Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಗಾಳಿ ಬೆಳಕು
  5. ಅಭಿರುಚಿ ತಿದ್ದುವ ನಿತ್ಯದ ಕಾಯಕ

ಅಭಿರುಚಿ ತಿದ್ದುವ ನಿತ್ಯದ ಕಾಯಕ

ನಟರಾಜ್ ಹುಳಿಯಾರ್ನಟರಾಜ್ ಹುಳಿಯಾರ್10 Nov 2025 9:00 AM IST
share
ಅಭಿರುಚಿ ತಿದ್ದುವ ನಿತ್ಯದ ಕಾಯಕ

ಅವತ್ತು ಆ ಮಾತನ್ನು ಹೇಳಬೇಕೆಂದು ಮೊದಲೇ ಟಿಪ್ಪಣಿ ಮಾಡಿಕೊಂಡಿದ್ದೆ! ಅದು ಅನಂತಮೂರ್ತಿಯವರ ಹುಟ್ಟುಹಬ್ಬದ ದಿನದ ಸಭೆ. ಅದರಲ್ಲಿ ನಾನೂ ಒಬ್ಬ ಸ್ಪೀಕರ್.

‘ಸಾರ್! ನೀವೂ, ನಿಮ್ಮ ಮೈಸೂರಿನಲ್ಲಿರುವ ಆ ಇನ್ನೊಬ್ಬ ಲೇಖಕರೂ ಹಳೇ ಹಿಂದಿ ಸಿನೆಮಾಗಳಲ್ಲಿ ಬಾಲ್ಯದಲ್ಲಿ ಬೇರ್ಪಟ್ಟ ಅವಳಿ-ಜವಳಿಗಳ ಹಾಗೆ ಅಂತ ನನಗೆ ಒಂದೊಂದ್ಸಲ ಅನ್ನಿಸುತ್ತೆ...’ ಎನ್ನುತ್ತಲೇ ಕಣ್ಣಂಚಿನಲ್ಲಿ ಅವರನ್ನು ಗಮನಿಸಿದೆ. ಅವರ ಮುಖದಲ್ಲಿ ರೇಗು ಹರಡುತ್ತಿತ್ತು... ಈ ಪರಿಣಾಮವನ್ನು ಊಹಿಸಿದ್ದ ನಾನು, ಟಿಪ್ಪಣಿ ಮಾಡಿಕೊಂಡಿದ್ದ ಮುಂದಿನ ಮಾತನ್ನು ತಕ್ಷಣ ಹೇಳಿದೆ: ‘...ಆ ಹಳೇ ಸಿನೆಮಾಗಳ ಅವಳಿಗಳಲ್ಲಿ ಒಬ್ಬ ಒಳ್ಳೆಯವನಾಗುತ್ತಾನೆ, ಇನ್ನೊಬ್ಬ ಕೆಟ್ಟವನಾಗುತ್ತಾನೆ. ನೀವು ಸೀರಿಯಸ್ ರೈಟರ್ ಆದ್ರಿ. ಅವರು ಜನಪ್ರಿಯ ರೈಟರ್ ಆದರು...’

ಅನಂತಮೂರ್ತಿಯವರ ಮುಖದ ಗಂಟು ಸಡಿಲಾಯಿತು. ಕಾಯಿಲೆಯಿಂದ ಚೇತರಿಸಿಕೊಂಡಿದ್ದ ಅವರು ಮನಸಾರೆ ನಕ್ಕರು. ಮರುಗಳಿಗೆಗೇ ನನ್ನತ್ತ ತಮ್ಮ ಬ್ರಾಂಡ್ ಮೋಹಕ ನಗೆಯನ್ನೂ ತೂರಿಬಿಟ್ಟರು!

ಅವತ್ತು ಭೈರಪ್ಪ-ಅನಂತಮೂರ್ತಿಯವರ ನಡುವೆ ತಮಾಷೆಯ ಹೋಲಿಕೆ ಮಾಡಿದ್ದರೂ, ಅದರ ಹಿಂದೆ ಒಬ್ಬ ಓದುಗನಾಗಿ ನನ್ನ ಅನುಭವದ ಪ್ರಾಮಾಣಿಕ ನೋಟ ಕೂಡ ಇತ್ತು. ಹದಿಹರೆಯದಲ್ಲಿ ಎನ್. ನರಸಿಂಹಯ್ಯ, ಜಿಂದೆ ನಂಜುಂಡಸ್ವಾಮಿಯವರ ಪತ್ತೇದಾರಿ ಕಾದಂಬರಿಗಳು, ಅಶ್ವಿನಿ, ಸಾಯಿಸುತೆಯವರ ಧಾರಾವಾಹಿಗಳನ್ನು ಓದುತ್ತಾ ಓದುತ್ತಾ... ಭೈರಪ್ಪನವರ ಕಾದಂಬರಿಗಳಿಗೆ ಭಡ್ತಿ ಪಡೆದು ಮುಂದೆ ಹೊರಟ ಕನ್ನಡ ಓದುಗರಲ್ಲಿ ನಾನೂ ಒಬ್ಬ. ಅಷ್ಟೊತ್ತಿಗಾಗಲೇ ಕಾರಂತರನ್ನೂ ಓದಿದ್ದ ನನಗೆ ಭೈರಪ್ಪನವರ ಕಾದಂಬರಿಗಳಲ್ಲಿ ಏನೋ ಸಮಸ್ಯೆ ಇದೆ ಎನ್ನಿಸುತ್ತಿತ್ತು.

ಓದಲು ಚೆನ್ನಾಗಿದೆ, ಕತೆಯ ಓಟ ಸರಾಗ

ವಾಗಿದೆ... ಆದರೆ ಏನೋ ಸಮಸ್ಯೆಯಿದೆ ಎನ್ನಿಸುತ್ತಿತ್ತು; ಏನು ಅನ್ನುವುದು ಮಾತ್ರ ಗೊತ್ತಾಗುತ್ತಿರಲಿಲ್ಲ! ಈ ಕಾದಂಬರಿಗಳಲ್ಲಿ ಹಸು, ಕಾಳಿಂಗ, ವಿದೇಶಿ ಹೆಂಡತಿ ಏನೇನೋ ಬರುತ್ತಿವೆ... ಪಾತ್ರಗಳು ತಲೆಯಲ್ಲೇ ಮಾತಾಡುತ್ತಿವೆ? ಅದ್ಯಾಕೋ ಏನೋ, ಅವೆಲ್ಲ ನನ್ನ ಹುಡುಗುಮನಸ್ಸಿಗೆ ಕನ್ವಿನ್ಸ್ ಆಗುತ್ತಿರಲಿಲ್ಲ. ಆ ಪುಟ್ಟ ಊರಿನಲ್ಲಿ ಹದಿನಾರನೆಯ ವಯಸ್ಸಿನ ಈ ಓದುಗನಿಗೆ ಕಾದಂಬರಿಯ ವಿಮರ್ಶೆಯ ಬಗ್ಗೆ ಅಷ್ಟಾಗಿ ಏನೂ ಗೊತ್ತಿಲ್ಲದ ಕಾಲ ಅದು. ಅವು ಯಾವ ವಿಮರ್ಶಾ ತರಬೇತಿಯೂ ಇಲ್ಲದ ಮುಗ್ಧ, ಸರಳ ಓದುಗನೊಬ್ಬನಲ್ಲಿ ಒಳಗೇ ಹುಟ್ಟಿದ ನಿಜವಾದ ಅನುಮಾನಗಳು.

ಅವತ್ತಿನ ಅನುಮಾನಗಳನ್ನು ನೆನೆಯುತ್ತಾ ಈ ಅಂಕಣ ಬರೆಯುತ್ತಿರುವಾಗ ಇದ್ದಕ್ಕಿದ್ದಂತೆ ಹೀಗನ್ನಿಸಿತು: ಕಾದಂಬರಿಕಾರನಿರಲಿ, ಪತ್ರಕರ್ತನಿರಲಿ, ‘ಜಾಣ’ ಓದುಗನಿಗೆ ಮಂಕುಬೂದಿ ಎರಚಬಹುದು; ಆದರೆ ಹದಿನಾರು ವರ್ಷದ ಮುಗ್ಧ ಓದುಗನ ವಿಚಾರದಲ್ಲಿ ಅದೆಲ್ಲ ನಡೆಯುವುದಿಲ್ಲ!

ಅದೇ ಸರಿಸುಮಾರಿನಲ್ಲಿ ಈ ಮುಗ್ಧ ಗೊಂದಲಕ್ಕೆ ಆಕಸ್ಮಿಕವಾಗಿ ಒಂದು ಉತ್ತರ ಸಿಕ್ಕ ಗಳಿಗೆ ಮಾತ್ರ ಇವತ್ತಿಗೂ ರೋಮಾಂಚನ ಹುಟ್ಟಿಸುತ್ತದೆ. ಅದು ನಾನು ಸಿಕ್ಕಸಿಕ್ಕ ಕನ್ನಡ ಪುಸ್ತಕಗಳನ್ನು ಓದಿ ಮುಕ್ಕುತ್ತಿದ್ದ ಅಸಾಧ್ಯ ‘ಪುಸ್ತಕ ಹಸಿವಿನ’ ಕಾಲ. ಒಂದು ಬಿಸಿಲ ಮಧ್ಯಾಹ್ನ. ನಮ್ಮೂರಿನ ಒಂದು ಕಲ್ಲು ಬೆಂಚಿನ ಮೇಲೆ ಸಗೆಣಿ ಎತ್ತಲು ಬಳಸಿ, ಬರಿದಾಗಿ ಒಣಗಿ ಹೋಗಿದ್ದ ಬಿದಿರು ತಟ್ಟಿ. ಆ ತಟ್ಟಿಯೊಳಗೆ ಒಂದು ಪುಸ್ತಕ. ಅದರ ಮುಖಪುಟ, ಮೊದಲ ಪುಟಗಳು, ಕೊನೆಯ ಪುಟಗಳು ಎಲ್ಲವೂ ಹರಿದು ಹೋಗಿ, ಏಕ್‌ದಂ ಯಾವುದೋ ಲೇಖನ ಕಣ್ಣಿಗೆ ಬಿದ್ದ ಪುಸ್ತಕ. ಆಸೆಯಿಂದ ಕೈಗೆತ್ತಿಕೊಂಡೆ.

ಪುಸ್ತಕದ ಪುಟ ತಿರುಗಿಸಿ ಕಣ್ಣಾಡಿಸಿದ ತಕ್ಷಣ ಇದು ಯಾವುದೋ ಗಂಭೀರ ಪುಸ್ತಕವೇ ಹೌದು ಎಂದು ಎದೆ ರೋಮಾಂಚನದಿಂದ ಡವಗುಟ್ಟತೊಡಗಿತು. ಓಡುನಡಿಗೆಯಲ್ಲಿ ಮನೆಗೆ ಬಂದು ಕಾತರದಿಂದ ಓದಲು ಶುರು ಮಾಡಿದಾಗ ಇದು ಯಾರೋ ದೊಡ್ಡವರ ಪುಸ್ತಕವೇ ಎಂಬುದಂತೂ ಹೊಳೆಯಿತು. ಅದು ಯಾರ ಪುಸ್ತಕ ಎಂದು ಗುರುತಿಸಿ ಹೇಳಬಲ್ಲ ಜ್ಞಾನಿಗಳು ಯಾರೂ ಆ ಊರಿನಲ್ಲಿರಲಿಲ್ಲ! ಆದರೆ ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ ‘ನಾಗರಹಾವು’ ಸಿನೆಮಾದ ಜನಪ್ರಿಯತೆ, ಹುಸಿತನ ಹಾಗೂ ಭೈರಪ್ಪನವರ ಕಾದಂಬರಿಗಳ ಜನಪ್ರಿಯತೆ- ಎರಡೂ ಒಂದೇ ಎಂದು ತೋರಿಸಿದ್ದ ಆ ಬರಹದ ಒಳನೋಟಕ್ಕೆ ಬೆರಗಾದೆ. ಆ ಲೇಖನ ನನಗರಿವಿಲ್ಲದೆಯೇ ನನ್ನ ಅಭಿರುಚಿಯನ್ನು ತಿದ್ದಿಬಿಟ್ಟಿತ್ತು.

ಇದಾದ ಐದಾರು ವರ್ಷಗಳ ನಂತರ ವಿಮರ್ಶೆಯ ಕೆಲಸದಲ್ಲಿ ‘ಕರೆಕ್ಷನ್ ಆಫ್ ಟೇಸ್ಟ್’ ಕೂಡ ಇದೆ ಎಂಬ ಟಿ.ಎಸ್. ಎಲಿಯಟ್‌ನ ಪ್ರಖ್ಯಾತ ಮಾತನ್ನು ಓದಿದೆ. ಹದಿಹರೆಯದಲ್ಲಿ ‘ಜನಪ್ರಿಯ ಕಲೆ ಮತ್ತು ಮಧ್ಯಮ ವರ್ಗ’ ಲೇಖನ ಓದಿದಾಗ ನನಗಾದದ್ದು ಅಭಿರುಚಿಯನ್ನು ತಿದ್ದಿದ ಅನುಭವ ಎಂಬುದು ಆಗ ಅರಿವಾಯಿತು. ಮುಂದೆ ಎಲಿಯಟ್ ಪಾಠ ಮಾಡುವಾಗ ನಮ್ಮ ಟೀಚಿಂಗ್, ವಿಮರ್ಶೆ, ಪಠ್ಯಪುಸ್ತಕ ಇವೆಲ್ಲವೂ ಓದುಗ, ಓದುಗಿಯರ, ವಿದ್ಯಾರ್ಥಿ, ವಿದ್ಯಾರ್ಥಿನಿಯರ ‘ಕರೆಕ್ಷನ್ ಆಫ್ ಟೇಸ್ಟ್’ ಆಗಿರಬೇಕೇ ಹೊರತು, ಅಭಿರುಚಿ ಕೆಡಿಸುವ ‘ಕರಪ್ಷನ್ ಆಫ್ ಟೇಸ್ಟ್’ ಆಗಬಾರದು ಎಂಬುದನ್ನೂ ಹೇಳತೊಡಗಿದೆ. ಪತ್ರಿಕೋದ್ಯಮ, ಮಾಧ್ಯಮಗಳಿಗೂ ಇದು ಅನ್ವಯಿಸುತ್ತದೆ ಎಂದು ಬಿಡಿಸಿ ಹೇಳಬೇಕಾಗಿಲ್ಲ!

ಹದಿಹರೆಯದಲ್ಲಿ ಇದ್ದಕ್ಕಿದ್ದಂತೆ ನನ್ನ ಅಭಿರುಚಿ ತಿದ್ದಿದ ‘ಜನಪ್ರಿಯ ಕಲೆ ಮತ್ತು ಮಧ್ಯಮ ವರ್ಗ’ ಬರಹ ಬರೆದವರು ಯು. ಆರ್. ಅನಂತಮೂರ್ತಿ ಹಾಗೂ ಅವರ ಪುಸ್ತಕದ ಹೆಸರು ‘ಸನ್ನಿವೇಶ’ ಎಂಬುದು ಗೊತ್ತಾಗಲು ಎರಡು ವರ್ಷ ಹಿಡಿಯಿತು. ಅವತ್ತು ಒಂದೇ ಏಟಿಗೆ ಭೈರಪ್ಪನವರನ್ನು ಕೈಬಿಟ್ಟ ಜಾಣ ಓದುಗನೊಬ್ಬ ಅನಂತಮೂರ್ತಿಯವರ ಓದುಗನಾದದ್ದು ಸಹಜವಾಗಿತ್ತು. ಮುಂದೊಮ್ಮೆ ಅನಂತಮೂರ್ತಿಯವರ ಆಯ್ದ ಬರಹಗಳ ಪುಸ್ತಕಗಳ ಬಿಡುಗಡೆಯ ಸಂದರ್ಭದಲ್ಲಿ ‘ನಿಮ್ಮ ‘ಸನ್ನಿವೇಶ’ದ ಲೇಖನ ಏಕ್‌ದಂ ನನ್ನನ್ನು ತಿದ್ದಿತು’ ಎಂದು ಅನಂತಮೂರ್ತಿಯವರಿಗೆ ಹೇಳಿದೆ. ಅವರಿಗೆ ಆ ಪುಸ್ತಕ, ಲೇಖನ ಎಲ್ಲವೂ ಮರೆತುಹೋಗಿತ್ತು. ಆದರೂ ನನ್ನ ಮಾತು ಕೇಳಿದಾಗ ಕೆಲವು ವರ್ಷಗಳ ಹಿಂದೆ ಸಾಹಿತ್ಯ ಪರಿಷತ್ತಿನಲ್ಲಿ ಮೂಡಿದ್ದ ಅದೇ ಸಂತೃಪ್ತ ಭಾವ ಅವರ ಮುಖದಲ್ಲಿ ಮೂಡಿತು!

ಮುಂದೊಮ್ಮೆ ‘ಸನ್ನಿವೇಶ’ ಸಂಕಲನದಲ್ಲಿರುವ ‘ಕಾದಂಬರಿ ಮತ್ತು ಹೊಸ ನೈತಿಕ ಪ್ರಜ್ಞೆ’ ಎಂಬ ಕಾದಂಬರಿ ಥಿಯರಿಯ ಲೇಖನವನ್ನು ನಾನೇ ಎಂ.ಎ. ಪಠ್ಯವಾಗಿ ಆಯ್ಕೆ ಮಾಡಿ, ಇಷ್ಟಪಟ್ಟು, ವಿಸ್ತೃತವಾಗಿ ಟೀಚ್ ಮಾಡಿದ ನೆನಪು ಹಸಿರಾಗಿದೆ. ಈ ಲೇಖನದಲ್ಲಿ ಕಾದಂಬರಿಕಾರ ಒತ್ತಾಯಪೂರ್ವಕವಾಗಿ ಏನನ್ನಾದರೂ ಹೇರಿದರೆ, ಕಾದಂಬರಿಗಿಂತಲೂ ತಾನು ದೊಡ್ಡವನಾಗಲು ಹೊರಟರೆ ಏನಾಗುತ್ತದೆ ಎಂಬ ಬಗ್ಗೆ ಆರ್ಟಿಗಾ ಗ್ಯಾಸೆಯ ಸೂಕ್ಷ್ಮ ನೋಟ ಕಾದಂಬರಿ ಕುರಿತ ನನ್ನ ಅಭಿರುಚಿಯನ್ನು ಮತ್ತಷ್ಟು ತಿದ್ದಿತು.

ಮೇಲೆ ಹೇಳಿರುವ ಆರ್ಟಿಗಾ ಗ್ಯಾಸೆಯ ಮಾತು; ಕಾದಂಬರಿಕಾರ ತನಗಿಂತ ಹೆಚ್ಚಿನವ

ನಾಗಲು ಹೊರಟರೆ ಕಾದಂಬರಿ ಅವನ ಮೇಲೆ ಸೇಡು ತೀರಿಸಿಕೊಳ್ಳುತ್ತದೆ ಎಂಬ ಅವನ ಅಪೂರ್ವ ಒಳನೋಟ; ಹಾಗೂ ‘ಜನಪ್ರಿಯ ಕಲೆ ಮತ್ತು ಮಧ್ಯಮ ವರ್ಗ’ ಎಂಬ ಲೇಖನ- ಈ ಮೂರನ್ನೂ ಓದಿ ಧ್ಯಾನಿಸಿದ್ದರೆ ಭೈರಪ್ಪನವರ ಕಲೆಗೆ ಒಳ್ಳೆಯದಾಗುತ್ತಿತ್ತೇನೋ. ಸ್ವತಃ ಅನಂತಮೂರ್ತಿಯವರೇ ತಮ್ಮ ‘ಭಾರತೀಪುರ’ ಕಾದಂಬರಿ ಬರೆಯುವಾಗ ಆರ್ಟಿಗಾ ಗ್ಯಾಸೆಯನ್ನು ಗ್ರಹಿಸಿದ್ದರೆ ಅವರಿಗೂ ಒಳ್ಳೆಯದಾಗುತ್ತಿತ್ತೇನೋ!

ಈ ಬರಹದ ಶುರುವಿನಲ್ಲಿ ಹೇಳಿದ ತಮಾಷೆಯ ಹೋಲಿಕೆ ಮಾಡುವ ಹೊತ್ತಿಗಾಗಲೇ ಅನಂತಮೂರ್ತಿಯವರ ಎಲ್ಲ ಕಾದಂಬರಿಗಳನ್ನೂ ಓದಿದ್ದ ನನಗೆ ಒಮ್ಮೆ ಇದ್ದಕ್ಕಿದ್ದಂತೆ ‘ಅನಂತಮೂರ್ತಿ ಕೂಡ ಭೈರಪ್ಪ ಶೋಧಿಸಿದ ರೀತಿಯ ವಸ್ತುಗಳನ್ನು ಶೋಧಿಸಿದ್ದಾರಲ್ಲ!’ ಎನ್ನಿಸಿ ಅಚ್ಚರಿಯಾಯಿತು. ಮೇಲೆ ಹೇಳಿದ ಅವಳಿ-ಜವಳಿ ಹೋಲಿಕೆ ಹುಟ್ಟಿದ್ದು ಆಗ. ಬ್ರಾಹ್ಮಣರ ಶವಸಂಸ್ಕಾರದ ಕಾಲದ ಬಿಕ್ಕಟ್ಟು, ದೇವಾಲಯ ಪ್ರವೇಶದ ಸಮಸ್ಯೆ, ಬ್ರಾಹ್ಮಣ ಹುಡುಗರ ಬಂಡಾಯ... ಕೊನೆಗೆ ಈ ಸಂಸ್ಕೃತಿಯಲ್ಲಿ ‘ಹೊಂಡವೆಂದುಕೊಂಡಿದ್ದ ಕಡೆ ದಿವ್ಯ ಸರಸ್ಸೂ ಇದೆ’ ಎಂಬ ‘ದಿವ್ಯ’ ಕಾದಂಬರಿಯ ‘ನವಜ್ಞಾನ’...ಇವೆಲ್ಲ ನೆನಪಾದಂತೆ, ಎಲ್ಲೋ ಈ ಬೇರ್ಪಟ್ಟ ಅವಳಿಗಳ ‘ತಾತ್ವಿಕ ಭೇಟಿ’ ನಡೆದಿರಬಹುದೇ ಎನ್ನಿಸತೊಡಗಿತು!

ಇದೆಲ್ಲದರ ನಡುವೆ ಈ ಇಬ್ಬರನ್ನೂ ಕುರಿತ ಒಂದು ಕುತೂಹಲಕರ ವಿವರ ನೆನಪಾಗುತ್ತದೆ: ಅನಂತಮೂರ್ತಿ, ಭೈರಪ್ಪ ಇಬ್ಬರೂ ಕೆಲ ಕಾಲವಾದರೂ ಸ್ವಜಾತಿಗಳ ವಿಮರ್ಶಕರಾಗಿದ್ದವರೇ. ಲೋಹಿಯಾ ಫಿಲಾಸಫಿ ಅನಂತಮೂರ್ತಿಯವರಿಗೆ ಜಾತಿಸಮಾಜದ ಹಿಂಸೆಗಳನ್ನು ಗ್ರಹಿಸುವ ಕಣ್ಣನ್ನು, ತಾತ್ವಿಕತೆಯನ್ನು ಕೊಟ್ಟಿದ್ದರಿಂದ ಕೂಡ ಅನಂತಮೂರ್ತಿ ಗಟ್ಟಿಯಾದರು. ಆದರೆ ಫಿಲಾಸಫಿ ಪ್ರೊಫೆಸರ್ ಭೈರಪ್ಪ ತಮ್ಮ ಬರವಣಿಗೆಗೆ ಬೇಕಾದ ಅಸಲಿ ಫಿಲಾಸಫಿಯೊಂದನ್ನು ಹುಡುಕಿಕೊಳ್ಳಲಾರದೆ ಹೋದರು. ಎಲ್ಲಕ್ಕಿಂತ ಮುಖ್ಯವಾಗಿ, ಸ್ವಜಾತಿಯ ದೌರ್ಬಲ್ಯಗಳ ವಿಮರ್ಶಕನಾಗಿ ಒಂದು ಕಾಲಕ್ಕೆ ತಮ್ಮ ಬರವಣಿಗೆ ಪಡೆದ ಒಗರನ್ನು ಉಳಿಸಿಕೊಳ್ಳಲಾಗದೆ ಭೈರಪ್ಪ ದೂರ ಸರಿದರು. ಕೊನೆಕೊನೆಗೆ ಬಂದ ಅನಂತಮೂರ್ತಿಯವರ ‘ದಿವ್ಯ’, ‘ಭವ’ ಕಾದಂಬರಿಗಳೂ ಕಾದಂಬರಿಕಾರನ ಆರಂಭಘಟ್ಟದ ಸ್ವವಿಮರ್ಶೆಯ ತೀಕ್ಷ್ಣತೆಯನ್ನು ಕಳೆದುಕೊಂಡಿದ್ದವು.

ನಿರಂತರ ಸಮಾಜ ವಿಮರ್ಶೆ, ಸಂಸ್ಕೃತಿ ವಿಮರ್ಶೆ ಹಾಗೂ ತನ್ನ ಬರವಣಿಗೆಯ ಬಗ್ಗೆ ಕಾಲಕಾಲದ ಸ್ವವಿಮರ್ಶೆಯಿಲ್ಲದೆ ಯಾವುದೇ ಲೇಖಕ- ಲೇಖಕಿಯರಾಗಲಿ, ಪತ್ರಕರ್ತರಾಗಲಿ ಜೀವಂತವಾಗಿ, ಅರ್ಥಪೂರ್ಣವಾಗಿ ಉಳಿಯುವುದು ಕಷ್ಟ.

share
ನಟರಾಜ್ ಹುಳಿಯಾರ್
ನಟರಾಜ್ ಹುಳಿಯಾರ್
Next Story
X