ಧಾರವಾಡ | ಕಾರ್ಯನಿರತ ಪತ್ರಕರ್ತರ ಸಂಘದ ʼಜೀವಮಾನ ಸಾಧನೆ ಪ್ರಶಸ್ತಿʼಗೆ ವಾರ್ತಾಭಾರತಿಯ ಅಂಕಣಕಾರ ಸನತ್ ಕುಮಾರ್ ಬೆಳಗಲಿ ಆಯ್ಕೆ

ಸನತ್ ಕುಮಾರ ಬೆಳಗಲಿ
ಹುಬ್ಬಳ್ಳಿ : ಧಾರವಾಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದಿಂದ ಕೊಡಮಾಡುವ ಪ್ರಸಕ್ತ ವರ್ಷದ ʼಜೀವಮಾನ ಸಾಧನೆ ಪ್ರಶಸ್ತಿʼಗೆ ಹಿರಿಯ ಪತ್ರಕರ್ತ, ʼವಾರ್ತಾಭಾರತಿʼ ಅಂಕಣಕಾರ ಸನತ್ ಕುಮಾರ ಬೆಳಗಲಿ ಅವರು ಭಾಜನರಾಗಿದ್ದಾರೆ.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ನೇತೃತ್ವದ ಅವ್ವ ಟ್ರಸ್ಟ್ನಿಂದ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಕೊಡ ಮಾಡುವ ʼಅವ್ವ ಪತ್ರಕರ್ತೆ ಪ್ರಶಸ್ತಿʼ ಈ ಬಾರಿ ಹುಬ್ಬಳ್ಳಿಯವರಾದ ಸುನೀತಾ ಕುಲಕರ್ಣಿ ಹಾಗೂ ನಿರ್ಮಲಾ ಕುದರಿ ಅವರಿಗೆ ಸಂದಿದೆ.
ʼಜೀವಮಾನ ಸಾಧನೆ ಪ್ರಶಸ್ತಿʼ 11 ಸಾವಿರ ರೂ. ನಗದು, ಪ್ರಶಸ್ತಿ ಫಲಕ ಹಾಗೂ ಗೌರವ ಸನ್ಮಾನ ಒಳಗೊಂಡಿದೆ ʼಅವ್ವ ಪತ್ರಕರ್ತೆ ಪ್ರಶಸ್ತಿʼ ತಲಾ ಐದು ಸಾವಿರ ನಗದು, ಪ್ರಶಸ್ತಿ ಪತ್ರ ಮತ್ತು ಗೌರವ ಸನ್ಮಾನಗಳನ್ನು ಒಳಗೊಂಡಿದೆ. ಜು.27ರಂದು ರವಿವಾರ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.
Next Story





