ಹುಬ್ಬಳ್ಳಿ: ಸಾಲ ಕೊಡಿಸುವುದಾಗಿ ಹೇಳಿ ನಕಲಿ ನೋಟು ನೀಡಿ ವಂಚಿಸಿದ ಆರೋಪಿಯ ಬಂಧನ

ಹುಬ್ಬಳ್ಳಿ: ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡಿಸುವುದಾಗಿ ಹೇಳಿ ಮಹಿಳೆಯೊಬ್ಬರಿಗೆ ಸಾಲದ ರೂಪದಲ್ಲಿ ನಕಲಿ ನೋಟುಗಳನ್ನು ನೀಡಿ ವಂಚಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ಮುಹಮ್ಮದ್ ಆಸೀಫ್ ಬಂಧಿತ ಆರೋಪಿ.
ಪುಣೆಯ ಮಹಿಳೆ ಅಶ್ವಿನಿ ಎಂಬವರಿಗೆ ಹೊಸ ಕಂಪೆನಿ ಪ್ರಾರಂಬಿಸಲು ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವುದಾಗಿ ಹೇಳಿ ಮಹಿಳೆಯಿಂದ 60 ಲಕ್ಷ ರೂ ಪಡೆದು ಆಸೀಫ್ ವಂಚಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಸುಧೀರ್ ಮೆಹ್ತಾ ಎಂದು ಮಹಿಳೆಗೆ ಪರಿಚಿಯಿಸಿಕೊಂಡಿದ್ದ ಆರೋಪಿಯು ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಸಾಲದ ಮೊದಲ ಭಾಗ ಎಂದು ಹೇಳಿ 11,87,45,000 ಮೌಲ್ಯದ ನಕಲಿ ನೋಟನ್ನು ಅಶ್ವಿನಿ ಅವರಿಗೆ ನೀಡಿದ್ದ ಎನ್ನಲಾಗಿದೆ. ಇದರಲ್ಲಿ ಕೇವಲ 5000 ರೂ. ಅಸಲಿ ನೋಟು ಎಂದು ಎಂದು ಪೊಲೀಸರು ತಿಳಿಸಿದ್ದಾರೆ.
Next Story





