Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಗಾಳಿ ಬೆಳಕು
  5. ಅರಸು: ಆದರ್ಶ ಚಿಂತನೆ ಮತ್ತು...

ಅರಸು: ಆದರ್ಶ ಚಿಂತನೆ ಮತ್ತು ಪ್ರಾಕ್ಟಿಕಲ್ ರಾಜಕಾರಣ

ನಟರಾಜ್ ಹುಳಿಯಾರ್ನಟರಾಜ್ ಹುಳಿಯಾರ್24 Aug 2026 12:31 PM IST
share
ಅರಸು: ಆದರ್ಶ ಚಿಂತನೆ ಮತ್ತು ಪ್ರಾಕ್ಟಿಕಲ್ ರಾಜಕಾರಣ

ಮೊನ್ನೆ ಗೆಳೆಯರು ದೇವರಾಜ ಅರಸುರ ಹುಟ್ಟಿದ ದಿನವನ್ನು (20 ಆಗಸ್ಟ್ 1915) ನೆನಪಿಸಿದಾಗ, ಏಕಾಏಕಿ ಅರಸು ಅವರ ಬುದ್ಧಿಜೀವಿ ವ್ಯಕ್ತಿತ್ವ ತೇಲಿ ಬಂತು. ಕಾರಣ, ಲೋಹಿಯಾ ಜೀವನ ಚರಿತ್ರೆ ‘ಡಾಕ್ಟರ್ ಸಾಹೇಬ್’ ಪುಸ್ತಕ ಬರೆಯಲು ನಾನು ಈವರೆಗೆ ಮಾಡಿ.ಕೆ.ೂಂಡ ಟಿಪ್ಪಣಿಗಳಲ್ಲಿ, ಲೋಹಿಯಾರ ‘ಮ್ಯಾನ್‌ಕೈಂಡ್’ ಪತ್ರಿಕೆಯನ್ನು ಅರಸು ತಪ್ಪದೆ ಓದುತ್ತಿದ್ದರು ಎಂಬ ವಿವರ ನನ್ನಲ್ಲಿ ಉಳಿದಿತ್ತು. ‘ಮ್ಯಾನ್‌ಕೈಂಡ್’ ಲೋಹಿಯಾ ಹಾಗೂ ಸಂಗಾತಿಗಳು ಸಂಪಾದಿಸುತ್ತಿದ್ದ ಭಾರತದ ಅತ್ಯಪೂರ್ವ ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ವಿಶ್ಲೇಷಣೆಗಳ ಮಾಸಪತ್ರಿಕೆ ಎಂಬುದು ಹಲವರಿಗೆ ತಿಳಿದಿರಲಿಕ್ಕಿಲ್ಲ.

ಕಳೆದ ವರ್ಷ ‘ಮ್ಯಾನ್‌ಕೈಂಡ್’ನ ಹತ್ತಾರು ಸಂಚಿಕೆಗಳನ್ನು ಪ್ರೊಫೆಸರ್ ರವಿವರ್ಮಕುಮಾರ್ ಹಾಗೂ ಸವಿತಾ ನಾಗಭೂಷಣ ಕೊಟ್ಟಾಗ ರೋಮಾಂಚನದಿಂದ ತಿರುವಿ ಹಾಕಿದೆ: ‘ಲೋಹಿಯಾರ ಪುಟ್ಟ ಸಮಾಜವಾದಿ ಗುಂಪು ಎಂಥ ಅದ್ಭುತವಾದ ಐಡಿಯಾಗಳ ಪತ್ರಿಕೆ ತಂದಿದೆ!’ ಎಂದು ಮತ್ತೊಮ್ಮೆ ಕೃತಜ್ಞತೆ ಹುಟ್ಟಿತು. ದೇಶ ವಿದೇಶಗಳ ಸಮಾಜವಾದಿ ಚಿಂತಕ-ಚಿಂತಕಿಯರು ಬರೆಯುತ್ತಿದ್ದ ಪತ್ರಿಕೆ ಇದು. ಕರ್ನಾಟಕ ರೂಪಿಸಿದ ಮೂವರು ವಿಶಿಷ್ಟ-ವಿಭಿನ್ನ ನಾಯಕರಾದ ದೇವರಾಜ ಅರಸು, ಶಾಂತವೇರಿ ಗೋಪಾಲಗೌಡ, ಎಂ.ಡಿ. ನಂಜುಂಡಸ್ವಾಮಿ ‘ಮ್ಯಾನ್‌ಕೈಂಡ್’ನ ಓದುಗರಾಗಿದ್ದರು. ಗೋಪಾಲಗೌಡರು ‘ಮ್ಯಾನ್‌ಕೈಂಡ್’ನ ಸಂಪಾದಕೀಯ ಸಮಿತಿಯಲ್ಲಿದ್ದರು. ಲೋಹಿಯಾ ನಿಧನದ ನಂತರ, ಪೂರ್ಣಚಂದ್ರ ತೇಜಸ್ವಿ ಕೂಡ ಸಂಪಾದಕೀಯ ಸಮಿತಿಯಲ್ಲಿದ್ದರು. ಕರ್ನಾಟಕಕ್ಕೆ ಈ ಎಲ್ಲರ ಕೊಡುಗೆಯ ಹಿಂದೆ ಲೋಹಿಯಾ ಸಮಾಜವಾದದ ಚಿಂತನೆ, ರಾಜಕಾರಣಗಳಿವೆ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ.

ಹದಿಹರೆಯದಲ್ಲಿ ಕಮ್ಯುನಿಸಂ ಕಡೆಗೆ ಒಲವಿದ್ದ ದೇವರಾಜ ಅರಸು ಕ್ರಮೇಣ ಲೋಹಿಯಾ ರೂಪಿಸುತ್ತಿದ್ದ ಸಮಾಜವಾದವನ್ನು ‘ಮ್ಯಾನ್‌ಕೈಂಡ್’ ಬರಹಗಳ ಓದಿನ ಮೂಲಕವೂ ಗ್ರಹಿಸಿರಬಹುದು; ತಮ್ಮ ಆದರ್ಶಗಳು, ಯೋಜನೆಗಳು ಹಾಗೂ ರಾಜಕಾರಣದ ಕೆಲವು ನಡೆಗಳನ್ನಾದರೂ ಲೋಹಿಯಾ ಚಿಂತನೆಗಳಿಂದ ರೂಪಿಸಿಕೊಂಡಿರಬಹುದು ಎಂದು ಊಹಿಸುವೆ. ಹಿಂದುಳಿದ ವರ್ಗಗಳಿಗೆ ಮೀಸಲಾತಿ, ದಲಿತ-ಹಿಂದುಳಿದ ವರ್ಗಗಳ ಏಕತೆ, ಉಳುವವನೇ ನೆಲದೊಡೆಯ, ಭಾರತದ ಜಾತಿರೋಗಗಳು, ಜಾತಿ ಕೀಳರಿಮೆ, ತಬ್ಬಲಿ ಜಾತಿಗಳ ಸಬಲೀಕರಣ ಕುರಿತ ಅರಸು ನೋಟಗಳ ಹಿಂದೆ ಲೋಹಿಯಾ ಚಿಂತನೆಗಳ ಚೌಕಟ್ಟುಗಳಿವೆ. ಮುಂದೆ ಕಾಂಗ್ರೆಸ್‌ನವರು ‘ಉಳುವವನೇ ಹೊಲದೊಡೆಯ’ದ ಆದರ್ಶವನ್ನು ಮೇಲ್ಪದರದಲ್ಲಿ ಮಾತಾಡುತ್ತಿದ್ದಾಗ, ಅರಸು ‘ಜನತಾ ನ್ಯಾಯಾಲಯ’ ಸ್ಥಾಪನೆಯ ಬಗ್ಗೆ ಮಾತಾಡುತ್ತಿದ್ದರು. ಅಷ್ಟೊತ್ತಿಗಾಗಲೇ ಅರಸು ಶಾಸಕರಾಗಿ ಸದನದಲ್ಲಿ ಗೋಪಾಲಗೌಡರ ಮಾತುಗಳನ್ನು ಕೇಳಿಸಿಕೊಂಡಿದ್ದರು.

ಕರ್ನಾಟಕದ ಅಪರೂಪದ ಬುದ್ಧಿಜೀವಿ- ಮುಖ್ಯಮಂತ್ರಿಯಾದ ಅರಸು ಅವರ ಜೀವಿತ ಕಾಲದಲ್ಲಿ ನಮ್ಮ ದೊಡ್ಡ ಲೇಖಕರಿಗೂ ಅವರ ಈ ಮುಖಗಳು ಅಷ್ಟಾಗಿ ಕಂಡಿರಲಿಲ್ಲ. ಅದಕ್ಕೆ ಕಾರಣವಿದೆ: ನಾವು ಘಟನಾವಳಿಗಳಿಗೆ ಹತ್ತಿರವಿದ್ದಾಗ ಅವು ಕಾಣುವ ರೀತಿಗೂ, ಆ ಘಟನಾವಳಿಗಳು ಚರಿತ್ರೆಯ ಭಾಗವಾದಾಗ ಕಾಣುವ ಕ್ರಮಕ್ಕೂ ವ್ಯತ್ಯಾಸವಿರುತ್ತದೆ. ಅರಸು ಆಡಳಿತ ಕಾಲದಲ್ಲಿ ಹದಿಹರೆಯದ ವಿದ್ಯಾರ್ಥಿಯಾಗಿದ್ದ ನನ್ನಂಥವರಿಗೆ ಅವರು ಇಂದಿರಾಗಾಂಧಿಯವರು ಮಾಡಿದ್ದನ್ನೆಲ್ಲಾ ಸಮರ್ಥಿಸಿಕೊಳ್ಳುವ ಅವಕಾಶವಾದಿ ರಾಜಕಾರಣಿಯಂತೆ ಕಾಣುತ್ತಿದ್ದರು. ನಾವೆಲ್ಲ ಆ ಪೂರ್ವಾಗ್ರಹಗಳಿಂದ ಕಳಚಿಕೊಂಡು, ಅರಸು ಕಾರ್ಯಕ್ರಮಗಳ ಒಳ್ಳೆಯ ಪರಿಣಾಮಗಳನ್ನು ಗ್ರಹಿಸುವ ಹೊತ್ತಿಗೆ ನಾಲ್ಕೈದು ವರ್ಷಗಳಾದವು. ಲಂಕೇಶರು 1980ರ ಜನವರಿಯಲ್ಲಿ ಪ್ರಜಾವಾಣಿಯಲ್ಲಿ ಬರೆದ ಅರಸು ಕುರಿತ ಲೇಖನ ಕೂಡ ನಮ್ಮಂಥವರ ದೃಷ್ಟಿಕೋನವನ್ನು ಬದಲಿಸಿತು. ಅರಸು ಜಾರಿಗೆ ತಂದ ಯೋಜನೆಗಳ ಫಲಾನುಭವಿಗಳಾದ ಲಕ್ಷಾಂತರ ಸಾಮಾನ್ಯರು, ಸರಕಾರಿ ನೌಕರರು, ರಾಜಕಾರಣಿಗಳು ನಿರ್ಗಮನದ ನಂತರ ಅರಸು ಕೊಡುಗೆಯ ಮಹತ್ವವನ್ನು ಅರಿಯತೊಡಗಿದರು.

ಅರಸು ಅವರ ಪುಟ್ಟ ವ್ಯಕ್ತಿಚಿತ್ರ ಕೊಡಲು ಅರಸುರನ್ನು ಹತ್ತಿರದಿಂದ ಬಲ್ಲವರಾಗಿದ್ದ ವಡ್ಡರ್ಸೆ ರಘುರಾಮಶೆಟ್ಟರ ‘ಬಹುರೂಪಿ ಅರಸು’ ಪುಸ್ತಕದ ಕೆಲವು ವಿವರಗಳನ್ನು ಇಲ್ಲಿ ಬಳಸಿರುವೆ:

ಮೈಸೂರು ರಾಜಮನೆತನದ ಸಂಬಂಧಿಯಾಗಿದ್ದ ಅರಸು ಹುಣಸೂರು ತಾಲೂಕಿನ ಕಲ್ಲಹಳ್ಳಿಯಲ್ಲಿ ಹುಟ್ಟಿ ಬೆಳೆದು, ಬೆಂಗಳೂರಿನಲ್ಲಿ ಬಿ.ಎಸ್ಸಿ. ಓದುತ್ತಾ, ಪೈಲ್ವಾನ್ ಕೂಡ ಆಗತೊಡಗಿದ್ದರು! ಅವರು ಸಾಮು ಕಲಿತಿದ್ದು, ‘ಶಾಂತಲಾ’ ಕಾದಂಬರಿ ಖ್ಯಾತಿಯ ಕನ್ನಡ ಲೇಖಕ ಕೆ.ವಿ. ಅಯ್ಯರ್ ಅವರ ವ್ಯಾಯಾಮ ಶಾಲೆಯಲ್ಲಿ. ಅರಸು ಮುಖ್ಯಮಂತ್ರಿಯಾಗಿದ್ದಾಗ ‘ಪ್ರಜಾವಾಣಿ’ಯಲ್ಲಿ ವ್ಯಂಗ್ಯಚಿತ್ರಕಾರ ರಾಮಮೂರ್ತಿ ಅರಸುರನ್ನು ಗ್ಲೌಸ್ ಹಾಕಿದ ಪೈಲ್ವಾನ್ ಆಗಿ ಚಿತ್ರಿಸುತ್ತಿದ್ದುದು ನೆನಪಾಗುತ್ತದೆ. ಹಾಗೇ ಲಂಕೇಶರು ‘ಜಟ್ಟಿ’ ಎಂದದ್ದು ಕೂಡ!

ತರುಣ ದೇವರಾಜನಿಗೆ ಮಿಲಿಟರಿ ಸೇರುವ ಅವಕಾಶ ಸಿಕ್ಕಿತು. ಮಗನನ್ನು ಮಿಲಿಟರಿಗೆ ಕಳಿಸಲು ತಾಯಿ ಒಪ್ಪಲಿಲ್ಲ. ಊರಿನಲ್ಲೇ ಕೃಷಿಕನಾದ ದೇವರಾಜ ಹೊಲ ಉಳುತ್ತಿದ್ದ, ನೀರು ಸೇದುತ್ತಿದ್ದ, ದನ ಕರು ಮೇಯಿಸುತ್ತಿದ್ದ. ಸಮಯ ಸಿಕ್ಕಾಗ ಒಬ್ಬನೇ ಓದುತ್ತಾ ಕೂರುತ್ತಿದ್ದ. ಕಮ್ಯುನಿಸ್ಟ್ ಚಿಂತನೆಗಳ ಬಗ್ಗೆ ಒಲವು ತೋರುತ್ತಿದ್ದ ಈ ತರುಣನನ್ನು 1941ರಲ್ಲಿ ಕಾಂಗ್ರೆಸ್ ನಾಯಕ ಸಾಹುಕಾರ್ ಚೆನ್ನಯ್ಯ ಕಾಂಗ್ರೆಸ್ ಪಕ್ಷಕ್ಕೆ ಕರೆತಂದರು. 1946ರಲ್ಲಿ ಅರಸು ಪ್ರಜಾಪ್ರತಿನಿಧಿ ಸಭೆಗೆ ಆರಿಸಿ ಬಂದರು. 1952ರಲ್ಲಿ ಹುಣಸೂರಿನಿಂದ ಚುನಾವಣೆ ಗೆದ್ದು ಮೈಸೂರು ವಿಧಾನಸಭೆ ಪ್ರವೇಶಿಸಿದ ಅರಸು ಗೆಲ್ಲುತ್ತಾ ಹೋದರು. ಮುಂದಿನ ವಿವರಗಳು ಎಲ್ಲರಿಗೂ ಗೊತ್ತಿವೆ.

ಆಗ ಪ್ರಜಾವಾಣಿಯ ತರುಣ ಪತ್ರಕರ್ತರಾಗಿದ್ದ ವಡ್ಡರ್ಸೆಯವರು ಅರಸುರನ್ನು ಮೊದಲ ಸಲ ಕಂಡಾಗ ಮೇಡಂ ಕ್ಯೂರಿ ಜೀವನ ಚರಿತ್ರೆಯ ಬಗ್ಗೆ ಮಾತಾಡಿದ್ದ ಅರಸು, ಮತ್ತೊಮ್ಮೆ ವಿ.ಎಸ್. ನೈಪಾಲ್ ಭಾರತ ಕುರಿತು ಬರೆದ ವಿಮರ್ಶಾತ್ಮಕ ಪುಸ್ತಕ ‘An Area of Darkness’ ಓದಿ, ವಡ್ಡರ್ಸೆಯವರಿಗೆ ಹೇಳುವ ಮಾತು: ‘ಭಾರತೀಯ ಸಮಾಜದ ಬಗ್ಗೆ ಮಾತಾಡುವ ನಿಮ್ಮಂಥ ಯುವಕರು ಈ ಪುಸ್ತಕ ಓದಬೇಕು. ಭಾರತವೆಂಬ ದೇಶದಲ್ಲಿ ಒಳ್ಳೆಯತನಗಳೂ ಇವೆ. ಆದರ್ಶವೂ ಇದೆ... ದುರ್ದೈವವೆಂದರೆ ಈ ಒಳ್ಳೆಯತನಗಳೆಲ್ಲಾ ಮ್ಯೂಸಿಯಂ ಪೀಸ್ ಆಗಿವೆ. ಭಾರತದ ಇಂದಿನ ವಾಸ್ತವಸ್ಥಿತಿಯೆಂದರೆ ಇದು ಜಗತ್ತಿನ ಕತ್ತಲು ಪ್ರದೇಶ- ಮಹಾಕೊಚ್ಚೆ ಎಂದಿದ್ದಾನೆ ನೈಪಾಲ್. ಒಮ್ಮೆ ಅದನ್ನು ಓದಿ.’

ಭಾರತ ಕುರಿತಂತೆ ಅರಸು ಅವರ ಪ್ರಖರ ವಾಸ್ತವ ಪ್ರಜ್ಞೆ ಇಂಥ ಪುಸ್ತಕಗಳಿಂದಲೂ ಬೆಳೆದಂತಿದೆ. ಅರಸು ಹೇಳಿದ ಮೇಲೆ ವಡ್ಡರ್ಸೆಯವರೂ ಈ ಪುಸ್ತಕ ಓದಿದರು. ಭಾರತೀಯ ಸಮಾಜವನ್ನು ಗ್ರಹಿಸಲು ವಿಶೇಷ ಬೌದ್ಧಿಕ ಸಿದ್ಧತೆ ಮಾಡಿಕೊಂಡಿದ್ದ ಅರಸು ನೇಮಿಸಿದ ಹಾವನೂರ ಆಯೋಗ ಕರ್ನಾಟಕದ ದಿಕ್ಕನ್ನೇ ಬದಲಿಸಿತು; ಮುಂದೆ ಮಂಡಲ್ ವರದಿಗೂ ಇದು ಪ್ರೇರಣೆಯಾಯಿತು. ಅರಸು ರಾಜಕಾರಣದ ಕಾಲಘಟ್ಟದಲ್ಲೇ ‘ಸಮುದಾಯ’, ದಲಿತ ಸಾಹಿತ್ಯ, ಸ್ತ್ರೀವಾದಿ ಸಾಹಿತ್ಯ, ಬಂಡಾಯ ಸಾಹಿತ್ಯಗಳ ಮೂಲಕ ದಲಿತ, ಮಹಿಳಾ, ಹಿಂದುಳಿದ ವರ್ಗಗಳ ಹೊಸ ಸಾಂಸ್ಕೃತಿಕ ಎನರ್ಜಿ ಹೊರಚಿಮ್ಮಿತು. ಒಂದು ಕಾಲದ ರಾಜಕಾರಣದ ಆಶಯಗಳು ಸಾಂಸ್ಕೃತಿಕ-ಸಾಮಾಜಿಕ ವಲಯಗಳಲ್ಲೂ ವಿಕಾಸಗೊಂಡ ಕಾಲ ಇದು; ಸಂಸ್ಕೃತಿ ಹಾಗೂ ರಾಜಕಾರಣಗಳು ಪರಸ್ಪರರಿಂದ ಪಡೆದ ವಿಶಿಷ್ಟ ಚಾರಿತ್ರಿಕ ವಿದ್ಯಮಾನ ಇದು.

ಭಾರತದ ರಾಜಕಾರಣದ ನಿಕಟ ಅಧ್ಯಯನ ಮಾಡಿರುವ ರಾಜಕೀಯವಿಜ್ಞಾನಿ ಜೇಮ್ಸ್ ಮ್ಯಾನರ್ ಅರಸುರನ್ನು ಇಂಡಿಯಾದ ರಾಜಕಾರಣದ ‘ಪ್ರಾಗ್ಮ್ಯಾಟಿಕ್ ಪ್ರೋಗ್ರೆಸೀವ್ಸ್’ (‘ಮಾನವಕಲ್ಯಾಣವನ್ನು ಗಮನದಲ್ಲಿಟ್ಟುಕೊಂಡ ವ್ಯಾವಹಾರಿಕ ಪ್ರಗತಿಪರರು’) ಪಟ್ಟಿಗೆ ಸೇರಿಸುತ್ತಾರೆ. ಬಿಹಾರದಲ್ಲಿ ಕ್ಷೌರಿಕ ಕುಟುಂಬದಿಂದ ಬಂದು, ಪ್ರಖರ ಸಮಾಜವಾದಿಯಾಗಿ, 1970-71 ಹಾಗೂ 1977-79ರ ನಡುವೆ ಬಿಹಾರದ ಮುಖ್ಯಮಂತ್ರಿಯಾಗಿದ್ದ ಕರ್ಪೂರಿ ಠಾಕೂರ್ ಹಾಗೂ ಅರಸು ಅವರ ಸಾಮಾಜಿಕ ನ್ಯಾಯದ ರಾಜಕಾರಣವನ್ನು ಮ್ಯಾನರ್ ಹೋಲಿಸಿ ನೋಡುತ್ತಾರೆ. ಪ್ರಬಲ ಜಾತಿಗಳ ಅಬ್ಬರದಿಂದಾಗಿ ಕರ್ಪೂರಿ ಠಾಕೂರ್ ಸೋತಲ್ಲಿ ಅರಸು ಗೆದ್ದದ್ದನ್ನು ಗುರುತಿಸುತ್ತಾ, ಮ್ಯಾನರ್ ಕಂಡುಕೊಂಡ ಸತ್ಯಗಳು:

ಅರಸು ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕೊಟ್ಟಾಗ ಮೇಲುಜಾತಿಗಳಲ್ಲಿ ಅಸಮಾಧಾನ ಉಂಟಾಯಿತು; ಆದರೆ ದಲಿತ, ಹಿಂದುಳಿದ ವರ್ಗಗಳ ನಡುವೆ ಪರಸ್ಪರ ಅಸಮಾಧಾನ ಹೆಚ್ಚಲಿಲ್ಲ. ಕಾರಣ, ಕಂದಾಯ ಮಂತ್ರಿ ಬಸವಲಿಂಗಪ್ಪನವರ ಭೂ ಸುಧಾರಣೆಯ ಕಾರ್ಯಕ್ರಮಗಳಿಂದಾಗಿ ದಲಿತರಿಗೆ, ಹಿಂದುಳಿದವರಿಗೆ ಭೂಮಿ ಸಿಕ್ಕಲಾರಂಭಿಸಿತು. ಹಿಂದುಳಿದ ಜಾತಿಗಳಿಗೆ ಮೀಸಲಾತಿ ಜಾರಿಯಾದ ಸಂದರ್ಭದಲ್ಲಿ ದಲಿತ ಮಂತ್ರಿಗಳ ಸಂಖ್ಯೆ ಎರಡು ಪಟ್ಟಾಯಿತು; ಹಿಂದುಳಿದ ವರ್ಗಗಳ ಮಂತ್ರಿಗಳ ಸಂಖ್ಯೆಯೂ ಹೆಚ್ಚಿತು. ದಲಿತರಿಗೆ ಮೀಸಲಿಟ್ಟ ಸರಕಾರಿ ಹುದ್ದೆಗಳನ್ನು ಅರಸು ಭರ್ತಿ ಮಾಡಿದರು.

ಇದು ಅರಸು ಅವರ ಸಾಮಾಜಿಕ ನ್ಯಾಯದ ಆದರ್ಶ ಪ್ರಾಕ್ಟಿಕಲ್ ರಾಜಕಾರಣದ ಜೊತೆಗೆ ಬೆಸೆದುಕೊಂಡ ರೀತಿ. 1971ರಲ್ಲಿ ಮುಖ್ಯಮಂತ್ರಿ ಪಟ್ಟದವರೆಗೂ ಬಂದು ಹಿನ್ನಡೆ ಕಂಡ ಶಾಂತವೇರಿ ಗೋಪಾಲಗೌಡರ ಜೊತೆ ಅರಸುರನ್ನು ಹೋಲಿಸುತ್ತಾ ವಡ್ಡರ್ಸೆ ಬರೆಯುವ ಮಾತು: ‘ಸಮಾಜವಾದಿ ಶಾಂತವೇರಿ ಗೋಪಾಲಗೌಡರು ತುಂಬು ಆದರ್ಶವಾದಿಯಾಗಿದ್ದರು... ಸಮಾಜವಾದಿ ಸರಕಾರದ ರಚನೆಯ ಅವರ ಕನಸುಗಳೆಲ್ಲ ಕಮರಿ ಹೋದವು. ಜ್ಞಾನಾರ್ಜನೆಯಿಂದ ಸ್ಫುರಿಸುವ ಆದರ್ಶವಾದಕ್ಕೆ ವ್ಯವಹಾರಜ್ಞಾನದ ಹುರಿ ಹಾಕಲು ಕಲಿತ ಅಪೂರ್ಣ ಸಮಾಜವಾದಿ ಅರಸು ಗೆದ್ದರು.’

ಅರಸು ಒಮ್ಮೆ ಲೋಹಿಯಾರನ್ನು ಪ್ರಸ್ತಾಪಿಸುತ್ತಾ ಹೇಳಿದ ಮಾತನ್ನು ವಡ್ಡರ್ಸೆ ನೆನೆಯುತ್ತಾರೆ: ‘ನನಗೆ ಪರಂಪರೆಯ ಬಲವೂ ಇಲ್ಲ. ಜಾತಿಬೆಂಬಲವೂ ಇಲ್ಲ; ನಾನು ನಿಮ್ಮ ಲೋಹಿಯಾರ ಹಾಗೆ ತತ್ವಬೋಧೆ ಮಾಡ್ತಾ ಕೂತರೆ, ಈ ಎಂಎಲ್‌ಎಗಳು ನನ್ನನ್ನು ಅಧಿಕಾರದಲ್ಲಿ ಇಡ್ತಾ ಇದ್ದರು ಅಂತ ತಿಳ್ಕೊಂಡಿದೀರಾ?’

ಆದರೂ, ಲೋಹಿಯಾ ಹೇಳುತ್ತಿದ್ದ ತಬ್ಬಲಿ ಜಾತಿಗಳ ರಾಜಕಾರಣ ಅರಸು ರಾಜಕಾರಣದ ಕಾಲದಲ್ಲಿ ಕಾರ್ಯರೂಪಕ್ಕೆ ಬಂತು. ಅರಸು ಸಣ್ಣಪುಟ್ಟ ಜಾತಿಗಳಿಂದ ನಾಯಕರನ್ನು ಆರಿಸಿ ಶಾಸಕರು ಹಾಗೂ ಮಂತ್ರಿಗಳನ್ನಾಗಿಸಿದ್ದು ಆ ಜಾತಿಗಳ ಹೊಸ ಚಲನೆಗೆ ಕಾರಣವಾಗತೊಡಗಿತು. ಆ ಜಾತಿಗಳಿಂದ ಪ್ರತಿಭೆಗಳು ಹೊರಹೊಮ್ಮಿದವು. ದೇವರಾಜ ಅರಸು ಚರಿತ್ರೆಯ ನಿರ್ಣಾಯಕ ಚಲನೆಯೊಂದರ ಸಾಧನವಾದರು; ಅರಿವಿದ್ದೋ, ಅರಿವಿಲ್ಲದೆಯೋ ದಲಿತ ಹಾಗೂ ಹಿಂದುಳಿದ ಜಾತಿಗಳು ಒಂದು ‘ವರ್ಗ’ವಾಗುವಂತೆ ಮಾಡಲೆತ್ನಿಸಿದರು.

ಮನೆಯಲ್ಲಿ ಒಳ್ಳೊಳ್ಳೆಯ ಪುಸ್ತಕಗಳ ಸಂಗ್ರಹವಿದ್ದ ಅರಸು ಅವರ ಪುಸ್ತಕಗಳ ಒಡನಾಟದ ದಿನಚರಿಯಿಂದ ಕೂಡ ನಮ್ಮ ಲೇಖಕ-ಲೇಖಕಿಯರು, ರಾಜಕಾರಣಿಗಳು ಕಲಿಯಬೇಕಾಗಿದೆ. ಜಿ.ಎಚ್. ನಾಯಕರಂಥ ವಿದ್ವಾಂಸರು ಸಿಕ್ಕರೆ, ಅರಸು ಇರಾವತಿ ಕರ್ವೆಯವರ ‘ಯುಗಾಂತ’ ಕುರಿತು ಮಾತಿಗೆ ಇಳಿಯಬಲ್ಲವರಾಗಿದ್ದರು. ಗೋಪಾಲಕೃಷ್ಣ ಅಡಿಗರ ಪದ್ಯವನ್ನು ಓದಿ ಉಲ್ಲೇಖಿಸಬಲ್ಲವರಾಗಿದ್ದರು. ಗಂಭೀರ ವಿಚಾರ ಸಂಕಿರಣಗಳಲ್ಲಿ ಪ್ರೇಕ್ಷಕ-ಪ್ರೇಕ್ಷಕಿಯರ ಸಾಲಿನಲ್ಲಿ ಕೂತು ಟಿಪ್ಪಣಿ ಮಾಡಿಕೊಂಡು, ನಂತರ ಉತ್ತರ ಕೊಡಬಲ್ಲವರಾಗಿದ್ದರು. ಅ.ನ. ಯಲ್ಲಪ್ಪರೆಡ್ಡಿ ಹೇಳುವಂತೆ ಜಾಗತಿಕ ಮಟ್ಟದ ಅರ್ಥಶಾಸ್ತ್ರದ ಪುಸ್ತಕಗಳಿಂದ ಹಿಡಿದು ವೈಜ್ಞಾನಿಕ ಪುಸ್ತಕಗಳೂ ಅವರಿಗೆ ಪರಿಚಯವಿದ್ದವು.

ಅರಸು ತೀರಿಕೊಳ್ಳುವ ಕೆಲವು ತಿಂಗಳ ಕೆಳಗೆ ನಡೆದ ಲಂಕೇಶ್-ಅರಸು ಭೇಟಿಯಲ್ಲಿ ನಡೆದ ಮಾತುಕತೆ ಕುರಿತು ವಡ್ಡರ್ಸೆ ಬರೆಯುತ್ತಾರೆ: ‘ಭಾರತೀಯ ಸನ್ನಿವೇಶದಲ್ಲಿ ಗಾಂಧಿ ತತ್ವ ವಿಚಾರಗಳು, ಮಾರ್ಕ್ಸ್‌ವಾದ, ಲೋಹಿಯಾ ಚಿಂತನೆಗಳು, ಜಯಪ್ರಕಾಶ ನಾರಾಯಣರ ಸೌಮ್ಯವಾದ, ಪಂಡಿತ್ ಜವಾಹರಲಾಲ್ ಅವರ ಸಮಾಜವಾದ ಎಲ್ಲವನ್ನೂ ಈ ಮಾತುಕತೆ ಆವರಿಸಿತು. ವಿಶ್ಲೇಷಣೆಗಳು ನಡೆದವು.’

ಕರ್ನಾಟಕದ ಅನೇಕ ಮುಖ್ಯಮಂತ್ರಿಗಳ ಹೆಸರು ಕೂಡ ಮರೆತು ಹೋಗುತ್ತಿರುವ ಈ ಕಾಲದಲ್ಲಿ ಅರಸು ಅವರ ಧೀಮಂತ ವ್ಯಕ್ತಿತ್ವ ಹಾಗೂ ನಿರ್ಗಮನದ ನಂತರದ ನಿರಂತರ ವ್ಯಕ್ತಿತ್ವವಿಕಾಸ ನಮ್ಮಂಥವರಲ್ಲಿ ಅಭಿಮಾನ-ಆನಂದ-ಕೃತಜ್ಞತೆ ಹುಟ್ಟಿಸುತ್ತದೆ.

Tags

D. Devaraj ArasuPolitics
share
ನಟರಾಜ್ ಹುಳಿಯಾರ್
ನಟರಾಜ್ ಹುಳಿಯಾರ್
Next Story
X