ಧಾರವಾಡ | ಮಾಜಿ ಸೈನಿಕನ ಮೇಲೆ ಹಲ್ಲೆ ಪ್ರಕರಣ; ಇಬ್ಬರು ಪೊಲೀಸರ ಅಮಾನತು

ಧಾರವಾಡ : ‘ಸೈನಿಕ ಮೆಸ್’ನಲ್ಲಿ ಮಾಜಿ ಸೈನಿಕರೊಬ್ಬರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡ ಉಪನಗರ ಠಾಣೆ ಎಎಸ್ಸೈ ವಿದ್ಯಾನಂದ ಸುಬೇದಾರ್ ಹಾಗೂ ಸಿಬ್ಬಂದಿ ರಾಚಪ್ಪ ಕಣಬೂರು ಅವರನ್ನು ಅಮಾನತುಗೊಳಿಸಲಾಗಿದೆ.
ಸಪ್ತಾಪೂರ ಬಾವಿಯ ವಿವೇಕಾನಂದ ವೃತ್ತದ ಸೈನಿಕ ಮೆಸ್‌ನಲ್ಲಿ ಸೆ.28ರಂದು ರಾತ್ರಿ ಗಲಾಟೆ ನಡೆದಿದ್ದು, ಘಟನೆಯಲ್ಲಿ ಮಾಜಿ ಸೈನಿಕ ರಾಮಪ್ಪ ನಿಪ್ಪಾಣಿ ಅವರು ಗಾಯಗೊಂಡಿದ್ದರು. ಪೊಲೀಸರು ತನ್ನ ಪತಿಯ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ ಎಂದು ಆರೋಪಿಸಿ ರಾಮಪ್ಪ ಅವರ ಪತ್ನಿ ದೂರು ನೀಡಿದ್ದರು.
ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
Next Story





