Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಗಾಳಿ ಬೆಳಕು
  5. ಅತ್ತಲಿತ್ತ ಹರಿದಾಡುವ ಮನಸಿನ ಜಾಣ...

ಅತ್ತಲಿತ್ತ ಹರಿದಾಡುವ ಮನಸಿನ ಜಾಣ ಕಣ್ಣೋಟ!

ನಟರಾಜ್ ಹುಳಿಯಾರ್ನಟರಾಜ್ ಹುಳಿಯಾರ್11 May 2024 4:03 PM IST
share
ಅತ್ತಲಿತ್ತ ಹರಿದಾಡುವ ಮನಸಿನ ಜಾಣ ಕಣ್ಣೋಟ!
ಕವಿತೆಯ ಅರ್ಥಗಳು ನಿರ್ದಿಷ್ಟವಲ್ಲ; ಅವು ಕಾಲಕಾಲಕ್ಕೆ, ಓದಿನಿಂದ ಓದಿಗೆ, ತಲೆಮಾರಿನಿಂದ ತಲೆಮಾರಿಗೆ ಬದಲಾಗುತ್ತಾ ಹೋಗುತ್ತವೆ; ಹಾಗೆ ಬದಲಾಗುವ, ಬೆಳೆಯುವ ಅರ್ಥಸಾಧ್ಯತೆ ಇದ್ದರೆ ಮಾತ್ರ ಒಳ್ಳೆಯ ಕವಿತೆಯೊಂದು ಹೊಸ ಹೊಸ ಹುಟ್ಟು ಪಡೆಯುತ್ತಾ ಹೋಗಬಲ್ಲದು. ಅದರ ಜೊತೆಗೆ, ಹೊಸ ಅರ್ಥಗಳನ್ನು ಕಾಣುವ ಕಣ್ಣು ಕೂಡ ಮುಕ್ತವಾಗಿರಬೇಕಾಗುತ್ತದೆ...

ನಮ್ಮ ಮನಸ್ಸಿಗೆ ಪ್ರಿಯವಾದ ವಸ್ತುವಿನ ಬಗ್ಗೆ ಸಾರ್ವಜನಿಕ ಭಾಷಣ ಮಾಡುವಾಗಲೆಲ್ಲ ಆ ಮಾತುಗಳನ್ನು ಕೇಳಬಲ್ಲ ತಕ್ಕ ಮುಖಗಳನ್ನು ಚಿತ್ತ ಹುಡುಕುತ್ತಿರುತ್ತದೆ; ನಮ್ಮ ಕಣ್ಣು ಸಭಾಂಗಣದ ಉದ್ದಗಲಕ್ಕೂ ಹರಿದಾಡುತ್ತಿರುವಂತೆ, ನಮ್ಮ ‘ಭಾಷಣಮಗ್ನ’ ಮನಸ್ಸು ತಂಗಲು ತಕ್ಕ ಆಶ್ರಯತಾಣವನ್ನು ಅರಸುತ್ತಿರುತ್ತದೆ.

ಭಾಷಣಮಗ್ನ ಮನಸ್ಸಿನ ಇಂಥ ಹರಿದಾಟಗಳನ್ನು ಗೋಪಾಲಕೃಷ್ಣ ಅಡಿಗರ ಚಿಂತಾಮಣಿಯಲ್ಲಿ ಕಂಡ ಮುಖಕ್ಕಿಂತ ಚೆನ್ನಾಗಿ ಹೇಳಿದ ಕನ್ನಡ ಕವಿತೆಯನ್ನು ನಾನಂತೂ ಕಂಡಿಲ್ಲ. ನಿಜವಾದ ಕವಿಯ ಶಕ್ತಿ ಅದು. ಶಕ್ತ ಕವಿಯಲ್ಲಿ ಎಂಥ ಸಂದರ್ಭ ಬೇಕಾದರೂ ಕಾವ್ಯಸಂದರ್ಭವಾಗುತ್ತದೆ. ಕುಂಬಾರನ ಕೈಯಲ್ಲಿ ಮಣ್ಣು ಏನೇನೋ ಆಕಾರ ಪಡೆಯುವ ಹಾಗೆ ಅಸಲಿ ಕವಿಯ ಭಾಷೆ ನಾದದಲ್ಲಿ, ಹೊರಳುವಿಕೆಯಲ್ಲಿ, ಶಬ್ದ ನಿಶ್ಶಬ್ದಗಳಲ್ಲಿ ಹಲ ಬಗೆಯ ಆಕಾರ ಪಡೆಯುತ್ತಿರುತ್ತದೆ. ಆಗ ಏನು ಬೇಕಾದರೂ ಕಾವ್ಯವಾಗುತ್ತದೆ!

ಜಗತ್ತಿನ ದೊಡ್ಡ ಕವಿಗಳಲ್ಲೊಬ್ಬನಾದ ಯೇಟ್ಸ್ ಕೂಡ ಒಂದು ಭಾಷಣದ ಸಂದರ್ಭವನ್ನು ಕವಿತೆ ಮಾಡುತ್ತಾ, ‘ಈ ಭಾಷಣ ಗೀಷಣ ಬಿಟ್ಟು ಅಲ್ಲಿ ಕೂತಿರುವ ಆ ಹುಡುಗಿಯನ್ನು ಅಪ್ಪಿಕೊಳ್ಳುವಂತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು!’ ಎಂಬರ್ಥದ ಮಾತುಗಳನ್ನು ಬರೆಯುತ್ತಾನೆ. ಆಗ ‘ಅತ್ತಲಿತ್ತ ಹರಿದಾಡುವ ಮನಸಿಗೆ ಮಚ್ಚಿಲ್ಹೊಡೆದು ನಿಲ್ಲಿಸು ಜಾಣ’ ಎಂಬ ಶಿಶುನಾಳ ಶರೀಫನ ಬುದ್ಧಿಮಾತನ್ನು, ಕವಿಯ ಕಿವಿಯಲ್ಲಿ ಯಾರೂ ಉಸುರಿದಂತಿಲ್ಲ! ಶರೀಫ ತೀರಿಕೊಂಡಾಗ ಡಬ್ಲ್ಯು.ಬಿ. ಯೇಟ್ಸ್ ಮೂವತ್ನಾಲ್ಕು ವರ್ಷದ ಪ್ರಖರ ಕವಿಯಾಗಿದ್ದ. ಅದಿರಲಿ, ಯೇಟ್ಸ್ ಕವಿತೆಯಲ್ಲಿ ಭಾಷಣದ ನಡುವೆ ಕಾಣಿಸಿಕೊಳ್ಳುವ ಈ ರೊಮ್ಯಾಂಟಿಕ್ ಬಯಕೆ ಸರಿಯಲ್ಲ ಎಂದು ಯಾವ ಮಹನೀಯರೂ ಭಿನ್ನಮತ ವ್ಯಕ್ತಪಡಿಸಿದಂತಿಲ್ಲ!

ಶರೀಫರ ಮಾತನ್ನು ಯೇಟ್ಸ್ ಕೇಳಿಸಿಕೊಳ್ಳುತ್ತಿದ್ದನೋ ಇಲ್ಲವೋ, ಆದರೆ ಸ್ವತಃ ಶರೀಫನೇ ತನ್ನ ಮಾತನ್ನು ತಾನೇ ಕೇಳಿಸಿಕೊಳ್ಳುತ್ತಿದ್ದನೋ ಇಲ್ಲವೋ ಎನ್ನುವುದೇ ಅನುಮಾನ! ಗುರು ಗೋವಿಂದಭಟ್ಟರೇ ಶರೀಫನ ಮನಸ್ಸು ಅತ್ತಲಿತ್ತ ಹರಿದಾಡದಂತೆ ನೋಡಿಕೊಳ್ಳಬೇಕೆಂದು ತಾಕೀತು ಮಾಡಿದ್ದರೂ ಕಿಲಾಡಿ ಕವಿ ಶರೀಫ ಅದನ್ನೆಲ್ಲ ಕೇಳಿಸಿಕೊಳ್ಳುವ ಆಸಾಮಿಯಾಗಿರಲಿಲ್ಲ! ಕಾರಣ, ಅವನೊಳಗಿನ ಕವಿ ಹಾವು ತುಳಿದ ಮಾನಿನಿ, ಹುಬ್ಬಳ್ಳಿ ಕೊಡದ ಮಾಟದಂಥ ಹುಡುಗಿ...ಎಲ್ಲರನ್ನೂ ನೋಡಿ ನೋಡಿ ತನ್ನ ‘ಪದ ಬರಕೋ’ಬೇಕಾಗಿತ್ತಲ್ಲ!

ಶರೀಫರು ಕನ್ನಡ ಭಾಷೆಯನ್ನು ಆಧುನಿಕವಾಗಿ ಬಳಸಿ ಬರೆದ ಸುಮಾರು ನೂರು ವರ್ಷಗಳ ನಂತರ ‘ಚಿಂತಾಮಣಿಯಲ್ಲಿ ಕಂಡ ಮುಖ’ ಬರೆದ ಅಡಿಗರ ಕವಿತೆಯಲ್ಲಿ ನಿರೂಪಕನ ಭಾಷಣಮಗ್ನ ಮನಸ್ಸು ಶರೀಫರ ಮಾತು ಕೇಳದೆ ಅತ್ತಲಿತ್ತ ಹರಿದಾಡುತ್ತಲೇ ಇತ್ತು:

‘ಚಿಂತಾಮಣಿಯ ಸಭಾಂಗಣದಲ್ಲಿ ಭಾಷಣಮಗ್ನ

ಮನಸ್ಸು, ಮನಸ್ಸಿನ ಶೇಕಡಾ ತೊಂಬತ್ತು ಪಾಲು; ಕಣ್ಣು

ಹಾಯುತ್ತಿತ್ತು ಮುಖದಿಂದ ಮುಖಕ್ಕೆ, ಹುಡುಕುತ್ತಿತ್ತು

ರೇವುಳ್ಳ ನಡುಗಡ್ಡೆಯೊಂದ, ತಂಗಲು ನಿಮಿಷ; ತಂಗಿ

ಅಂತರಂಗದ ಅನಂಗ ಭಂಗಿಗೆ ತಕ್ಕ ಭಂಗಿ, ದೃಷ್ಟಿಗೆ ದೃಷ್ಟಿ,

ಬಡಿತಕ್ಕೆ ತಕ್ಕ ಪ್ರತಿ ಬಡಿತ ಕೊಡುವಿನ್ನೊಂದು

ಸಮ ಹೃದಯದ ನಿಗೂಢ ಸಹಕಂಪನದ ರೋಮಾಂಚ

ಪ್ರತಿಫಲಿಸಬಲ್ಲೊಂದು ಮುಖವ.’

ದಶಕಗಳ ಕೆಳಗೆ ಈ ಕವಿತೆಯನ್ನು ಮೊದಲ ಬಾರಿಗೆ ಓದಿದಾಗಿನಿಂದಲೂ ಮತ್ತೆ ಮತ್ತೆ ಸುಳಿಯುತ್ತಲೇ ಇರುವ ‘ಭಾಷಣ ಮಗ್ನ ಮನಸ್ಸು’ ಎಂಬ ನುಡಿಚಿತ್ರ; ಭಾಷಣಕಾರನ ಕಣ್ಣು ಸಭಾಂಗಣದಲ್ಲಿ ಅಡ್ಡಾಡುವ ರೀತಿ...ಎಲ್ಲವೂ ನನ್ನೊಳಗೆ ಉಳಿದುಬಿಟ್ಟಿವೆ. ಹತ್ತು ವರ್ಷಗಳ ಕೆಳಗೆ ಒಂದು ತಂಪಿನ ಮಧ್ಯಾಹ್ನ ಚಿಂತಾಮಣಿಯಲ್ಲಿ ಕಂಡ ಮುಖ ಕವಿತೆಯ ಅನುಭವವನ್ನು ಬೆಂಗಳೂರಿನ ಜ್ಞಾನಭಾರತಿಯ ಕನ್ನಡ ಹುಡುಗಿಯರು, ಹುಡುಗರಿಗೆ ದಾಟಿಸಲೆತ್ನಿಸುತ್ತಿದ್ದೆ; ಆಗ ಇದ್ದಕ್ಕಿದ್ದಂತೆ ಆ ಪರಮಾಪ್ತ ಮುಖದ ಹುಡುಕಾಟವನ್ನು ನನ್ನ ಕಣ್ಣು ಕೂಡ ಆರಂಭಿಸಿದ್ದು ನೆನಪಾಗುತ್ತದೆ.

ಹಲವು ಸಲ ವೇದಿಕೆಯ ಮೇಲೆ ನಿಂತಾಗ ಒಂದಲ್ಲ ಒಂದು ರೀತಿಯಲ್ಲಿ ಪ್ರತ್ಯಕ್ಷವಾಗುವ ‘ಚಿಂತಾಮಣಿಯಲ್ಲಿ ಕಂಡ ಮುಖ’ದ ಈ ಪ್ರತಿಮೆಗಳು ಈಚೆಗೆ ಮತ್ತೆ ನನ್ನೆದುರು ಮೂಡತೊಡಗಿದವು. ಗುಲಬರ್ಗಾದ ಸೆಂಟ್ರಲ್ ಯೂನಿವರ್ಸಿಟಿಯ ಹುಡುಗ, ಹುಡುಗಿಯರಿಗೆ ಅಂಬೇಡ್ಕರ್ ಕುರಿತು ಮಾತಾಡುವ ಮುನ್ನ ನನ್ನ ‘ಭಾಷಣಮಗ್ನ ಮನಸ್ಸು’ ಅಡಿಗರ ಕವಿತೆಯ ನಿರೂಪಕನ ಥರವೇ ‘ಹುಡುಕುತ್ತಿತ್ತು ತಂಗಲು ರೇವುಳ್ಳ ನಡುಗಡ್ಡೆಯೊಂದ’.

ಆದರೆ ಇವತ್ತು ಒಂದು ವ್ಯತ್ಯಾಸವಿತ್ತು. ಇಪ್ಪತ್ತೊಂದನೆಯ ಶತಮಾನದಲ್ಲಿ ಅಂಬೇಡ್ಕರ್ ಬಗ್ಗೆ ಮಾತಾಡಲು ನಿಂತಿದ್ದ ಅಧ್ಯಾಪಕನೊಬ್ಬ ಅಡಿಗರ ಕವಿತೆಯ ನಿರೂಪಕನಂತೆ ಒಂದು ಮುಖವನ್ನು ಹುಡುಕಬೇಕಾಗಿರಲಿಲ್ಲ. ಅಲ್ಲಿ ಅಂಬೇಡ್ಕರ್ ಸ್ಫೂರ್ತಿಯಿಂದ ಛಾರ್ಜ್ ಆದ ಒಂದಲ್ಲ, ನೂರು, ನೂರಾರು ಮುಖಗಳಿದ್ದವು. ಆಗ ಇದ್ದಕ್ಕಿದ್ದಂತೆ ಇದೇ ಅಂಕಣದಲ್ಲಿ (ಗಾಳಿ ಬೆಳಕು, 13 ಎಪ್ರಿಲ್ 2024) ಸಿದ್ಧಲಿಂಗಯ್ಯನವರ ‘ಅಂಬೇಡ್ಕರ್’ ಕವಿತೆಯ ಪಂಕ್ತಿಯ ಪದವೊಂದನ್ನು ಹೊಸ ಗಾಯಕರು ಬದಲಿಸಿ ಹಾಡಿದ್ದನ್ನು ಕುರಿತು ಬರೆದದ್ದು ನೆನಪಾಯಿತು. ಈ ಅಂಕಣದಲ್ಲಿ ಪ್ರಸ್ತಾಪಿಸಿದ್ದ ಸಿದ್ಧಲಿಂಗಯ್ಯನವರ ಕವಿತೆ ಕೊನೆಗೆ ಬಾಬಾಸಾಹೇಬರನ್ನು ಕೇಳುತ್ತದೆ:

‘ಮಲಗಿದ್ದವರ ಕೂರಿಸಿದೆ

ನಿಲಿಸುವವರು ಯಾರೋ?

ಛಲದ ಜೊತೆಗೆ ಬಲದ ಪಾಠ

ಕಲಿಸುವವರು ಯಾರೋ?’

ಇಪ್ಪತ್ತನೆಯ ಶತಮಾನದ ತೊಂಭತ್ತರ ದಶಕದ ಕೊನೆಯಲ್ಲಿ ಬಹುಜನ ಸಮಾಜ ಪಕ್ಷದ ರಾಜಕಾರಣ ಗಟ್ಟಿಯಾಗಿ ಬೆಳೆಯುತ್ತಿದ್ದ ಕಾಲದಲ್ಲಿ ಕೆಲವು ಹಾಡುಗಾರರು ಇದನ್ನು ಬದಲಿಸಿ ಹಾಡತೊಡಗಿದ ರೀತಿಯನ್ನೂ ಅದೇ ಅಂಕಣದಲ್ಲಿ ಉಲ್ಲೇಖಿಸಿದ್ದೆ:

‘ಮಲಗಿದ್ದವರ ಕೂರಿಸಿದೆ

ನಿಲಿಸುವವರು ನಾವು

ಛಲದ ಜೊತೆಗೆ ಬಲದ ಪಾಠ

ಕಲಿಸುವವರು ನಾವು.’

ಈ ಬದಲಾವಣೆ ಹೇಗೆ ಬಂತು ಎಂಬುದನ್ನು ಅವತ್ತು ಅಂಬೇಡ್ಕರ್ ಜನ್ಮದಿನದ ಅಂಕಣದಲ್ಲಿ ಊಹಿಸಲೆತ್ನಿಸಿದ್ದ ನನಗೆ, ಅಂಬೇಡ್ಕರ್ ಜಯಂತಿಯನ್ನು ಹೊಸ ಬಟ್ಟೆ ತೊಟ್ಟು ಹಬ್ಬದಂತೆ ಆಚರಿಸುವ ಗುಲಬರ್ಗಾದಲ್ಲಿ ಅದಕ್ಕೆ ಮತ್ತೊಂದು ಕಾರಣ ಹೊಳೆಯಿತು; ಸಿದ್ಧಲಿಂಗಯ್ಯನವರ ಪದ್ಯ ಐವತ್ತು ವರ್ಷಗಳ ಹಿಂದೆ ಕೇಳಿದ್ದ ಪ್ರಶ್ನೆಗೆ, ಹೊಸ ದಲಿತ ಹಾಡುಗಾರರು ‘ನಿಲಿಸುವವರು ನಾವು, ಕಲಿಸುವವರು ನಾವು’ ಎಂದು ಆತ್ಮವಿಶ್ವಾಸದಿಂದ ಹೇಳಿದ್ದು ಹೇಗೆ ಎಂಬ ಪ್ರಶ್ನೆಗೆ ಅಲ್ಲಿ ಹೊಸ ಉತ್ತರ ಸಿಕ್ಕಿತು!

ಆ ಉತ್ತರ ಹೊಳೆದ ಗಳಿಗೆ: ಅದೇ ಆಗ ಸೆಂಟ್ರಲ್ ಯೂನಿವರ್ಸಿಟಿಯ ‘ಅಂಬೇಡ್ಕರ್’ ಸಮಾರಂಭದ ಆರಂಭದಲ್ಲಿ ಅನನ್ಯ ಎಂಬ ಜಾಣ ಹುಡುಗಿ ಸಂವಿಧಾನದ ಪೀಠಿಕೆಯನ್ನು ಸಭಿಕರಿಗೆ ಬೋಧಿಸಿದ್ದಳು: ‘ವಿ ದ ಪೀಪಲ್ ಆಫ್ ಇಂಡಿಯಾ’ ಎಂಬ ಈ ಪ್ರತಿಜ್ಞೆಯನ್ನು ವೇದಿಕೆಯ ಮೇಲಿದ್ದ ಅತಿಥಿಗಳು, ಸಭೆಯಲ್ಲಿದ್ದ ಹುಡುಗಿಯರು, ಹುಡುಗರು, ಮೇಡಂಗಳು, ಮೇಷ್ಟ್ರುಗಳು, ವಿಶ್ವವಿದ್ಯಾನಿಲಯದ ಸಿಬ್ಬಂದಿ ಎಲ್ಲರೂ ಸ್ವೀಕರಿಸಿದ್ದರು.

‘ವಿ ದ ಪೀಪಲ್ ಆಫ್ ಇಂಡಿಯಾ’ ಪ್ರತಿಜ್ಞೆಯನ್ನು ಸ್ವೀಕರಿಸುತ್ತಿದ್ದ ಈ ಹೊಸ ಮುಖಗಳನ್ನು ನೋಡನೋಡುತ್ತಾ ಮಾತು ಶುರು ಮಾಡಿದ ಈ ಅಂಕಣಕಾರನ ಭಾಷಣಮಗ್ನ ಮನಸ್ಸಿನಲ್ಲಿ ‘ಅಂಬೇಡ್ಕರ್’ ಪದ್ಯದ ಹೊಸ ಓದೊಂದು ಮೊಳೆಯಿತು: ಸಿದ್ಧಲಿಂಗಯ್ಯನವರ ಪದ್ಯದಲ್ಲಿರುವ ‘ಯಾರು?’ ಎಂಬ ಪ್ರಶ್ನೆಗೆ ಹೊಸ ಹಾಡುಗಾರರು ‘ನಾವು’ ಎಂದು ಉತ್ತರಿಸಲು ‘ವಿ ದ ಪೀಪಲ್ ಆಫ್ ಇಂಡಿಯಾ’ ಘೋಷಣೆಯೂ ಕಾರಣವಿರಬಹುದು! ಅಂದರೆ, ಹೊಸ ದಲಿತ ಹಾಡುಗಾರರಿಗೆ ‘ಛಲದ ಜೊತೆಗೆ ಬಲದ ಪಾಠ ಕಲಿಸುವವರು ನಾವು’ ಎಂಬ ಆತ್ಮವಿಶ್ವಾಸ ನಮ್ಮ ಸಂವಿಧಾನದಿಂದಲೇ ಹುಟ್ಟಿದೆ!

ಈ ಸಲ ಸಮಾಜಕಲ್ಯಾಣ ಇಲಾಖೆಯನ್ನು ವಹಿಸಿಕೊಂಡ ತಕ್ಷಣ ಶಾಲಾಕಾಲೇಜುಗಳಲ್ಲಿ ಸಂವಿಧಾನದ ಪೀಠಿಕೆಯ ಓದನ್ನು ಜಾರಿಗೊಳಿಸಿದ ಹಿರಿಯ ಸಚಿವರಾದ ಎಚ್.ಸಿ. ಮಹಾದೇವಪ್ಪನವರ ಮುನ್ನೋಟ, ಬದ್ಧತೆಗಳ ಮಹತ್ವ ಮತ್ತೆ ಮನವರಿಕೆಯಾಗತೊಡಗಿತು.

ನಾನು, ನಾನು, ನನ್ನ ಜಾತಿ, ನನ್ನ ಕುಟುಂಬ... ಇದರಿಂದಾಚೆಗೆ ಹೋಗದ ಜಾತಿಕೋರ, ಧರ್ಮಕೋರ ಭಾರತೀಯ ಮನಸ್ಸಿಗೆ ಅಂಬೇಡ್ಕರ್ ‘ವಿ ದ ಪೀಪಲ್ ಆಫ್ ಇಂಡಿಯಾ’ ಎಂಬ ಆರಂಭ ಘೋಷಣೆ ಕೊಡುವ ಮೂಲಕ ಹೊಸ ಭಾಷೆಯನ್ನೇ ಸೃಷ್ಟಿಸಿದ್ದರು; ಭಾರತೀಯ ಸಂಕುಚಿತ ಮನಸ್ಸಿನ ನಾನು ಎನ್ನುವುದನ್ನು ಅಂಬೇಡ್ಕರ್ ಭಾಷೆಯ ಮಟ್ಟದಲ್ಲಿ ಮುರಿದಿದ್ದರು. ಭಾಷೆಯ ಮಟ್ಟದಲ್ಲಿ ಮುರಿಯುವುದು ನಂತರ ಪ್ರಜ್ಞೆಯ ಮಟ್ಟದಲ್ಲಿ, ಆನಂತರ ಸಮಾಜದ ಮಟ್ಟದಲ್ಲಿ, ಮುರಿಯುವ ಹಂತಗಳಿಗೆ ದಾರಿಯಾಗುತ್ತದೆ ಎಂಬುದನ್ನು ಸ್ತ್ರೀವಾದಿಗಳು ನಮಗೆ ಹೇಳಿಕೊಟ್ಟಿದ್ದಾರಲ್ಲವೆ?

ಒಂದು ಭಾಷಣಮಗ್ನ ಮನಸ್ಸು ಅತ್ತಲಿತ್ತ ಹರಿದಾಡುತ್ತಿದ್ದರೆ, ಯಾರನ್ನೋ ಮೆಚ್ಚಿಸುವ, ಅಥವಾ ಮೆಚ್ಚಿಸಿಕೊಳ್ಳುವ ಕಾತರವಿಲ್ಲದೆ ಚಿಂತನೆಗಳು ಒಳಗೂ ಹೊರಗೂ ನಿಸ್ವಾರ್ಥದಿಂದ ಅಡ್ಡಾಡುತ್ತಿದ್ದರೆ... ನಮ್ಮಂಥವರಿಗೂ ಸಣ್ಣ ಪುಟ್ಟ ಜ್ಞಾನೋದಯ ಯಾಕಾಗಲಾರದು?

‘ಓದು ಎಂದರೆ ಅರ್ಥದ ನಿರಂತರ ಮುಂದೂಡಿಕೆ’ ಎಂದು ನಿರಚನಾವಾದಿ ಗುರು ಜಾಕ್ವೆಸ್ ಡೆರಿಡಾ ಹೇಳಿದ್ದು ಸುಮ್ಮನೆ ಅಲ್ಲ!

share
ನಟರಾಜ್ ಹುಳಿಯಾರ್
ನಟರಾಜ್ ಹುಳಿಯಾರ್
Next Story
X