ಧಾರವಾಡ: ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ; ಇಂದು ಫಲಿತಾಂಶ ಪ್ರಕಟ

ಸಾಂದರ್ಭಿಕ ಚಿತ್ರ | PC : Image by pch.vector on Magnific
ಧಾರವಾಡ: ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯ ಮತ ಎಣಿಕೆ ಇಂದು ನಗರದ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯಲಿದೆ.
ಚುನಾವಣಾ ಕಣದಲ್ಲಿ ಒಟ್ಟು 14 ಅಭ್ಯರ್ಥಿಗಳಿದ್ದು, ಕಾಂಗ್ರೆಸ್ನಿಂದ ಮೋಹನ ಲಿಂಬಿಕಾಯಿ, ಬಿಜೆಪಿಯಿಂದ ಎಸ್.ವಿ. ಸಂಕನೂರು, ಕರ್ನಾಟಕ ರಾಷ್ಟ್ರ ಸಮಿತಿಯಿಂದ ನಿಶಾಂತ ಶಂಕರ ಬಂಕಾಪೂರ, ಕಿತ್ತೂರು ಕಲ್ಯಾಣ ಕರ್ನಾಟಕ ಸೇನಾದಿಂದ ಮಲ್ಲಿಕಾರ್ಜುನ ಚನ್ನಪ್ಪ ಗಂಗಾಧರ ಹಾಗೂ ಜನತಾ ಚಳವಳಿ ಭಾರತ ಪಕ್ಷದಿಂದ ತಳವಾರ ಶಿವಕುಮಾರ ಸ್ಪರ್ಧಿಸಿದ್ದಾರೆ.
ಪಕ್ಷೇತರ ಅಭ್ಯರ್ಥಿಗಳಾಗಿ ಅಬ್ಜುಲ್ ಮನ್ನಾನ, ಡಾ. ಜಿ.ಎಚ್. ಇಮ್ರಾಪುರ, ಉಮೇಶ ಕೃಷ್ಣಪ್ಪ ದೈವಜ್ಞ, ಕೃಷ್ಣ ಎಚ್. ಬಳಿಗಾರ, ಕಾಂತಕುಮಾರ ಆರ್., ಜಿಶಾನ್ ಡಿ. ಶಿರಸಂಗಿ, ಜೀಶಾನ್ ಅಹ್ಮದಖಾನ್ ಪಠಾಣ, ಬಸವರಾಜ ಶಂಕ್ರಪ್ಪ ಕೊಟಗಿ ಹಾಗೂ ಸಂತೋಷ ಮನೋಹರ ವೇರ್ಣೇಕರ ಕಣದಲ್ಲಿದ್ದಾರೆ.
Next Story




