ಚಾಮರಾಜನಗರದಲ್ಲಿ ಅಂಬೇಡ್ಕರ್, ಬುದ್ಧ ಪ್ರತಿಮೆ ಧ್ವಂಸ ಪ್ರಕರಣಲ BSP ಖಂಡನೆ

ಧಾರವಾಡ: ಚಾಮರಾಜನಗರದಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಹಾಗೂ ಬುದ್ಧರ ಪ್ರತಿಮೆಗಳನ್ನು ಮತ್ತು ದೇಶದ ಮಹಾ ಪುರುಷರ ಪ್ರತಿಮಗಳನ್ನು ಭಗ್ನಗೊಳಿಸಿದ್ದು BSP ಖಂಡಿಸುತ್ತದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಾತಿರೋಗಿ ಕೋಮುವಾದಿ ಕಿಡಿಗೇಡಿಗಳು ಚಾಮರಾಜನಗರದ ಜ್ಯೋತಿಗೌಡನಪುರದಲ್ಲಿ ಮೂರು ಕಡೆ ಸಂವಿಧಾನ ಶಿಲ್ಪಿ ಬಾಬಾಸಾಹೇಬರ ಫ್ಲೆಕ್ಸ್ ಹರಿದು ಬುದ್ಧವಿಹಾರದ ಬೀಗ ಮುರಿದು ಒಳಗಿದ್ಧ ಬುದ್ಧರ ಹಾಗು ಬಾಬಾಸಾಹೇಬರ ಪ್ರತಿಮೆಗಳನ್ನು ಭಗ್ನಗೊಳಿಸಿ ಧ್ವಂಸಮಾಡಿ ಬೀದಿಗೆ ತಂದು ಬಿಸಾಡಿರುವ ಕುಕೃತ್ಯ ನಡೆಸಿದ್ದಾರೆ. ಆದಷ್ಟು ಬೇಗ ಕಿಡಿಗೇಡಿಗಳನ್ನು ಪತ್ತೆಹಚ್ಚಿ ಜೈಲಿಗಟ್ಟಬೇಕು ಬೇಲ್ ಸಿಗದಂಥ ಕಾಯ್ದೆಯಡಿ ಬಂಧಿಸಬೇಕು ಮತ್ತು ಆ ಕಿಡಿಗೇಡಿಗಳ ಹಿಂದಿರುವ ಮನುವಾದಗಳ ಕಾಣದ ಕೈಗಳನ್ನು ಪತ್ತೆ ಹಚ್ಚಿ ಕಾನೂನಿನ ಮೂಲಕ ಬಂಧಿಸಬೇಕು ಎಂದು BSP ಧಾರವಾಡ ಜಿಲ್ಲಾಧ್ಯಕ್ಷರಾದ ರೇವಣಸಿದ್ದಪ್ಪ ಹೊಸಮನಿ ದೇಸಾಯಿ ಸರಕಾರವನ್ನು ಒತ್ತಾಯಿಸಿದ್ದಾರೆ.
Next Story





