Hubballi | ಮಿನಿ ಗೂಡ್ಸ್ ವಾಹನ ಬೈಕ್‌ಗೆ ಢಿಕ್ಕಿ: ದಂಪತಿ ಸ್ಥಳದಲ್ಲೇ ಮೃತ್ಯು

ಹುಬ್ಬಳ್ಳಿ : ಮಿನಿ ಗೂಡ್ಸ್ ವಾಹನ ಬೈಕ್‌ಗೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ದಂಪತಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ ಗದಗ ರಸ್ತೆಯ ಐಟಿಸಿ ಗೋಡೌನ್ ಬಳಿ ನಡೆದಿದೆ.
ಮೃತರನ್ನು ಹುಬ್ಬಳ್ಳಿಯ ಜಯರಾಜನಗರ ನಿವಾಸಿಗಳಾದ ಸುಕುಮಾರ ತಿಕಲಾ ಹಾಗೂ ಅವರ ಪತ್ನಿ ರಜಿನಾ ತಿಕಲಾ ಎಂದು ಗುರುತಿಸಲಾಗಿದೆ. ಸುಕುಮಾರ ಪೈಂಟರ್ ಆಗಿ ಕೆಲಸ ಮಾಡುತ್ತಿದ್ದರೆ, ರಜಿನಾ ನಗರದ ಶಕುಂತಲಾ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಕೆಲಸ ಮುಗಿಸಿಕೊಂಡು ಬಂದ ಪತ್ನಿಯನ್ನು ಬೈಕ್‌ನಲ್ಲಿ ಮನೆಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಹಿಂದಿನಿಂದ ವೇಗವಾಗಿ ಬಂದ ವಾಹನ ಬೈಕ್‌ಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಪರಿಣಾಮ ದಂಪತಿ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಪೂರ್ವ ಸಂಚಾರಿ ಠಾಣೆ ಇನ್ಸ್‌ಪೆಕ್ಟರ್ ಮಂಜುನಾಥ ಕುಸುಗಲ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Next Story




