ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ʼಉದಯೋನ್ಮುಖ ಪತ್ರಕರ್ತʼ ಪ್ರಶಸ್ತಿಗೆ ವಾರ್ತಾಭಾರತಿಯ ಹಜರತ್ ನದಾಫ್ ಆಯ್ಕೆ

ಹಜರತ್ ನದಾಫ
ಧಾರವಾಡ : ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಕೊಡಮಾಡುವ ವಾರ್ಷಿಕ ಪ್ರಶಸ್ತಿಗೆ ವಾರ್ತಾಭಾರತಿ ಧಾರವಾಡ ಜಿಲ್ಲಾ ವರದಿಗಾರ ಹಜರತ್ ನದಾಫ ಅವರು ಆಯ್ಕೆ ಆಗಿದ್ದಾರೆ. "ಹುಬ್ಬಳ್ಳಿಯಲ್ಲಿ ಹೆಚ್ಚುತ್ತಿರುವ ಕೊಲೆ ಪ್ರಕರಣಗಳಿಗೆ ಡ್ರಗ್ಸ್ ನಂಟು" ಎಂಬ ಅವರ ವರದಿಗೆ "ಉದಯೋನ್ಮುಖ ಪತ್ರಕರ್ತ ಪ್ರಶಸ್ತಿ" ಲಭಿಸಿದೆ.
ಜು.29ರಂದು ಹುಬ್ಬಳ್ಳಿಯ ಸವಾಯಿ ಗಂಧರ್ವ ಸಭಾಂಗಣದಲ್ಲಿ ಪತ್ರಿಕಾ ದಿನಾಚರಣೆಯ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಸಂಘದ ಅಧ್ಯಕ್ಷ ಲೋಚನೇಶ ಹೂಗಾರ ತಿಳಿಸಿದ್ದಾರೆ.
Next Story





