ಹುಬ್ಬಳ್ಳಿ | ಅಡುಗೆ ಸಿಲಿಂಡರ್ ಸೋರಿಕೆಯಿಂದ ಅಗ್ನಿ ಅವಘಡ: ನಾಲ್ವರಿಗೆ ಗಾಯ

ಹುಬ್ಬಳ್ಳಿ : ಅಡುಗೆ ಸಿಲಿಂಡರ್ ಸೋರಿಕೆಯಿಂದ ಬೆಂಕಿ ಹೊತ್ತಿಕೊಂಡ ಪರಿಣಾಮ ನಾಲ್ವರು ಗಾಯಗೊಂಡಿರುವ ಘಟನೆ ನಗರದ ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶಕ್ತಿಕಾಲೊನಿಯ ಕಾರುಣ್ಯ ಅಪಾರ್ಟ್ ಮೆಂಟ್ 2ನೇ ಮಹಡಿಯಲ್ಲಿನ ಮನೆಯಲ್ಲಿ ನಡೆದಿದೆ.
ಘಟನೆಯಲ್ಲಿ ಮಹಾಂತೇಶ ಬಳ್ಳಾರಿ (40) ಅವರ ಪತ್ನಿ ಗಂಗಮ್ಮ ಬಳ್ಳಾರಿ(38) ಮಕ್ಕಳಾದ ಕಾರಣ್ಯ ಎಂ. ಬಳ್ಳಾರಿ (9) ಮನೋರಂಜನ್ ಬಳ್ಳಾರಿಗೆ (7) ಸುಟ್ಟ ಗಾಯಗಳಾಗಿವೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.
ರಾತ್ರಿ ಕುಟುಂಬದವರು ಮಲಗಿದ್ದಾಗ ಅಡುಗೆ ಸಿಲಿಂಡರ್ ಸೋರಿಕೆಯಾಗಿದೆ. ಫೋನ್ ಆನ್ ಮಾಡಿದಾಗ ಬೆಂಕಿ ಹೊತ್ತಿಕೊಂಡಿದೆ ಎಂಬುದಾಗಿ ತಿಳಿದುಬಂದಿದೆ ಎಂದರು.
Next Story





