ʼಫಿಸಿಯೋಥೆರಪಿ 2024ʼ: ರಾಜ್ಯ ಸಮ್ಮೇಳನದ ಸಮಾರೋಪ

ಧಾರವಾಡ: ಕರ್ನಾಟಕ ಭೌತಚಿಕಿತ್ಸಕರ ಘಟಕದ ಪ್ರಥಮ ವಾರ್ಷಿಕ ರಾಜ್ಯ ಸಮ್ಮೇಳನದ ಸಮಾರೋಪ ಸಮಾರಂಭ ಎಸ್.ಡಿ.ಎಂ. ಫಿಸಿಯೊಥೆರಪಿ ಕಾಲೇಜಿನ ವತಿಯಿಂದ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಶನಿವಾರ ಯಶಸ್ವಿಯಾಗಿ ನಡೆಯಿತು.
ಶುಕ್ರವಾರದಂದು ಆರಂಭವಾಗಿದ್ದ ಸಮ್ಮೇಳನಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಚಾಲನೆ ನೀಡಿದ್ದರು. ಶನಿವಾರ ನಡೆದ ಸಮಾರೋಪ ಸಮಾರಂಭವನ್ನು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಉದ್ಘಾಟಿಸಿ ಮಾತನಾಡಿದರು.
ಬಸವರಾಜ ಹೊರಟ್ಟಿಗೆ ಇಪ್ತಿಕಾರ್ ಅಲಿ ಅವರಿಂದ ಸನ್ಮಾನ
ಲಿಮ್ಕಾ ಅವಾರ್ಡ್ ಗೆ ಭಾಜನರಾಗಿ ದಾಖಲೆ ನಿರ್ಮಿಸಿದ ಹಿರಿಯ ಉತ್ತರ ಕರ್ನಾಟಕದ ರಾಜಕೀಯ ನಾಯಕರು ಹಾಗು ಹಾಲಿ ವಿಧಾನ ಪರಿಷತ್ತಿನ ಸಭಾಪತಿಗಳಾದ ಬಸವರಾಜ್ ಹೊರಟ್ಟಿ ಅವರಿಗೆ ಡಾ. ಯು.ಟಿ ಇಫ್ತಿಕಾರ್ ಅಲಿ ಅವರು ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ಧಾರವಾಡದಲ್ಲಿ ನಡೆದ ಕರ್ನಾಟಕ ಭೌತಚಿಕಿತ್ಸಕರ ಸಮ್ಮೇಳನ ಯಶಸ್ವಿಯಾಗಿ ನೆರವೇರಿದ ಈ ಸಂದರ್ಭದಲ್ಲಿ ಮುಂದಿನ ವರ್ಷ ಈ ಸಮ್ಮೇಳನ ವನ್ನು ಮಡಿಕೇರಿಯಲ್ಲಿ ನಡೆಸಲಾಗುವುದು ಎಂದು ಸಭಾಪತಿಗಳಾದ ಬಸವರಾಜ್ ಹೊರಟ್ಟಿ ಅವರು ಘೋಷಣೆ ಮಾಡಿದರು.
ಈ ಸಂದರ್ಭದಲ್ಲಿ ಇಂಡಿಯನ್ ಅಸೋಸಿಯೇಷನ್ ಆಫ್ ಫಿಸಿಯೊಥೆರಪಿ ಅಧ್ಯಕ್ಷ ಡಾ.ಸಂಜೀವ್ ಜಾ, ಎಸ್‌ಡಿಎಂ ವಿವಿ ಉಪ ಕುಲಪತಿ ಡಾ.ನಿರಂಜನ್ ಕುಮಾರ, ಎಸ್‌ಡಿಎಂ ಫಿಸಿಯೊಥೆರಪಿಯ ಪ್ರಾಂಶುಪಾಲ ಡಾ.ಸಂಜಯ ಪರಮಾರ ಸಂಘಟನಾ ಕಾರ್ಯದರ್ಶಿ ಡಾ.ಮಧುಲಿಖಾ ಹೊರಟ್ಟಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ಕಾಲೇಜುಗಳ ಫಿಸಿಯೊಥೆರಪಿಸ್ಟ್‌ಗಳಿಗೆ ವೃತ್ತಿಪರ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.







