ಧಾರವಾಡ: ಮರಕ್ಕೆ ಕ್ರೂಸರ್ ಢಿಕ್ಕಿ; ಇಬ್ಬರು ಮೃತ್ಯು

ಧಾರವಾಡ: ಕ್ರೂಸರ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿ ಮೃತಪಟ್ಟ ಘಟನೆ ಇಂದು ಬೆಳಗಿನ ಜಾವ ಗರಗ ಪೊಲೀಸ್ ಠಾಣೆ ವ್ಯಾಪ್ತಿಯ ಮುಲ್ಲಾ ಡಾಬಾದ ಬಳಿ ಸಂಭವಿಸಿದೆ.
ಗದಗ ಹುಡ್ಕೋ ಕಾಲನಿ ನಿವಾಸಿ ಮಹಾಂತಮ್ಮ ಬಸವಣೆಪ್ಪ ತುಪ್ಪದ(95) ಹಾಗೂ ಸುರೇಶ ಬಸವಣೆಪ್ಪ ತುಪ್ಪದ(52) ಮೃತಪಟ್ಟವರಾಗಿದ್ದಾರೆ.
ಇವರಲ್ಲದೆ ಕ್ರೂಸರ್ ವಾಹನದಲ್ಲಿದ್ದ ಹತ್ತಕ್ಕೂ ಅಧಿಕ ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.
ಅಪಘಾತದ ರಭಸಕ್ಕೆ ಕ್ರೂಸರ್ ವಾಹನದ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.
ಕ್ರೂಸರ್ ವಾಹನದಲ್ಲಿದ್ದವರು ಕೊಲ್ಲಾಪುರದ ಮಹಾಲಕ್ಷ್ಮೀ ದೇವಸ್ಥಾನ ಮತ್ತೂ ಬಾಳು ಮಾಮಾನ ದರ್ಶನ ಪಡೆದು ತಮ್ಮೂರಿಗೆ ಮರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.
ಸ್ಥಳಕ್ಕೆ ಗರಗ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Next Story





