್ಲಿ ಬೀಳುವ ಮಂಜು ಊಟಿಯಂತಹ ಅಹ್ಲಾದಕರ ಅನುಭವವನ್ನು ನೀಡುತ್ತದೆ.

ಹಳೆಯ ಮೈಸೂರು ಪ್ರಾಂತಕ್ಕೆ ಸೇರಿದ ತುಮಕೂರು ಜಿಲ್ಲೆಗೆ ಮೈಸೂರು ಮಹಾರಾಜರು ಆಗಮಿಸುವ ವೇಳೆ ರಾಜರ ಆಗಮನ ತಿಳಿಸಲು, ಇಲ್ಲವೇ ರಾಜರ ಆದೇಶಗಳನ್ನು ಶಬ್ದ ರೂಪದಲ್ಲಿ ತಿಳಿಸಲು ಅಲ್ಲಲ್ಲಿ ತಮಟೆಗಳನ್ನು ನುಡಿಸಲಾಗುತ್ತಿತ್ತು. ಅಂತಹ ತಮಟೆ ನುಡಿಸುವ ಸ್ಥಳವೇ, ತಮಟೆಯೂರಾಗಿ, ತುಮಕೂರಿನ ರೂಪ ಪಡೆಯಿತು ಎಂಬುದನ್ನು ಇತಿಹಾಸಕಾರರ ಗುರುತಿಸುತ್ತಿದ್ದಾರೆ. ತಮಟೆ ನುಡಿಸುವ ಸ್ಥಳಗಳಲ್ಲಿ ದೇವರಾಯನದುರ್ಗವೂ ಒಂದು. ದುರ್ಗದ ಹಳ್ಳಿಯ ಹಳೆಕೋಟೆ ಕಡೆಯಿಂದ ಬೆಟ್ಟ ಹತ್ತುವಾಗ ಕೋಟೆಯ ಅವಶೇಷಗಳಿದ್ದು,ಕೆಲವು ಕಡೆಗಳಲ್ಲಿ ಶಿಥಿಲಗೊಂಡಿರುವುದನ್ನು ಕಾಣಬಹುದು.

ದೇವರಾಯನದುರ್ಗ ಕಾಡಿನಲ್ಲಿ ಅಪರೂಪದ ಔಷಧಿ ಸಸ್ಯಗಳನ್ನು ಕಾಣಬಹುದು. ತುಮಕೂರು ಅರಣ್ಯ ಅಧಿಕಾರಿಯಾಗಿದ್ದ ಗಾ.ನಂ.ಶ್ರೀಕಂಠಯ್ಯ ಅವರು, ಬೆಟ್ಟದ ಕೆಳ ಭಾಗದಲ್ಲಿರುವ ನಾಮದ ಚಿಲುಮೆ ಪಕ್ಕದಲ್ಲಿಯೇ ಸುಮಾರು 10 ಎಕರೆ ಪ್ರದೇಶದಲ್ಲಿ ಔಷಧಿ ವನ ಬೆಳೆಸಿದ್ದರು. ಆದರೆ, ನಿರ್ವಹಣೆ ಕೊರತೆಯಿಂದ ಹೇಳ ಹೆಸರಿಲ್ಲದಂತಾಗಿದೆ. ಕೃಷ್ಣಮೃಗಗಳು ಮತ್ತು ಜಿಂಕೆ ವನವೂ ಇದ್ದು, ಅಪರೂಪಕ್ಕೆ ಕರಡಿ, ಚಿರತೆ, ಹುಲಿಯಂತಹ ಕಾಡು ಪ್ರಾಣಿಗಳು ಕಾಣಿಸಿಕೊಂಡಿವೆ.

ದೇವರಾಯನದುರ್ಗ ಚಾರಣಿಗರಿಗೆ ಉತ್ತಮ ಪ್ರದೇಶ. ಬೆಟ್ಟವನ್ನು ನಮ್ಮ ಎನ್‌ಸಿಸಿ ಕೆಡೆಟ್‌ಗಳ ದೈಹಿಕ ಚಟುವಟಿಕೆಯ ಭಾಗವಾಗಿ ಹಲವಾರು ಬಾರಿ ಹತ್ತಿದ್ದೇವೆ. ಆದರೆ ದುರ್ಗದಹಳ್ಳಿಯ ಹಳೆಯ ಕೋಟೆ ಭಾಗದಿಂದ ಹತ್ತಿದಾಗ ಸಿಗುವ ಬೆಟ್ಟದ ವಿಹಂಗಮ ನೋಟ, ಬೇರೆಡೆಯಿಂದ ಸಿಗುವುದಿಲ್ಲ. ಈ ಭಾಗದಿಂದ ಬೆಟ್ಟ ಹತ್ತುವಾಗ ಅಲ್ಲಲ್ಲಿ ಶಿಥಿಲಗೊಂಡಿರುವ ಹಳೆಯ ಕೋಟೆಯ ಭಾಗ ಹಾಗೂ ಕೆಲ ಶಿಲಾ ಶಾಸನಗಳನ್ನು ಕಾಣಬಹುದು. ಪುರಾತತ್ವ ಇಲಾಖೆ ಶಿಥಿಲಗೊಂಡಿರುವ ಭಾಗವನ್ನು ದುರಸ್ತಿ ಮಾಡಿದರೆ ಇನ್ನೂ ಹತ್ತಾರು ವರ್ಷ ಪ್ರವಾಸಿಗರ ನೋಟಕ್ಕೆ ಲಭ್ಯವಾಗಲಿದೆ.

-ಕ್ಯಾಪ್ಟನ್ ಪ್ರದೀಪ್ ಕುಮಾರ್, ಎನ್‌ಸಿಸಿ ಅಧಿಕಾರಿ

share
ರಂಗರಾಜು ತುಮಕೂರು
ರಂಗರಾಜು ತುಮಕೂರು
Next Story
X