ಸಂತೋಷ್ ಅಂಗಡಿಗೆ ವಿಶ್ವ ಕನ್ನಡ ಬಳಗದ ‘ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ ಪ್ರದಾನ

ಹುಬ್ಬಳ್ಳಿ : ವಿಶ್ವ ಕನ್ನಡ ಬಳಗ ( ರಿ) ಹುಬ್ಬಳ್ಳಿ ವತಿಯಿಂದ ನೀಡಲಾಗುವ ʼಕನ್ನಡ ರಾಜ್ಯೋತ್ಸವ ಪ್ರಶಸ್ತಿʼಯನ್ನು ಕರ್ನಾಟಕ ಯುವಶಕ್ತಿ ಸೇವಾ ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷರಾದ ಸಂತೋಷ್ ಅಂಗಡಿ ಅವರಿಗೆ ಪ್ರದಾನ ಮಾಡಲಾಯಿತು.
ಹುಬ್ಬಳ್ಳಿಯ ಮೂರುಸಾವಿರ ಮಠದ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಸಂತೋಷ್ ಅಂಗಡಿ ಅವರು, ʼನಮ್ಮ ಬದುಕು ಸಮಾಜಕ್ಕೆ ಮಾದರಿಯಾಗಬೇಕು. ನಿರ್ಗತಿಕರ ಪರ ನಿಲ್ಲುವ ದಾರಿಯಲ್ಲಿ ನಡೆದಾಗ ನಮ್ಮ ಜೀವನ ಯಶಸ್ವಿಯಾಗುತ್ತದೆ ʼ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಆಯುರ್ವೇದ ಮಹಾವಿದ್ಯಾಲಯದ ಅಧ್ಯಕ್ಷರಾದ ಗೋವಿಂದ ಜೋಶಿ, ಸಾಹಿತಿಗಳಾದ ವಸಂತ ಅಗಸಿಮನಿ, ಮಲ್ಲಿಕಾರ್ಜುನ ಸಾವಕಾರ , ವಿಶ್ವ ಕನ್ನಡ ಬಳಗದ ಅಧ್ಯಕ್ಷ ಸದಾಶಿವ ಚೌಶೆಟ್ಟಿ, ಹುಬ್ಬಳ್ಳಿ ರೈತ ಸಂಘದ ಅಧ್ಯಕ್ಷ ಮಾರುತಿ ಚಂದ್ರಶೇಖರ ಬೀಳಗಿ ಹಾಗೂ ಇತರರು ಉಪಸ್ಥಿತರಿದ್ದರು.
Next Story





