Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಗಾಳಿ ಬೆಳಕು
  5. ತಾಜ್‌ಮಹಲ್‌ಗೊಂದು ಫೇಸ್ ಪ್ಯಾಕ್!

ತಾಜ್‌ಮಹಲ್‌ಗೊಂದು ಫೇಸ್ ಪ್ಯಾಕ್!

ನಟರಾಜ್ ಹುಳಿಯಾರ್ನಟರಾಜ್ ಹುಳಿಯಾರ್3 Feb 2026 12:43 PM IST
share
ತಾಜ್‌ಮಹಲ್‌ಗೊಂದು ಫೇಸ್ ಪ್ಯಾಕ್!

ಮುಲ್ತಾನಿ ಮಿಟ್ಟಿ ಚಿಕಿತ್ಸೆಯನ್ನು ನಾನಾರ್ಥಗಳ ರೂಪಕವಾಗಿ ನೋಡಿದರೆ, ದೇಶದೇಶಗಳ ನಡುವೆ ಹುಟ್ಟಿಕೊಳ್ಳುವ ಕಿರಿಕಿರಿಗಳ ನಡುವೆಯೂ ಸಂಸ್ಕೃತಿಗಳ ಕೊಡುಕೊಳ್ಳುವಿಕೆಯ ಬಗ್ಗೆ ನಾವು ಮುಕ್ತವಾಗಿ ಯೋಚಿಸಬೇಕಾದ ಅಗತ್ಯವನ್ನು ಈ ರೂಪಕ ಸೂಚಿಸುತ್ತದೆ. ಅಮರ ಪ್ರೇಮದ ಸ್ಮಾರಕವಾದ ತಾಜ್‌ಮಹಲ್ ಕಟ್ಟಿಸಿದವನು ಮೊಗಲ್ ದೊರೆ ಶಹಜಹಾನ್. ಅದರ ಚಿಕಿತ್ಸೆಗೆ ಬೇಕಾದ ಮಣ್ಣಿನ ವಿವರಗಳಿರುವುದು ಹದಿನಾರನೇ ಶತಮಾನದ ಮೊಗಲ್ ಜರ್ನಲ್‌ನಲ್ಲಿ. ತಾಜ್‌ಮಹಲ್ ಕಳೆಗುಂದಿದಾಗ ಅದಕ್ಕೆ ಹೊಸ ಹೊಳಪು ಬರುವುದು ಪಾಕಿಸ್ತಾನದ ಮುಲ್ತಾನಿ ಮಣ್ಣಿನಿಂದ!

ದೇಶಗಳ ಆಳುವ ವರ್ಗಗಳು, ಸಂಕುಚಿತ ರಾಜಕಾರಣಿಗಳು, ಆಕ್ರಮಣಕಾರಿಗಳು ಏನಾದರೂ ಹೇಳುತ್ತಿರಲಿ, ಎಲ್ಲ ಸಂಸ್ಕೃತಿಗಳಲ್ಲೂ ಕಲಾವಿದರು, ಸೂಕ್ಷ್ಮಜೀವಿಗಳು ಮಾತ್ರ ಇತರ ಸಂಸ್ಕೃತಿಗಳಿಂದ ಪ್ರೇರಣೆಗಳನ್ನು ಪಡೆಯುತ್ತಲೇ ಇರುತ್ತಾರೆ. ಯುರೋಪ್‌ನ ವಸಾಹತುಕಾರ ಥಿಯರಿಸ್ಟರು ಆಫ್ರಿಕಾವನ್ನು ‘ಅನಾಗರಿಕ’, ‘ಹಿಂದುಳಿದ’ ಖಂಡ ಎಂದು ಕರೆಯುತ್ತಿದ್ದರೂ, ಯುರೋಪಿನ ಕಲಾವಿದರು ಈ ಥಿಯರಿಯ ಹುಳಗಳನ್ನು ತಮ್ಮ ತಲೆಯೊಳಕ್ಕೆ ಬಿಟ್ಟುಕೊಳ್ಳಲಿಲ್ಲ! ಯುರೋಪಿನ ದೊಡ್ಡ ಕಲಾವಿದರು ಇಪ್ಪತ್ತನೆಯ ಶತಮಾನದ ಶುರುವಿನಲ್ಲಿ ಆಫ್ರಿಕಾದ ಬುಡಕಟ್ಟುಗಳ ಜನ ರೂಪಿಸುತ್ತಿದ್ದ ಮುಖವಾಡಗಳು ಹಾಗೂ ಶಿಲ್ಪಗಳ ಸಾಂಕೇತಿಕ ಅರ್ಥಗಳನ್ನು ನೋಡಿ ಚಕಿತರಾದರು; ಅವನ್ನು ಅಭ್ಯಾಸ ಮಾಡುತ್ತಾ ‘ಕ್ಯೂಬಿಸಂ’ ಎಂಬ ಹೊಸ ಕಲಾಮಾದರಿಯನ್ನೇ ಬೆಳೆಸಿದರು.

ಅಷ್ಟೊತ್ತಿಗಾಗಲೇ ‘ಆಫ್ರಿಕನ್ ನಾಡುಗಳನ್ನು ನಾಗರಿಕೀಕರಣಗೊಳಿಸುತ್ತೇವೆ’ ಎಂಬ ಪಿಳ್ಳೆ ನೆವದಲ್ಲಿ ಆಫ್ರಿಕಾವನ್ನು ಆಕ್ರಮಿಸಿಕೊಂಡಿದ್ದ ಬಿಳಿಯರು, ವಸಾಹತು ಅಧಿಕಾರಿಗಳು, ಸೇನೆಯವರು ಅಲ್ಲಿ ಸಿಕ್ಕಿದ್ದನ್ನೆಲ್ಲ ದೋಚಿಕೊಂಡು ವಾಪಸ್ ಬರುತ್ತಿದ್ದರು. ಅವರಲ್ಲಿ ಕೆಲವರು ಆಫ್ರಿಕಾದ ಕಲಾಕೃತಿಗಳನ್ನೂ ಹಡಗಿನಲ್ಲಿ ಹೇರಿಕೊಂಡು ಬರುತ್ತಿದ್ದರು. ಕೆಲವು ಫ್ರೆಂಚ್ ಆಡಳಿತಗಾರರು ಆಫ್ರಿಕಾದ ಬುಡಕಟ್ಟುಗಳು ಮಾಡಿದ್ದ ವಿಶಿಷ್ಟ ಮುಖವಾಡಗಳನ್ನು ಪ್ಯಾರಿಸ್‌ಗೂ ಹೊತ್ತೊಯ್ದಿದ್ದರು.

ಯುರೋಪಿನ ಸೂಕ್ಷ್ಮ ಕಲಾವಿದರು ಆಫ್ರಿಕಾವನ್ನು ಈ ಲಾಭಕೋರ ವಸಾಹತುಕಾರರಂತೆ ನೋಡದೆ, ಅಲ್ಲಿನ ಆದಿಮ ಕಲೆಯ ದಿವ್ಯ ಸ್ಫೂರ್ತಿಗಾಗಿ ಅತ್ತ ತಿರುಗಿದರು. ಸ್ಪೇನ್‌ನ ಮಹಾನ್ ಕಲಾವಿದ ಪಾಬ್ಲೋ ಪಿಕಾಸೋಗೆ ಒಂದು ಘಟ್ಟದಲ್ಲಿ ತಾನು ಬಳಸುತ್ತಿದ್ದ ಪಶ್ಚಿಮದ ವಾಸ್ತವವಾದಿ ಕಲೆ ಯಾಕೋ ಮಾನವ ಸತ್ಯಗಳನ್ನು, ಮನುಷ್ಯರ ಒಳಮುಖಗಳನ್ನು ಹಿಡಿದಿಡಲು ಸಾಲದು ಎನ್ನಿಸಿರಬೇಕು. ಪಿಕಾಸೋ ಪ್ಯಾರಿಸ್‌ನ ಮ್ಯೂಸಿಯಂಗೆ ಭೇಟಿ ಕೊಟ್ಟ ಅಮೃತ ಘಳಿಗೆ ಅವನ ಕಲೆಗೆ ಹೊಸ ತಿರುವನ್ನೇ ಕೊಟ್ಟಿತು. ಸದಭಿರುಚಿಯ ಫ್ರೆಂಚ್ ಅಧಿಕಾರಿಯೊಬ್ಬ ಆಫ್ರಿಕಾದ ಬುಡಕಟ್ಟುಗಳು ಮಾಡಿದ್ದ ವಿಶಿಷ್ಟ ಮುಖವಾಡಗಳನ್ನು ಪ್ಯಾರಿಸ್ ಮ್ಯೂಸಿಯಂನಲ್ಲಿ ತಂದಿಟ್ಟಿದ್ದ. ಪಿಕಾಸೋ ಈ ಆಫ್ರಿಕನ್ ಮುಖವಾಡಗಳನ್ನು ನೋಡನೋಡುತ್ತಾ, ಶಿಲ್ಪಗಳ ಹೊಸ ಸಾಧ್ಯತೆಯನ್ನು ಅರಿಯತೊಡಗಿದ.

ಪಿಕಾಸೋ ಹಾಗೂ ಅವನ ವಾರಗೆಯ ಕಲಾವಿದರು ಪಶ್ಚಿಮ ಆಫ್ರಿಕಾ ಹಾಗೂ ಸೆಂಟ್ರಲ್ ಆಫ್ರಿಕಾದ ಮುಖವಾಡಗಳು ಹಾಗೂ ಶಿಲ್ಪಗಳನ್ನು ಆಳವಾಗಿ ಅಧ್ಯಯನ ಮಾಡತೊಡಗಿದರು. ಈ ಅಧ್ಯಯನದ ಫಲವಾಗಿ, ಪಿಕಾಸೋನಂಥ ಮಹಾಪ್ರತಿಭೆಯ ನೋಟ, ಸಂವೇದನೆ ಹಾಗೂ ಕೈಗಳಲ್ಲಿ ಪಶ್ಚಿಮದಲ್ಲಿ ‘ಕ್ಯೂಬಿಸಂ’ ಎಂಬ ಕಲಾ ಚಳವಳಿಯೇ ಶುರುವಾಯಿತು. ವಸ್ತುಗಳನ್ನು ಬೇರೆ ಬೇರೆ ಕೋನಗಳಿಂದ ಮಂಡಿಸುವ ಕ್ಯೂಬಿಸಂ ಎಂಬ ಸೂಕ್ಷ್ಮ ಕಲೆ ಹುಟ್ಟಿದ್ದು ಆಫ್ರಿಕನ್ ಕಲೆಯ ಪ್ರೇರಣೆಯಿಂದ. ವಸಾಹತುಕಾರರ ಪೂರ್ವಗ್ರಹಗಳಿಂದ ಬಿಡಿಸಿಕೊಂಡು, ಯುರೋಪಿನ ಕಲಾವಿದರು ಮುಕ್ತವಾಗಿ ಆಫ್ರಿಕನ್ ಸಂಸ್ಕೃತಿಯನ್ನು ನೋಡಿದ್ದರಿಂದ ಪಶ್ಚಿಮದ ಕಲೆಯ ದಿಕ್ಕು ಬದಲಾಯಿತು. ಆಫ್ರಿಕಾದ ಕಾಂಗೋ ನದಿಯ ದಂಡೆಯ ಶಿಲ್ಪ ಕಲೆಯಿಂದ ಯುರೋಪಿಯನ್ ಶಿಲ್ಪಕಲೆ ಮರುಜೀವ ಪಡೆಯತೊಡಗಿತು.

ಚರಿತ್ರೆಯ ಇಂಥ ಘಟನೆಗಳು ಸೂಚಿಸುತ್ತಿರುವ ಸತ್ಯ ಇದು: ಕಲಾವಿದರು, ಸೂಕ್ಷ್ಮಜೀವಿಗಳು, ಲೇಖಕರು, ಪತ್ರಕರ್ತರು, ಒಟ್ಟಾರೆಯಾಗಿ ಆರೋಗ್ಯಕರ ಮನಸ್ಸುಳ್ಳವರು ದೇಶದೇಶಗಳ ನಡುವಣ ಸಂಬಂಧಗಳನ್ನು ಅಧಿಕಾರಸ್ಥರ ಕಾಲಕಾಲದ ನಿಲುವುಗಳನ್ನು ಮೀರಿ ಸ್ವತಂತ್ರವಾಗಿ ನೋಡುತ್ತಿರಬೇಕಾಗುತ್ತದೆ. ಭಾರತದ ಮಹಾನ್ ಕಲಾಸ್ಮಾರಕ ತಾಜ್‌ಮಹಲ್ ಕಳೆಗುಂದಿ, ಒಮ್ಮೊಮ್ಮೆ ಹಳದಿ ಬಣ್ಣಕ್ಕೆ ತಿರುಗುವ ಸುದ್ದಿಯನ್ನು ನೀವು ಕೇಳಿರಬಹುದು. ಆಗ್ರಾದ ತಾಜ್‌ಮಹಲ್‌ನ ಅಮೃತಶಿಲೆ ಹಳದಿ ಬಣ್ಣಕ್ಕೆ ತಿರುಗಿದಾಗಲೆಲ್ಲ ಅದಕ್ಕೊಂದು ಚಿಕಿತ್ಸೆ ಕೊಡುತ್ತಾರೆ. ಈ ಚಿಕಿತ್ಸೆಯ ಹೆಸರು ಮುಲ್ತಾನಿ ಮಿಟ್ಟಿ ಚಿಕಿತ್ಸೆ. ಮುಲ್ತಾನಿ ಮಣ್ಣಿನ ಚಿಕಿತ್ಸೆ ಪಡೆಯಲು ತಾಜ್‌ಮಹಲ್ ಆಗಾಗ ಸಿದ್ಧವಾಗುತ್ತಿರುತ್ತದೆ. 1994, 2001, 2008ರಲ್ಲಿ ತಾಜ್‌ಮಹಲ್‌ಗೆ ಈ ಮುಲ್ತಾನಿ ಮಣ್ಣಿನ ಚಿಕಿತ್ಸೆ ಕೊಡಿಸಲಾಗಿತ್ತು. 2022ರ ಸುಮಾರಿನಲ್ಲೂ ಈ ಚಿಕಿತ್ಸೆ ನಡೆಯಿತು. ಈ ಮುಲ್ತಾನಿ ಮಣ್ಣಿನ ಚಿಕಿತ್ಸೆಯ ವಿವರಗಳು 16ನೆಯ ಶತಮಾನದ ‘Ain-i-Akbary’ ಎಂಬ ಮೊಗಲ್ ಜರ್ನಲ್‌ನಲ್ಲಿದ್ದವು ಎಂದು ‘ಸಂಡೇ ಟೆಲಿಗ್ರಾಫ್’ ವರದಿ ಸೂಚಿಸುತ್ತದೆ.

ಪಾಕಿಸ್ತಾನದ ಚಿನಾಬ್ ನದಿ ದಂಡೆಯಲ್ಲಿರುವ ಮುಲ್ತಾನಿ ನಗರ ಸೂಫಿ ಸಂತರ ನಗರ ಎಂದೂ ಖ್ಯಾತವಾಗಿದೆ. ಮುಲ್ತಾನಿಯಲ್ಲಿ ದೊರಕುವ ಮಣ್ಣಿನಲ್ಲಿ ಸುಣ್ಣದ ಅಂಶ ಇರುತ್ತದೆ. ಮುಖದ ಸೌಂದರ್ಯವನ್ನು ಕಾಪಾಡಲು ಮುಲ್ತಾನಿಯ ಮಹಿಳೆಯರು ಮನೆಗಳಲ್ಲೂ ಈ ಮಣ್ಣನ್ನು ಬಳಸುತ್ತಾರೆ. ಬ್ಯೂಟಿ ಪಾರ್ಲರುಗಳಲ್ಲೂ ಈ ಮಣ್ಣನ್ನು ಬಳಸುತ್ತಾರೆ. ಕೊಳೆ ತೊಳೆಯುವ ವಿಶೇಷ ಗುಣ ಮುಲ್ತಾನಿ ಮಿಟ್ಟಿಗೆ ಇದೆ. ತಾಜ್‌ಮಹಲ್ ಎಲ್ಲೆಲ್ಲಿ ಹಳದಿ ಬಣ್ಣಕ್ಕೆ ತಿರುಗಿದೆಯೋ ಅಲ್ಲೆಲ್ಲ ಎರಡು ಮಿಲಿಮೀಟರ್ ದಪ್ಪಕ್ಕೆ ಮುಲ್ತಾನಿ ಮಣ್ಣನ್ನು ಮೆತ್ತಲಾಗುತ್ತದೆ. ಅಂದರೆ ತಾಜ್‌ಮಹಲ್‌ಗೂ ಒಂದು ಫೇಸ್ ಪ್ಯಾಕ್! ಹೀಗೆ ಈ ಮುಲ್ತಾನಿ ಮಿಟ್ಟಿ ಚಿಕಿತ್ಸೆ ನಡೆಯುತ್ತದೆ.

ಮುಲ್ತಾನಿ ಮಿಟ್ಟಿ ಚಿಕಿತ್ಸೆಯನ್ನು ನಾನಾರ್ಥಗಳ ರೂಪಕವಾಗಿ ನೋಡಿದರೆ, ದೇಶದೇಶಗಳ ನಡುವೆ ಹುಟ್ಟಿಕೊಳ್ಳುವ ಕಿರಿಕಿರಿಗಳ ನಡುವೆಯೂ ಸಂಸ್ಕೃತಿಗಳ ಕೊಡುಕೊಳ್ಳುವಿಕೆಯ ಬಗ್ಗೆ ನಾವು ಮುಕ್ತವಾಗಿ ಯೋಚಿಸಬೇಕಾದ ಅಗತ್ಯವನ್ನು ಈ ರೂಪಕ ಸೂಚಿಸುತ್ತದೆ. ಅಮರ ಪ್ರೇಮದ ಸ್ಮಾರಕವಾದ ತಾಜ್‌ಮಹಲ್ ಕಟ್ಟಿಸಿದವನು ಮೊಗಲ್ ದೊರೆ ಶಹಜಹಾನ್. ಅದರ ಚಿಕಿತ್ಸೆಗೆ ಬೇಕಾದ ಮಣ್ಣಿನ ವಿವರಗಳಿರುವುದು ಹದಿನಾರನೇ ಶತಮಾನದ ಮೊಗಲ್ ಜರ್ನಲ್‌ನಲ್ಲಿ. ತಾಜ್‌ಮಹಲ್ ಕಳೆಗುಂದಿದಾಗ ಅದಕ್ಕೆ ಹೊಸ ಹೊಳಪು ಬರುವುದು ಪಾಕಿಸ್ತಾನದ ಮುಲ್ತಾನಿ ಮಣ್ಣಿನಿಂದ!

ಈ ಮುಲ್ತಾನಿ ಮಿಟ್ಟಿ ಚಿಕಿತ್ಸೆಯನ್ನು ಸ್ಟಡಿ ಮಾಡಲು ಇಟಲಿಯಿಂದ ಪಾರಂಪರಿಕ ಕಟ್ಟಡಗಳ ಸಂರಕ್ಷಣೆ ಮಾಡುವ ರೋಮ್ ಸಂಸ್ಥೆಯೊಂದರ ವಿಜ್ಞಾನಿಗಳು 2022ರಲ್ಲಿ ಆಗ್ರಾಕ್ಕೆ ಬಂದರು. ತಾಜ್‌ಮಹಲ್‌ಗೆ ಮುಲ್ತಾನಿ ಮಿಟ್ಟಿ ಚಿಕಿತ್ಸೆ ನಡೆಯುತ್ತಿದ್ದಾಗ ಈ ವಿಜ್ಞಾನಿಗಳು ಆಗ್ರಾದಲ್ಲಿದ್ದು, ಚಿಕಿತ್ಸೆ ಹೇಗೆ ಕೆಲಸ ಮಾಡುತ್ತದೆಂದು ನೋಡಿದರು. ಇಟಲಿಯಲ್ಲಿ ಕಪ್ಪಾಗುತ್ತಿರುವ ಅಮೃತಶಿಲೆಯ ಪ್ರತಿಮೆಗಳಿಗೆ ಮುಲ್ತಾನಿ ಮಿಟ್ಟಿ ಚಿಕಿತ್ಸೆ ಕೊಡುವ ಕಲೆಯನ್ನು ಭಾರತದಲ್ಲಿ ಕಲಿಯತೊಡಗಿದರು. ನಾಲ್ಕು ವರ್ಷಗಳ ಕೆಳಗೆ, ತಾಜ್‌ಮಹಲ್‌ನ ಮುಲ್ತಾನಿ ಮಿಟ್ಟಿ ಚಿಕಿತ್ಸೆ ಆಗ್ರಾದ ಹಲವು ಬಗೆಯ ಮಾಲಿನ್ಯಗಳಿಂದ ಕೂಡ ತಾಜ್‌ಮಹಲನ್ನು ರಕ್ಷಿಸಿದ್ದನ್ನು ಕಂಡ ತಾಜ್‌ಮಹಲ್‌ನ ಉಸ್ತುವಾರಿಗಳು ನೆಮ್ಮದಿಗೊಂಡರು.

ಆದ್ದರಿಂದಲೇ ಸಂಸ್ಕೃತಿಗಳ ನಡುವಣ ಸ್ವೀಕಾರಗಳ ಬಗ್ಗೆ ನಾವು ನಾಡುಗಳ ಗಡಿಗಳ ಸಂಕುಚಿತ ಗೆರೆಗಳನ್ನು ದಾಟಿ ಯೋಚಿಸಬೇಕಾಗುತ್ತದೆ. ಜಗತ್ತಿನ ವಿವಿಧ ದಿಕ್ಕುಗಳಿಂದ ಸಂಗೀತ, ಕಲೆ, ಆಟ, ಊಟ ಎಲ್ಲವನ್ನೂ ಪಡೆದು ಆನಂದಿಸುವ ನಾವು ದೇಶದೇಶಗಳ ಮನುಷ್ಯ- ಮನುಷ್ಯರ ನಡುವೆ ಕೃತಕ ಗೋಡೆಗಳನ್ನು ನಿರ್ಮಿಸಲು ಹೊರಡುತ್ತೇವೆ; ಒಂದು ಸಂಸ್ಕೃತಿ ಮತ್ತೊಂದರಿಂದ ಪಡೆದು ಸಮೃದ್ಧವಾಗುವ ಸಾಧ್ಯತೆಯನ್ನು ಕೈಬಿಟ್ಟು ಪೂರ್ವಗ್ರಹಗಳನ್ನು ನಿರ್ಮಿಸಿಕೊಳ್ಳುತ್ತೇವೆ. ಪಶ್ಚಿಮದ ಸಂಗೀತ ಏಕತಾನತೆಯಿಂದ ದಣಿದಿದ್ದಾಗ ಅದು ಆಫ್ರಿಕಾದ ಬುಡಕಟ್ಟು ಸಂಗೀತದಿಂದ ಹೊಸ ಜೀವ ಪಡೆಯಿತು. ಇವತ್ತು ನಾವು ಕೇಳುವ ಜಾಸ್ ಸಂಗೀತ ಆಫ್ರಿಕನ್ ಮೂಲದಿಂದ ಬಂದದ್ದು.

ಪ್ರಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರಹಮಾನ್ ತಮ್ಮ ಸಿನೆಮಾ ಸಂಗೀತ ಒಮ್ಮೆ ಪುನರಾವರ್ತನೆಯ ಜಾಡಿಗೆ ಬಿದ್ದಾಗ, ಭಾರತದ ವಿವಿಧ ಭಾಗಗಳ ಗುಡ್ಡಗಾಡುಗಳ ಸಂಗೀತದ ಮಟ್ಟುಗಳನ್ನು ಹುಡುಕಿಕೊಂಡು ಹೋದರು; ಅವನ್ನು ಬಳಸಿ ಜನಪ್ರಿಯ ಸಂಗೀತದ ಹೊಸ ಲಯಗಳನ್ನು ರೂಪಿಸಿದರು; ಪಶ್ಚಿಮದ ಸಂಗೀತದಿಂದಲೂ ರಹಮಾನ್ ಅನೇಕ ಅಂಶಗಳನ್ನು ಬೆಸೆಯುತ್ತಾ ಬಂದರು. ನಮ್ಮ ಸಂಗೀತ ನಿರ್ದೇಶಕ ಹಂಸಲೇಖ ತಮ್ಮ ಸಂಗೀತಕ್ಕೆ ಹೊಸ ಜೀವ ತುಂಬಲು ಕನ್ನಡನಾಡಿನ ಮೂಲೆ ಮೂಲೆಗಳ ದೇಶೀ ಮಟ್ಟುಗಳನ್ನು ಹುಡುಕಿಕೊಂಡು ಹೋದರು. ಇದರಿಂದ ದೇಶೀ ಸಂಗೀತವೂ ಮರುಜೀವ ಪಡೆಯಿತು; ದೇಶೀ ಮಟ್ಟುಗಳಿಂದ ಹಂಸಲೇಖರು ಸೃಷ್ಟಿಸುವ ಸಂಗೀತಕ್ಕೂ ಹೊಸ ಜೀವ ಬಂತು. ಇದಕ್ಕೂ ಮೊದಲು, ಆರ್.ಡಿ. ಬರ್ಮನ್ ಕೂಡ ದೇಶಿ ಲಯಗಳನ್ನು ಹುಡುಕಿಕೊಂಡು ಹೋಗಿದ್ದನ್ನು ಗೆಳೆಯರೊಬ್ಬರು ನೆನಪಿಸಿದರು.

ದೇಶಿಯಿರಲಿ, ವಿದೇಶಿಯಿರಲಿ, ಒಂದು ಸಂಸ್ಕೃತಿಯ ಆರೋಗ್ಯಕ್ಕೆ ಬೇಕಾದದ್ದನ್ನು ನಾವು ತೆರೆದ ಮನಸ್ಸಿನಿಂದ ನೋಡುತ್ತಿರಬೇಕು ಎಂದು ಈ ಪ್ರಸಂಗಗಳು ಸೂಚಿಸುತ್ತವೆ. ತಾಜ್‌ಮಹಲ್ ಕಳೆಗುಂದಿದಾಗ ಅದು ಪಾಕಿಸ್ತಾನದ ಸೂಫಿ ಸಂತರ ನಗರ ಮುಲ್ತಾನಿಯ ಮಣ್ಣಿನಿಂದ ಹೊಸ ಕಳೆ ಪಡೆಯುತ್ತದೆ ಎನ್ನುವುದು ಹಲವು ಆರೋಗ್ಯಕರ ಅರ್ಥಗಳನ್ನು ಹೊರಡಿಸಬಲ್ಲದು. ಮುಕ್ತ ಸಂಸ್ಕೃತಿಗಳಂತೆ ಹುಲುಮಾನವರು ಕೂಡ ಮುಕ್ತ ಮನಸ್ಸಿನಿಂದ ಪಡೆಯುವ, ಬೆಳೆಯುವ, ಉಳಿಯುವ ಕಲೆಯನ್ನು ನಿತ್ಯ ನವೀಕರಿಸಿಕೊಂಡರೆ ಎಷ್ಟು ಚಂದ!

Tags

Taj Mahal
share
ನಟರಾಜ್ ಹುಳಿಯಾರ್
ನಟರಾಜ್ ಹುಳಿಯಾರ್
Next Story
X