Hubballi | ಮನೆ ಬೀಗ ಮುರಿದು ಚಿನ್ನಾಭರಣ, ನಗದು ಕಳ್ಳತನ : ಪ್ರಕರಣ ದಾಖಲು

ಸಾಂದರ್ಭಿಕ ಚಿತ್ರ
ಹುಬ್ಬಳ್ಳಿ : ಮನೆಯ ಬೀಗ ಮುರಿದ ದುಷ್ಕರ್ಮಿಗಳು ಮನೆಯಲ್ಲಿದ್ದ 15.35 ಲಕ್ಷ ರೂ. ಮೌಲ್ಯದ ಬಂಗಾರ, ಬೆಳ್ಳಿ ಆಭರಣ ಹಾಗೂ ನಗದು ಕಳವು ಮಾಡಿದ ಘಟನೆ ಗೋಪನಕೊಪ್ಪದ ಸ್ವಾಗತ ಕಾಲೋನಿಯಲ್ಲಿ ನಡೆದಿದೆ.
ಸ್ವಾಗತ ಕಾಲೋನಿ ನಿವಾಸಿ ದಾಕ್ಷಾಯಣಿ ಭಜಂತ್ರಿ ಎಂಬುವರ ಮನೆಯಲ್ಲಿರುವ ವಸ್ತುಗಳು ಕಳವು ಆಗಿವೆ. ದಾಕ್ಷಾಯಣಿ ಅವರು ಇತ್ತೀಚೆಗೆ ತಮ್ಮ ಸಹೋದರ ಮಾರುತಿ ಎಂಬುವರಿಗೆ ರಕ್ಷೆ ಕಟ್ಟಲು ಬೆಳಗಾವಿ ಜಿಲ್ಲೆಯ ಚಿಕ್ಕೋಡಿಗೆ ಹೋಗಿದ್ದಾರೆ. ಈ ವೇಳೆ ದುಷ್ಕರ್ಮಿಗಳು ಅವರ ಮನೆಯ ಬೀಗ ಮುರಿದು, ಕೊಠಡಿಯಲ್ಲಿದ್ದ 121 ಗ್ರಾಂ. ಬಂಗಾರ, 160 ಗ್ರಾಂ ಬೆಳ್ಳಿ ಹಾಗೂ 3 ಲಕ್ಷ ರೂ. ನಗದು ಕಳವು ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಈ ಕುರಿತು ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story




