ಕ್ಯಾಲಿಫೋರ್ನಿಯಾದಲ್ಲಿ ನಿವೃತ್ತ ಅಧಿಕಾರಿಯಿಂದ ಗುಂಡಿನ ದಾಳಿ: ಐವರು ಮೃತ್ಯು

ನ್ಯೂಯಾರ್ಕ್: ಕ್ಯಾಲಿಫೋರ್ನಿಯಾದ ಆರೆಂಜ್ ಕೌಂಟಿಯ ಬೈಕರ್ಸ್ ಬಾರ್ ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಐದು ಜನರು ಸಾವನ್ನಪ್ಪಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಸಿಬಿಎಸ್ ಲಾಸ್ ಏಂಜಲೀಸ್ ಬುಧವಾರ ವರದಿ ಮಾಡಿದೆ.
ನಿವೃತ್ತ ಕಾನೂನು ಜಾರಿ ಅಧಿಕಾರಿಯೊಬ್ಬರು ಬಾರ್ ನಲ್ಲಿ ಗುಂಡು ಹಾರಿಸಿದ್ದು, ಘಟನೆಯ ನಂತರ ಇನ್ನೂ ಆರು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿ ತಿಳಿಸಿದೆ.
ಹಲವು ಜನರು ಗುಂಡಿನ ದಾಳಿಗೆ ಬಲಿಪಶುವಾಗಿದ್ದಾರೆ ಎಂದು ಆರೆಂಜ್ ಕಂಟ್ರಿ ಶೆರಿಫ್ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ 'ಎಕ್ಸ್ 'ನಲ್ಲಿ ಹಾಕಿರುವ ಪೋಸ್ಟ್ ನಲ್ಲಿ ತಿಳಿಸಿದ್ದಾರೆ,. ಶೆರಿಫ್ ಕಚೇರಿಯು ಹೆಚ್ಚಿನ ವಿವರಗಳನ್ನು ನೀಡಲಿಲ್ಲ
ಟ್ರಾಬುಕೊ ಕ್ಯಾನ್ಯ ನ್ ನಲ್ಲಿರುವ ಕುಕ್ಸ್ ಕಾರ್ನರ್ ಎಂಬ ಬೈಕರ್ಸ್ ಬಾರ್ ನಲ್ಲಿ ಗುಂಡಿನ ದಾಳಿ ನಡೆದಿದೆ ಎಂದು ಸಿಬಿಎಸ್ ವರದಿ ಹೇಳಿದೆ.
Next Story