ಇಟಗಿ : ಸ್ವಾಮಿ ವಿವೇಕಾನಂದರ ಜಯಂತಿ ಆಚರಣೆ

ಕುಕನೂರ: ಸ್ವಾಮಿ ವಿವೇಕಾನಂದರ ತತ್ವ–ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದು ಇಟಗಿ ಸರ್ಕಾರಿ ಆದರ್ಶ ವಿದ್ಯಾಲಯದ ಶಿಕ್ಷಕ ಜಯಪ್ಪ ಕನಕಮ್ಮನವರ್ ಹೇಳಿದರು.
ತಾಲೂಕಿನ ಇಟಗಿ ಗ್ರಾಮದ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಸೋಮವಾರ ಸ್ವಾಮಿ ವಿವೇಕಾನಂದರ ಜಯಂತಿ ಆಚರಿಸಿ ಮಾತನಾಡಿದ ಅವರು, ವಿವೇಕಾನಂದರು ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ವಿಶ್ವಕ್ಕೆ ಪರಿಚಯಿಸಿದ ಮಹಾನ್ ಚಿಂತಕರಾಗಿದ್ದು, ಅವರ ಸಂದೇಶಗಳು ಯುವಜನತೆಗೆ ಸದಾ ಪ್ರೇರಣಾದಾಯಕವಾಗಿವೆ ಎಂದರು.
ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯ ರಾಮರಡ್ಡೆಪ್ಪ ಹಾಳಕೇರಿ, ವಿವೇಕಾನಂದರ ಆದರ್ಶಗಳು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮತ್ತು ಶಿಸ್ತನ್ನು ಬೆಳೆಸುತ್ತವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಜಗದೀಶ ಅಜ್ಜಣ್ಣನವರ್, ರಂಗಪ್ಪ ಓಳೇಕರ್, ಬಸಮ್ಮ ಮೇಟಿ, ಶರಣಪ್ಪ ಬೊಮಳೇಕರ್, ನಾಗರಾಜ, ಶ್ರೀಶೈಲಪ್ಪ, ರೋಹಿಣಿ, ಸಂತೋಷ್ ಕುಮಾರಿ, ವಿರೂಪಾಕ್ಷಪ್ಪ ಮ್ಯಾಲಿ, ಶ್ವೇತ ಹಳ್ಳಿ, ಶ್ರೀದೇವಿ ಬೆಳದಡಿ, ಮುರಾರಿ ಭಜಂತ್ರಿ, ರಹಿಮನ್, ಬಸವರಾಜ ಸೇರಿದಂತೆ ಶಾಲಾ ಸಿಬ್ಬಂದಿ, ವಿದ್ಯಾರ್ಥಿಗಳ ಪಾಲಕರು ಹಾಗೂ ಇತರರು ಉಪಸ್ಥಿತರಿದ್ದರು.





