Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಧಾರವಾಡ‌
  4. ಎಸ್‌ಐಆರ್ ರದ್ದಾಗಲಿ ಎನ್ನುವುದು ಮೇಳದ...

ಎಸ್‌ಐಆರ್ ರದ್ದಾಗಲಿ ಎನ್ನುವುದು ಮೇಳದ ನಿಲುವು : 12ನೇ ಮೇ ಸಾಹಿತ್ಯ ಮೇಳದ ಸಮಾರೋಪದಲ್ಲಿ ಕೆ.ಫಣಿರಾಜ್

ವಾರ್ತಾಭಾರತಿವಾರ್ತಾಭಾರತಿ17 May 2026 11:51 PM IST
share
ಎಸ್‌ಐಆರ್ ರದ್ದಾಗಲಿ ಎನ್ನುವುದು ಮೇಳದ ನಿಲುವು : 12ನೇ ಮೇ ಸಾಹಿತ್ಯ ಮೇಳದ ಸಮಾರೋಪದಲ್ಲಿ ಕೆ.ಫಣಿರಾಜ್

ಹುಬ್ಬಳ್ಳಿ : ಪಟ್ಟಣದ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪ ನರಗುಂದ-ನವಲಗುಂದ ರೈತ ಬಂಡಾಯ ವೇದಿಕೆಯಲ್ಲಿ 12ನೇ ಮೇ ಸಾಹಿತ್ಯ ಮೇಳದ ಸಮಾರೋಪ ಸಮಾರಂಭ ರವಿವಾರ ನಡೆಯಿತು. ಇದೇ ವೇಳೆ ಪ್ರಶಸ್ತಿ ಪ್ರದಾನ ಹಾಗೂ ವಿವಿಧ ಗೋಷ್ಠಿಗಳು ನಡೆದವು.

ಗೋಷ್ಠಿಯಲ್ಲಿ ಎಸ್‌ಐಆರ್ ಸಮಸ್ಯೆ-ಜನಾಂದೋಲನ ಕುರಿತು ಮಾತನಾಡಿದ ಚಿಂತಕ ಕೆ. ಫಣಿರಾಜ್, ಎಸ್‌ಐಆರ್ ರದ್ದಾಗಲಿ ಎನ್ನುವುದು ಈ ಮೇಳದ ಸ್ಪಷ್ಟ ನಿಲುವು. ಎನ್‌ಆರ್‌ಸಿಯನ್ನು ಹಿಂಬಾಗಿಲಿನಿಂದ ತರುವ ಕೆಲಸ ಸಾಂವಿಧಾನಿಕ ನೆಲೆಯನ್ನು ಬುಡಮೇಲು ಮಾಡುವ ಯೋಜಿತ ಕಾರ್ಯ. ಇದು ಅಸಾಂವಿಧಾನಿಕ ಕಾರ್ಯ. ಈ ಪ್ರಕ್ರಿಯೆ ಅಸಿಂಧುಗೊಳಿಸಬೇಕೆಂದು ಆಗ್ರಹಿಸಲಾಗಿದೆ ಎಂದರು.

ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್, ಎಸ್‌ಐಆರ್ ಕುರಿತು ಜನರಲ್ಲಿ ತಿಳುವಳಿಕೆ ಆಗಬೇಕು. ಅದರಿಂದ ಆಗುವ ದುಷ್ಪರಿಣಾಮಗಳ ಕುರಿತು ಕಿರುಹೊತ್ತಿಗೆ, ಕರಪತ್ರಗಳು ಹಂಚಬೇಕು. ಸಣ್ಣ ಸಣ್ಣ ತಂಡಗಳನ್ನು ಕಟ್ಟಿಕೊಂಡು, ಚಳುವಳಿ ಕಟ್ಟಿಕೊಂಡು ಜಾಗೃತಿ ಮೂಡಿಸಬೇಕು. ಕಾಂಗ್ರೆಸ್ ಬಗ್ಗೆ ಯೋಚಿಸದೆ ಜನ ಚಳವಳಿಯನ್ನು ಕಟ್ಟಿಕೊಂಡು ಎಸ್‌ಐಆರ್ ವಿರುದ್ಧ ಅರಿವು ಮೂಡಿಸಬೇಕೆಂದು ಕರೆ ನೀಡಿದರು.

ಸಿಪಿಐಎಂ ರಾಜ್ಯ ಘಟಕದ ಕಾರ್ಯದರ್ಶಿ ಕೆ.ಪ್ರಕಾಶ ಮಾತನಾಡಿ, ನಮ್ಮ ಕಾನೂನಿನ ಚೌಕಟ್ಟಿನಲ್ಲಿ ಎಸ್‌ಐಆರ್ ಪ್ರಾತಿನಿಧ್ಯತೆಯ ಇಲ್ಲ. ಇದು ಮೂಲಭೂತ ಪ್ರಶ್ನೆ ಆಗಿದೆ. ‘ಅಕ್ರಮವಾಗಿ ವಲಸಿಗರು ಇದ್ದಾರೆ. ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡುತ್ತೇವೆ’ ಎಂದು ಅವರು ಹೇಳುತ್ತಿದ್ದಾರೆ. 18 ವರ್ಷ ಮೇಲ್ಪಟ್ಟರೆ ಸೇರಿಸಬಹುದು, ವಾಸಸ್ಥಳ ಬದಲಾದರೆ ಮತದಾರ ವಾಸಸ್ಥಳ ಬದಲಾಯಿಸಬೇಕೇ ಹೊರತು ಚುನಾವಣಾ ಆಯೋಗ ಹೊಸದಾಗಿ ಏನು ಸಾಧಿಸಲು ಹೊರಟಿದೆ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ ಎಂದು ಹೇಳಿದರು.

ಭಾರತವನ್ನು ಹಿಂದುತ್ವ ರಾಷ್ಟ್ರ ಮಾಡಬೇಕೆನ್ನುವ ಕೋಮುವಾದಿಗಳ ಒಂದು ಭಾಗ ಎಸ್‌ಐಆರ್ ಆಗಿದ್ದು, ಈ ಬಗ್ಗೆ ಜಾಗೃತಿ ಮೂಡಿಸುವಂತಾಗಬೇಕು. ಎಸ್‌ಐಆರ್ ರದ್ದು ಪಡಿಸುವಂತೆ ಹೋರಾಟ ಹಮ್ಮಿಕೊಳ್ಳಬೇಕು. ಸಮಸ್ತ ಜನ ಬೀದಿಗೆ ಇಳಿಯಬೇಕೆಂದು ಕರೆ ನೀಡಿದರು.

ಕರ್ನಾಟಕ ಜನಶಕ್ತಿ ಅಧ್ಯಕ್ಷ ನೂರ್ ಶ್ರೀಧರ್ ಮಾತನಾಡಿ, ರಾಜಕೀಯ ಸರ್ವಾಧಿಕಾರಿಗಳಿಗೆ ರಾಜಕಾರಣಿಗಳು ಶರಣಾಗಿದ್ದಾರೆ. ವೋಟ್ ಚೋರ್ ನಡೆಯುತ್ತಿತ್ತು. ಈಗ ವೋಟ್ ದರೋಡೆ ನಡೆಯುತ್ತಿದೆ. ಸೋಲಿಸಿದ್ದು ವಿರೋಧ ಪಕ್ಷದವರನ್ನಲ್ಲ, ಭಾರತವನ್ನು ಸೋಲಿಸಿದ್ದಾರೆ. ಈಗ ಪ್ರಜಾಪ್ರಭುತ್ವ ಉಳಿಸುವ ಶಕ್ತಿ ನಮ್ಮಲ್ಲಿ ಇವೆ. ಕರ್ನಾಟಕದ ಎಲ್ಲ ಜನರು, ಕಲಾವಿದರು, ಹೋರಾಟಗಾರರು, ಜನಾಂದೋಲನ ಸೃಷ್ಟಿಸುವ ಅಗತ್ಯವಿದೆ ಎಂದರು.

ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ಮಾತನಾಡಿ, ಬಿಜೆಪಿ ಆರೆಸ್ಸೆಸ್ ಮುಖವಾಣಿಯಾಗಿರುವುದರಿಂದ ಹಿಂದೂ ರಾಷ್ಟ್ರ ನೇರವಾಗಿ ಘೋಷಣೆ ಮಾಡಲು ಅಸಾಧ್ಯವೆಂದು ಅರಿತಿದೆ. ಈ ಮೂಲಕ ಚುನಾವಣೆ ಮುಖಾಂತರ ಅಧಿಕಾರಕ್ಕೆ ಬರಲು ಯೋಜನೆ ಮಾಡುತ್ತಿದೆ. ನಾವು ಎಸ್‌ಐಆರ್ ಬೇಡವೆಂದರೂ ಮುಂದಿನ ತಿಂಗಳು ಎಸ್‌ಐಆರ್ ಆರಂಭವಾಗಲಿದೆ. ಮತದಾರರ ಹಕ್ಕು ಕಳೆದುಕೊಂಡವರು ದೇಶದ ಪ್ರಜೆಯಾಗಿ ಬದುಕುವ ಹಕ್ಕು ಕಳೆದುಕೊಳ್ಳಲಿದ್ದು, ಎಸ್‌ಐಆರ್ ಹೋರಾಟವನ್ನು ಫ್ಯಾಶಿಸ್ಟ್ ವಿರೋಧ ಹೋರಾಟದ ಹಾಗೆ ಮಾಡಬೇಕೆಂದು ಹೇಳಿದರು.

‘ಪ್ರಜಾಸತ್ತೆಯ ಮೇಲಿನ ದಾಳಿ; ಸೃಜನೆಶೀಲ ಸ್ಪಂದನೆ’ ಕುರಿತು ಮಾತನಾಡಿದ ಚಿಂತಕ ರಂಗನಾಥ ಕಂಟನಕುಂಟೆ, ಎಡಪಂಥೀಯ ಲೇಖಕರು ಪ್ರಭುತ್ವದ ವಿರುದ್ಧ ಪ್ರತಿರೋಧ ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಬೇರೆ ಬೇರೆ ಸಾಹಿತ್ಯದ ಪ್ರಕಾರಗಳ ಮೂಲಕ ಅವರು ತಮ್ಮದೇ ಆದ ಪ್ರತಿರೋಧ ವ್ಯಕ್ತಪಡಿಸುತ್ತಿದ್ದಾರೆ. ಪ್ರಜಾಪ್ರಭುತ್ವ ವಿರೋಧಿಸುವವರ ವಿರುದ್ಧ ಕಾವ್ಯ ಮತ್ತು ವಿಚಾರ ಸಾಹಿತ್ಯ ಧ್ವನಿ ಎತ್ತುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು.

ಜಾತಿ, ಲಿಂಗತ್ವ ಮತ್ತು ವರ್ಗ ಕುರಿತು ಸಾಹಿತಿ ವಿಜಯಶಾಂತಿ, ಮೀಸಲಾತಿ-ಒಳ ಮೀಸಲಾತಿ ಕುರಿತು ಶಿಕ್ಷಕ ಹುಲಿಕುಂಟೆ ಮೂರ್ತಿ ಮಾತನಾಡಿದರು. ವೇದಿಕೆಯಲ್ಲಿ ಎಸ್.ಎಸ್. ಹಾರ್ಲಾಪುರ ಉಪಸ್ಥಿತರಿದ್ದರು.

ಹೈಕೋರ್ಟ್ ನಿವೃತ್ತ ನ್ಯಾ. ಎಚ್. ನಾಗಮೋಹನ ದಾಸ್ ಸಮಾರೋಪ ನುಡಿಗಳನ್ನಾಡಿದರು. ಶಶಿಧರ ತೋಡ್ಕರ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಚಂದ್ರಕಾಂತ ವಡ್ಡು ಅವರ ಪುಸ್ತಕ ಬಿಡುಗಡೆ ಮಾಡಲಾಯಿತು. ಬಸವರಾಜ ಸೂಳೀಭಾವಿ, ಮಾಲತಿ ಪಟ್ಟಣಶೆಟ್ಟಿ, ಬಸವರಾಜ ಹೂಗಾರ ಮತ್ತಿತರರು ಉಪಸ್ಥಿತರಿದ್ದರು.

ಪ್ರಶಸ್ತಿ ಪ್ರದಾನ

ವಿಭಾ ಸಾಹಿತ್ಯ ಪ್ರಶಸ್ತಿ- ಸಂತೇಬೆನ್ನೂರು ಫೈಜ್ನಟ್ರಾಜ್, ಬಂಡ್ರಿ ನರಸಪ್ಪ ಸಮಾಜಮುಖಿ ಶ್ರಮಜೀವಿ ಪ್ರಶಸ್ತಿ- ಎಸ್.ಕೆ. ಕಾಂತಾ(ಕಲಬುರಗಿ), ನವಲಕಲ್ ಬೃಹನ್ಮಠ ಶಾಂತವೀರಮ್ಮ ಮಹಾತಾಯಿ ಪ್ರಶಸ್ತಿ-ಬಾ.ಹ.ರಮಾ ಕುಮಾರಿ(ತುಮಕೂರು), ನಿಂಗಪ್ಪ ಸಂಶಿ ರೈತಚೇತನ ಪ್ರಶಸ್ತಿ-ಲಕ್ಷ್ಮಣ ಹೂಗಾರ, ಪಂಚಪ್ಪ ಸಮು ದಾಯ ಮಾರ್ಗಿ ಪ್ರಶಸ್ತಿ- ಪಿ.ಅಬ್ದುಲ್ಲಾ (ಹೊಸಪೇಟೆ), ಚಂದ್ರಶೇಖರ ಹೊಸಮನಿ ಅಂಬೇಡ್ಕರ್ ಪತ್ರಿಕಾ ಮಾರ್ಗಿ ಪ್ರಶಸ್ತಿ-ಕೃಷ್ಣಮೂರ್ತಿ ಚಮರಂ(ಮೈಸೂರು), ಲಕ್ಷ್ಮೀಬಾಯಿ ಕಟ್ಟಿಮನಿ ಸಮಾಜ ಮುಖಿ ಮಹಿಳೆ ಪ್ರಶಸ್ತಿ- ಚಂದ್ರಮ್ಮ (ಬೆಂಗಳೂರು) ಹಾಗೂ ತುಕಾರಾಂ ಚಂಚಲಕರ(ವಿಜಯಪುರ) ಅವರಿಗೆ ವಿ.ಎಚ್ ತಳವಾರ ಫುಲೆ ಮಾರ್ಗಿ ಶಿಕ್ಷಕ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

‘ಎಸ್‌ಐಆರ್ ರದ್ದಾಗಲಿ ಪ್ರತಿಭಟನಾ ಜಾಥಾʼ

ಹುಬ್ಬಳ್ಳಿ ಪಟ್ಟಣದಲ್ಲಿ ನಡೆಯುತ್ತಿರುವ 12ನೇ ಮೇ ಸಾಹಿತ್ಯ ಮೇಳದ ಎರಡನೇ ದಿನದಂದು ‘ಎಸ್‌ಐಆರ್ ರದ್ದಾಗಲಿ ಪ್ರತಿಭಟನಾ ಜಾಥಾ’ಕ್ಕೆ ಹಿರಿಯ ಕಾದಂಬರಿಕಾರ ಕುಂ ವೀರಭದ್ರಪ್ಪರವರು ಚಾಲನೆ ನೀಡಿದರು.

ಜಾಥಾ ಚೆನ್ನಮ್ಮ ವೃತ್ತದಿಂದ ಆರ್.ಎನ್.ಶೆಟ್ಟಿ ಕಲ್ಯಾಣ ಮಂಟಪದವರೆಗೆ ನಡೆಯಿತು.

ಈ ಸಂದರ್ಭ ಲೇಖಕಿ ಸಬಿತಾ ಬನ್ನಾಡಿ ಮಾತನಾಡಿ, ಸತ್ತಿರುವವರನ್ನು ಮತದಾನ ಪಟ್ಟಿಯಿಂದ ತೆಗೆಯಬೇಕಿತ್ತು, ಆದರೆ ಬದುಕಿರುವ ಜನರನ್ನು ಮತದಾನ ಪಟ್ಟಿಯಿಂದ ತೆಗೆದಿದ್ದಾರೆ. ಇದು ಜನಾಂಗ ಹತ್ಯೆಯಾಗಿದೆ. ಜನರು ಬದುಕಿದ್ದರೂ ಸತ್ತಂತೆ ಮಾಡುವುದೇ ಎಸ್‌ಐಆರ್. ಇದನ್ನು ನಾವೆಲ್ಲರೂ ವಿರೋಧಿಸಬೇಕು ಎಂದು ಹೇಳಿದರು.

ಹಿರಿಯ ಸಾಹಿತಿ ರಂಜಾನ್ ದರ್ಗಾ ಮಾತನಾಡಿ, ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್ ಮೂಲಕ ತೊಂಬತ್ತು ಲಕ್ಷ ಜನರನ್ನು ಮತದಾನದಿಂದ ಹೊರಗಿಟ್ಟು ಚುನಾವಣೆ ನಡೆಸಿದ್ದಾರೆ. ಕರ್ನಾಟಕದಲ್ಲಿ ಎಸ್‌ಐಆರ್ ಜಾರಿಗೊಳಿಸದಂತೆ ನಾವೆಲ್ಲರೂ ಈ ಮೇಳದ ಮೂಲಕ ವಿರೋಧ ವ್ಯಕ್ತಪಡಿಸೋಣ ಎಂದರು.

ಡಾ.ಅಶೋಕ ಶೆಟ್ಟರ್ ಮಾತನಾಡಿ, ಕರ್ನಾಟಕದಲ್ಲಿ ಎಸ್‌ಐಆರ್ ಜಾರಿ ಮಾಡದಂತೆ ವಿರೋಧ ವ್ಯಕ್ತಪಡಿಸಬೇಕೆಂದರು.

ಪ್ರತಿಭಟನಾ ಜಾಥಾದಲ್ಲಿ ಮೂಡ್ನಾಕೂಡು ಚಿನ್ನಸ್ವಾಮಿ, ಶ್ರೀಪಾದ್ ಭಟ್, ನೂರಾರು ಮುಖಂಡರು ಪಾಲ್ಗೊಂಡಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X