Dharwad | ಕಾರು ಅಪಘಾತ; ಉತ್ತರಾಧಿಮಠ ಶ್ರೀಗಳಿಗೆ ಸಣ್ಣಪುಟ್ಟ ಗಾಯ

ಸಾಂದರ್ಭಿಕ ಚಿತ್ರ
ಧಾರವಾಡ: ಧಾರವಾಡದಿಂದ ಸವಣೂರಿಗೆ ತೆರಳುತ್ತಿದ್ದ ವೇಳೆ ಪೂನಾ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ವಾಟರ್ ಪಾರ್ಕ್ ಸಮೀಪ ಉತ್ತರಾಧಿಮಠದ ಶ್ರೀಪಾದಂಗಳಿದ್ದ ಫಾರ್ಚೂನರ್ ಕಾರು ಅಪಘಾತಕ್ಕೀಡಾಗಿದೆ.
ಅಪಘಾತದಲ್ಲಿ ಉತ್ತರಾಧಿಮಠದ ಶ್ರೀಪಾದಂಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಶಶಿಧರಾಚಾರ್ಯ ಸೇರಿದಂತೆ ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ಕುರಿತು ಉತ್ತರಾಧಿಮಠದ ಸಿಇಒ ವಿದ್ಯಾಧೀಶಾಚಾರ್ಯ ಗುತ್ತಲ ಸ್ಪಷ್ಟನೆ ನೀಡಿ, “ಶ್ರೀಪಾದಂಗಳಿಗೆ ಒಳನೋವು ಆಗಿದೆ ಅಷ್ಟೇ. ಭಕ್ತರು ಯಾವುದೇ ಆತಂಕಪಡಬೇಕಾದ ಅಗತ್ಯವಿಲ್ಲ” ಎಂದು ತಿಳಿಸಿದ್ದಾರೆ.
Next Story




