ಹಾವೇರಿ | ಸಾರಿಗೆ ಬಸ್-ಕಾರು ನಡುವೆ ಅಪಘಾತ: ಇಬ್ಬರು ಮೃತ್ಯು, ಓರ್ವ ಗಂಭೀರ

ಹಾವೇರಿ : ಇಲ್ಲಿನ ರಾಣೆಬೆನ್ನೂರು ತಾಲೂಕಿನ ಕುಮಾರಪಟ್ಟಣಂ ಗ್ರಾಮದ ಬೈಪಾಸ್ ಬಳಿ ಸಾರಿಗೆ ಬಸ್ ಹಾಗೂ ಕಾರಿನ ನಡುವೆ ಢಿಕ್ಕಿ ಸಂಭವಿಸಿ ಇಬ್ಬರು ಮೃತಟಪಟ್ಟಿರುವ ಘಟನೆ ನಡೆದಿದೆ.
ದಾವಣಗೆರೆ ಮೂಲದ ಪ್ರವೀಣ (36) ಮತ್ತು ವಿಜಯ ಮೃತರು ಎಂದು ತಿಳಿದು ಬಂದಿದೆ. ಘಟನೆಯಲ್ಲಿ, ಕೊಟ್ರೇಶ ಅಬಲೂರ ಎಂಬವರು ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಾರಿಗೆ ಬಸ್ ಅಥಣಿಯಿಂದ ದಾವಣಗೆರೆಗೆ ಹೊರಟಿತ್ತು. ಈ ವೇಳೆ, ಕುಮಾರಪಟ್ಟಣಂ ಗ್ರಾಮದ ಬೈಪಾಸ್ ಬಳಿ ಬಸ್ಗೆ ಕಾರು ಢಿಕ್ಕಿಯಾಗಿ ದುರ್ಘಟನೆ ಸಂಭವಿಸಿದೆ.
ಘಟನಾ ಸ್ಥಳಕ್ಕೆ ಕುಮಾರಪಟ್ಟಣಂ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
Next Story