ಗದಗ : ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ವಿವಿಯಲ್ಲಿ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಗದಗ : ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ಮತ್ತು ಕ್ರೀಡಾ ನಿರ್ದೇಶನಾಲಯ ಹಾಗೂ ಎನ್‌ಎಸ್ಎಸ್ ಕೋಶದ ಸಹಯೋಗದಲ್ಲಿ 11ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಡಾ. ಶ್ರೀಧರ ವಿ. ಕುರಡಗಿ ಅವರು ಭಾಗವಹಿಸಿ "ಯೋಗ ಮಾನಸಿಕ ಹಾಗೂ ದೈಹಿಕ ಸಮತೋಲನಕ್ಕೆ ಮೂಲತತ್ವವಾಗಿದೆ. ಉತ್ತಮ ಆರೋಗ್ಯಕ್ಕಾಗಿ ಯೋಗದೊಂದಿಗೆ ಸರಿಯಾದ ಆಹಾರ ಹಾಗೂ ಸಕಾರಾತ್ಮಕ ಹವ್ಯಾಸಗಳು ಅಗತ್ಯವಿವೆ" ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾನ್ಯ ಕುಲಪತಿಗಳಾದ ಪ್ರೊ. ಡಾ. ಸುರೇಶ ವಿ. ನಾಡಗೌಡರ ಅವರು ವಹಿಸಿಕೊಂಡು ಮಾತನಾಡಿದರು. ಅವರು “ಯೋಗ ಪ್ರಾಚೀನ ಭಾರತೀಯ ತತ್ವಜ್ಞಾನವಾಗಿದ್ದು, ಇಂದಿನ ಜೀವನದಲ್ಲಿ ಶಾಂತಿ, ಆರೋಗ್ಯ ಮತ್ತು ಸಮ್ಮಿಲಿತ ಜೀವನ ಶೈಲಿಗೆ ಯೋಗ ಉತ್ತಮ ದಾರಿದೀಪವಾಗಿದೆ” ಎಂದು ಅಭಿಪ್ರಾಯಪಟ್ಟರು.
ಈ ಯೋಗ ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣ ನಿರ್ದೇಶನಾಲಯದ ಸಹಾಯಕ ನಿರ್ದೇಶಕರಾದ ಡಾ. ವೀರೇಶ್ ವಿಜಾಪುರ್, ಅಧಿಕಾರಿ ವೃಂದದವರು, ಉಪಸ್ಥಿತರಿದ್ದರು. ಎನ್ಎಸ್ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಶ್ರೀ ಪ್ರಶಾಂತ ಮೆರವಾಡೆ ಅವರು ಸ್ವಾಗತ ಕೋರಿದರು. ಚಂದ್ರಪ್ಪ ಬಾರಂಗಿ ಅವರು ಕಾರ್ಯಕ್ರಮ ನಿರೂಪಿದರು
ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಬೋಧಕ ವರ್ಗ, ಸಿಬ್ಬಂದಿ, ಎನ್‌ಎಸ್ಎಸ್ ಸ್ವಯಂಸೇವಕರು ಹಾಗೂ ವಿದ್ಯಾರ್ಥಿಗಳು ಯೋಗ ಅಭ್ಯಾಸದಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ವಿವಿಧ ಯೋಗಾಸನಗಳ ಪ್ರದರ್ಶನ ಹಾಗೂ ಶ್ವಾಸೋಚ್ಛ್ವಾಸದ ನಿಯಂತ್ರಣದ ತಂತ್ರಗಳನ್ನು ಹಂಚಿಕೊಳ್ಳಲಾಯಿತು.