ರವಿ ಹಂಜ ಅವರನ್ನು ದೇಶದಿಂದ ಗಡಿಪಾರು ಮಾಡಬೇಕು: ಶಾಸಕ ವಿನಯ ಕುಲಕರ್ಣಿ

ಶಾಸಕ ವಿನಯ ಕುಲಕರ್ಣಿ
ಧಾರವಾಡ: ಜಗಜ್ಯೋತಿ ಬಸವಣ್ಣನ ಬಗ್ಗೆ ಅವಹೇಳನಕಾರಿಯಾಗಿ ಬರೆದಿರುವ ರವಿ ಹಂಜ್ನನ್ನು ದೇಶದಿಂದ ಗಡಿಪಾರು ಮಾಡಬೇಕೆಂದು ಶಾಸಕ ವಿನಯ ಕುಲಕರ್ಣಿ ಆಗ್ರಹಿಸಿದರು.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೇಖಕ ರವಿ ಹಂಜ್ ಒಬ್ಬ ಅನಿವಾಸಿ ಭಾರತೀಯ. ಇಂಥವರಿಗೆ ಹಾಗೂ ಇವರ ಕುಟುಂಬದವರಿಗೆ ನಮ್ಮ ದೇಶದಲ್ಲಿ ಇರಲು ಅನುಮತಿ ನೀಡಬಾರದು. ಲಿಂಗಾಯತ ಸಮಾಜದವರು ಮೌನವಾಗಿದ್ದಾರೆಂಬ ಕಾರಣಕ್ಕೆ ರವಿ ಹಂಜ್ ಅಂಥವರು ಬೇಕಾಬಿಟ್ಟಿಯಾಗಿ ದಾರ್ಶನಿಕರ ಬಗ್ಗೆ ಬರೆಯುತ್ತಾರೆ. ಇಂಥವರ ಹಿನ್ನೆಲೆ ತಿಳಿಯಬೇಕು. ಇವರಿಗೆ ಬರೆಯಲು ಹೇಳಿದವರಾರು? ಎಂಬುದನ್ನು ತಿಳಿಯಬೇಕು. ಬೇರೆ ಯಾರಾದರೂ ಬರೆದು ರವಿ ಹಂಜ್ನ ಹೆಸರು ಹಾಕಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸಬೇಕು. ಇದನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದರು.
Next Story




