Hubballi | ಚಿನ್ನಾಭರಣ ಮಳಿಗೆಯಿಂದ ಕಳ್ಳತನ: ಸಿಸಿಟಿವಿ ಕ್ಯಾಮರಾದಲ್ಲಿ ದೃಶ್ಯ ಸೆರೆ

ಹುಬ್ಬಳ್ಳಿ: ಹುಬ್ಬಳ್ಳಿಯ ಹೃದಯ ಭಾಗದಲ್ಲಿರುವ ದುರ್ಗದಬೈಲ್ ಎಂಬಲ್ಲಿರುವ ಚಿನ್ನಾಭರಣ ಮಳಿಗೆಯೊಂದಕ್ಕೆ ನುಗ್ಗಿದ ಕಳ್ಳನೋರ್ವ ಚಿನ್ನದ ಸರ ಕಳವುಗೈದ ಘಟನೆ ವರದಿಯಾಗಿದೆ.
ದುರ್ಗದ ಬೈಲ್ ನಲ್ಲಿರುವ ಭೂಸದ ಬಿಲ್ಡಿಂಗ್ ನಲ್ಲಿರುವ ಚಿನ್ನಾಭರಣ ಮಳಿಗೆಯಲ್ಲಿ ಈ ಕಳವು ನಡೆದಿದೆ. ಗುರುತು ಪತ್ತೆಯಾಗದಿರಲು ಬುರ್ಖಾ ಧರಿಸಿ ಅಂಗಡಿಯೊಳಗೆ ನುಗ್ಗಿದ ಕಳ್ಳ, ಚಿನ್ನದ ಸರ ಕಳವುಗೈದಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
Next Story




