ಹುಬ್ಬಳ್ಳಿಗೆ ತಟ್ಟಿದ ಸಾರಿಗೆ ಬಸ್ ಮುಷ್ಕರದ ಬಿಸಿ: ಪ್ರಯಾಣಿಕರ ಪರದಾಟ

ಹುಬ್ಬಳ್ಳಿ: ವಿವಿಧ ಬೇಡಿಕೆ ಈಡೇರಿಕರಗಾಗಿ ಒತ್ತಾಯಿಸಿ ಸಾರಿಗೆ ಬಸ್ ಸಿಬ್ಬಂದಿ ನಡೆಸುತ್ತಿರುವ ಮುಷ್ಕರದ ಬಿಸಿ ಹುಬ್ಬಳ್ಳಿಗೂ ತಟ್ಟಿದೆ. ಹೀಗಾಗಿ ನಗರದ ಹೊಸ ಬಸ್ ನಿಲ್ದಾಣ, ಹೊಸೂರು ಬಸ್ ನಿಲ್ದಾಣ ಹಾಗೂ ಸಿಬಿಟಿಯಲ್ಲಿ ಪ್ರಯಾಣಿಕರ ಪರದಾಟ ನಡೆಸಿದರು. ಹೊರ ರಾಜ್ಯಗಳಿಗೆ ತೆರಳುವ ಬಸ್ ಗಳು ಮಾತ್ರ ಓಡಾಟ ನಡೆಸುತ್ತಿವೆ. ಸ್ಥಳೀಯ ಬಸ್ ಗಳ ಸಂಚಾರ ಹಾಗೂ ನಗರ ಸಾರಿಗೆ ಬಸ್ ಸಂಚಾರ ಸ್ಥಗಿತಗೊಂಡಿದೆ.
ಹೊಸ ಬಸ್ ನಿಲ್ದಾಣದಲ್ಲಿ ಬಸ್ ಗಳು ಸಾಲುಗಟ್ಟಿ ನಿಂತಿವೆ. ಪ್ರಯಾಣಿಕರು ಗಂಟೆಗಟ್ಟಲೆ ಕಾದು ಕುಳಿತಿರುವ ದೃಶ್ಯ ಸಾಮಾನ್ಯವಾಗಿದೆ.
ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ಐದು ಡಿಪೋಗಳಿಂದ 8ವರೆಗೆ ನೂರು ಬಸ್ಸುಗಳು ಸಂಚಾರ ಮಾಡಬೇಕಾಗಿದ್ದು 74 ಬಸ್ಸುಗಳು ಸಂಚಾರ ಮಾಡುತ್ತಿವೆ. ಹೊಸೂರು ಬಸ್ ನಿಲ್ದಾಣ ಗೋಕುಲ ರಸ್ತೆ ಬಸ್ ನಿಲ್ದಾಣ ಕಲಘಟಗಿ ಕುಂದಗೋಳ ನವಲಗುಂದ ಅಣ್ಣಿಗೇರಿಗಳಿಂದ ಬಸ್ ಗಳ ಸಂಚಾರಕ್ಕೆ ಯಾವುದೇ ತೊಂದರೆ ಉಂಟಾಗಿಲ್ಲ. ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಪ್ರಯಾಣಿಕರು ಇರುವ ಮಾರ್ಗಗಳಿಗೆ ಬಸ್ ಗಳ ಹೊಂದಾಣಿಕೆಯನ್ನು ಮಾಡಿಕೊಂಡು ಕಳುಹಿಸಲಾಗುತ್ತಿದೆ ಎಂದು ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಮಾಹಿತಿ ನೀಡಿದ್ದಾರೆ.







