ಧಾರವಾಡ ಕಾರ್ಯನಿರತ ಪತ್ರಕರ್ತರ ಸಂಘ | ʼವಾರ್ತಾಭಾರತಿʼಯ ಅಂಕಣಕಾರ ಸನತ್ ಕುಮಾರ್ ಬೆಳಗಲಿಗೆ 'ಜೀವಮಾನ ಸಾಧನೆ' ಪ್ರಶಸ್ತಿ ಪ್ರದಾನ

ಧಾರವಾಡ : ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ರವಿವಾರ ಹುಬ್ಬಳ್ಳಿ ಜಿ.ಸಿ.ನಗರದ ಮುನ್ಸಿಪಲ್ ಎಂಪ್ಲಾಯೀಜ್ ಹಾಲ್‌ನಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ 'ವಾರ್ತಾಭಾರತಿ'ಯ ಹಿರಿಯ ಅಂಕಣಕಾರ ಸನತ್‌ಕುಮಾರ್ ಬೆಳಗಲಿ ಅವರಿಗೆ 'ಜೀವಮಾನ ಸಾಧನೆ' ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸುನಿತಾ ಕುಲಕರ್ಣಿ ಹಾಗೂ ನಿರ್ಮಲಾ ಕುದರಿ ಅವರು 'ಅವ್ವ' ಪ್ರಶಸ್ತಿಗೆ ಭಾಜನರಾದರು.
ಈ ವೇಳೆ ಹುಡಾ ಅಧ್ಯಕ್ಷ ಶಾಕೀರ ಸನದಿ, ಸಂಘದ ಅಧ್ಯಕ್ಷ ಲೋಚನೇಶ ಹೂಗಾರ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಪುಂಡಲೀಕ ಬಾಳೋಜಿ, ಮಾಧ್ಯಮ ಅಕಾಡಮಿ ಸದಸ್ಯ ಜಿ.ಅಬ್ಬಾಸ್ ಮುಲ್ಲಾ, ಗಣಪತಿ ಗಂಗೊಳ್ಳಿ, ಸುಶಿಲೇಂದ್ರ ಕುಂದರಗಿ, ವಿಜಯ ಹೂಗಾರ ಮತ್ತಿತರರು ಉಪಸ್ಥಿತರಿದ್ದರು.
Next Story





