ಧಾರವಾಡ ಯೂತ್ ಕಾಂಗ್ರೆಸ್ ಪ್ರ.ಕಾರ್ಯದರ್ಶಿ ಹತ್ಯೆ: ನಾಲ್ವರು ಅನುಮಾನಾಸ್ಪದ ವ್ಯಕ್ತಿಗಳು ವಶಕ್ಕೆ : ಕಮಿಷನರ್‌ಎನ್. ಶಶಿಕುಮಾರ್

ಧಾರವಾಡ : ಧಾರವಾಡ ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಫೈರೋಝ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಅನುಮಾನಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದಿದ್ದು ಮಾಹಿತಿಯನ್ನು ಕಲೆಹಾಕುತ್ತಿದ್ದೇವೆ ಎಂದು ಹು-ಧಾ ನಗರ ಪೊಲೀಸ್ ಕಮಿಷನರ್‌ಎನ್. ಶಶಿಕುಮಾರ್ ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹತ್ಯೆ ಮಾಡಿರುವ ಆರೋಪಿಗಳು ಫೈರೋಝ್‌ನ ಸ್ನೇಹಿತರು ಎಂದು ತಿಳಿದುಬಂದಿದ್ದು, ಎಲ್ಲರೂ ಕೂಡ ಒಂದೇ ಪಕ್ಷದಲ್ಲಿ ಗುರುತಿಸಿಕೊಂಡಿದ್ದವರು. ಆದರೆ ಇತ್ತೀಚೆಗೆ ಫೈರೋಝ್ ಮತ್ತು ಆರೋಪಿಗಳಿಗೆ ವೈಮನಸ್ಸು ಬೆಳೆದಿತ್ತು ಎನ್ನುವ ಮಾಹಿತಿ ನಮಗೆ ದೊರೆತಿದ್ದು, ಕೊಲೆ ನಡೆದಿರುವ ಮನೆಯ ಸುತ್ತಮುತ್ತಲಿನ ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿರುವ ದೃಶ್ಯಗಳ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ತಿಳಿಸಿದ್ದಾರೆ.
Next Story





