ಸಚಿವ ಪ್ರಿಯಾಂಕ್ ಖರ್ಗೆಗೆ ಬೆದರಿಕೆ | ಆರೆಸ್ಸೆಸ್ ವಿರುದ್ದ ಹುಬ್ಬಳ್ಳಿಯಲ್ಲಿ ಯೂತ್ ಕಾಂಗ್ರೆಸ್ ಪ್ರತಿಭಟನೆ

ಹುಬ್ಬಳ್ಳಿ : ಸಚಿವ ಪ್ರಿಯಾಂಕ್ ಖರ್ಗೆಯವರಿಗೆ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಆರೆಸ್ಸೆಸ್ ವಿರುದ್ಧ ಯೂತ್ ಕಾಂಗ್ರೆಸ್ ಕಾರ್ಯಕರ್ತರು ನಗರದ ಗೋಕುಲ ರಸ್ತೆಯಲ್ಲಿ ಶನಿವಾರ ಪ್ರತಿಭಟನೆ ನಡೆಸಿದ ಘಟನೆ ವರದಿಯಾಗಿದೆ.
ಯೂತ್ ಕಾಂಗ್ರೆಸ್ ಅಧ್ಯಕ್ಷ ಅರ್ಜುನ್ ಪಾಟೀಲ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್‌ಕಾರ್ಯಕರ್ತರು, 'ದೇಶ ದ್ರೋಹಿ ಆರೆಸ್ಸೆಸ್' ಎಂದು ಘೋಷಣೆ ಕೂಗುತ್ತ ಆರೆಸ್ಸೆಸ್ ಕಚೇರಿಗೆ ತೆರಳಲು ಮುಂದಾದರು. ಈ ಸಂದರ್ಭ ಬ್ಯಾರಿಕೇಡ್ ಮೂಲಕ ರಸ್ತೆ ಬಂದ್ ಮಾಡಿದ ಪೊಲೀಸರು ಮಾರ್ಗ ಮಧ್ಯದಲ್ಲೇ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ನ್ಯೂ ಸಿಎಆರ್ ಗ್ರೌಂಡ್‌ಗೆ ರವಾನಿಸಿದರು.
ಈ ವೇಳೆ 50ಕ್ಕೂ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಸ್ಥಳಕ್ಕೆ ಲಾ ಆರ್ಡರ್ ಡಿಸಿಪಿ ಎಂ. ಬಿ. ನಂದಗಾವಿ ಭೇಟಿ ನೀಡಿದರು.
Next Story





