Hubballi | ಮನೆ ಬೀಗ ಮುರಿದು ಚಿನ್ನಾಭರಣ ಕಳ್ಳತನ : FIR ದಾಖಲು

ಹುಬ್ಬಳ್ಳಿ : ಕೆಎಂಸಿಆರ್‌ಐ ಆಸ್ಪತ್ರೆಯ ಕ್ವಾಟರ್ಸ್‌ನಲ್ಲಿರುವ ರಾಘವೇಂದ್ರ ಎಂ. ಎಂಬವರ ಮನೆ ಬೀಗ ಮುರಿದ ದುಷ್ಕರ್ಮಿಗಳು ಮನೆಯಲ್ಲಿದ್ದ 2.30 ಲಕ್ಷ ರೂ. ಮೌಲ್ಯದ ಆಭರಣ ಕಳವು ಮಾಡಿರುವ ಘಟನೆ ನಡೆದಿದೆ.
ರಾಘವೇಂದ್ರ ಅವರು ಮನೆಗೆ ಬೀಗ ಹಾಕಿ ಕೆಲಸಕ್ಕೆ ಹೋದ ವೇಳೆ ದುಷ್ಕರ್ಮಿಗಳು ಮನೆ ಬಾಗಿಲ ಬೀಗ ಮುರಿದು, ಒಳ ಪ್ರವೇಶಿಸಿ 25 ಗ್ರಾಂ ಬಂಗಾರ ಹಾಗೂ 30 ಸಾವಿರ ಮೌಲ್ಯದ 150 ಗ್ರಾಂ ಬೆಳ್ಳಿ ಆಭರಣಗಳ ಕಳವು ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಈ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story




