Hubballi | ಪರಿಷತ್ ಚುನಾವಣೆ; ʼವೋಟ್ ಚೋರಿʼ ಆರೋಪ; ಕಾಂಗ್ರೆಸ್ ಕಾರ್ಯಕರ್ತರಿಂದ ರಸ್ತೆ ತಡೆದು ಪ್ರತಿಭಟನೆ

ಸಾಂದರ್ಭಿಕ ಚಿತ್ರ | PC : Image by pch.vector on Magnific
ಹುಬ್ಬಳ್ಳಿ : ಇಂದು(ಅ.23) ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ, ಹುಬ್ಬಳ್ಳಿಯಲ್ಲಿ ʼವೋಟ್ ಚೋರಿʼ ಆಗಿರುವ ಆರೋಪ ಕೇಳಿ ಬಂದಿದೆ.
ಹುಬ್ಬಳ್ಳಿಯ ಕೇಶ್ವಾಪುರ ಫಾತಿಮಾ ಸ್ಕೂಲ್ ಮತಗಟ್ಟೆ 36 ರಲ್ಲಿ ಇನ್ನೊಬ್ಬರ ಮತವನ್ನು ಯಾರೋ ಹಾಕಿರುವ ಆರೋಪ ಕೇಳಿ ಬಂದಿದೆ. ಸಯ್ಯದ್ ಇರ್ಫಾನ್ ಬೆಳಗಾವಿ ಎಂಬುವವರ ಮತವನ್ನೇ ಯಾರೋ ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಕಾರ್ಯಕರ್ತರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ನಂತರ ಕೇಶ್ವಾಪುರ ಪೊಲೀಸರು 50ಕ್ಕೂ ಹೆಚ್ಚು ಮಹಿಳಾ ಕಾರ್ಯಕರ್ತರು ಸೇರಿದಂತೆ ಅನೇಕರನ್ನು ವಶಕ್ಕೆ ತೆಗೆದುಕೊಂಡರು.
Next Story




