Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಗಲ್ಫ್
  4. ದುಬೈ| ಬಿಸಿಫ್ ಇಫ್ತಾರ್ ಮೀಟ್ 2025:...

ದುಬೈ| ಬಿಸಿಫ್ ಇಫ್ತಾರ್ ಮೀಟ್ 2025: ಬೃಹತ್ ಸೌಹಾರ್ದ ಇಫ್ತಾರ್ ಸಮಾವೇಶ

ವಾರ್ತಾಭಾರತಿವಾರ್ತಾಭಾರತಿ14 March 2025 11:21 PM IST
share
ದುಬೈ| ಬಿಸಿಫ್ ಇಫ್ತಾರ್ ಮೀಟ್ 2025: ಬೃಹತ್ ಸೌಹಾರ್ದ ಇಫ್ತಾರ್ ಸಮಾವೇಶ

ದುಬೈ: ಅನಿವಾಸಿ ಕನ್ನಡ ಪರ ಸಮಾಜ ಸೇವಾ ಸಂಸ್ಥೆಗಳಲ್ಲಿ ಅತೀ ಜನಪ್ರಿಯವಾದ ಬ್ಯಾರೀಸ್ ಕಲ್ಚರಲ್ ಫೋರಮ್ (BCF) ವತಿಯಿಂದ ಮಾ.8ರಂದು ದುಬೈಯ ಅಲ್ ಜಾಹಿಯಾ ಸಭಾಂಗಣದಲ್ಲಿ ಬೃಹತ್ ಇಫ್ತಾರ್ ಸಮಾಗಮ ಅದ್ದೂರಿಯಾಗಿ ನಡೆಯಿತು.

BCF ಅಧ್ಯಕ್ಷರಾದ ಡಾ. ಬಿ ಕೆ ಯೂಸುಫ್ ಮತ್ತು BCF ಸ್ಥಾಪಕ ಪೇಟ್ರನ್ ಆದ ಡಾ. ತುಂಬೆ ಮೊಯ್ದಿನ್, ಭಾರತೀಯ ಕೌನ್ಸಿಲ್ ಜನರಲ್, ದುಬೈ ಮತ್ತು ಉತ್ತರ ಅಮೀರಾತ್ (Hon.Council General of India for Dubai and Northern Emirates )ರಾದ ಸತೀಶ್ ಕುಮಾರ್ ಶಿವನ್, ಅಲ್ ಹಾಜ್ ತಾಹಾ ಬಾಫಖಿ ತಂಙಳ್ ಮತ್ತು ಅಸ್ಸರ್ ಅಲಿ ತಂಙಳ್ ಅವರ ಗೌರವಾನ್ವಿತ ಉಪಸ್ಥಿತಿಯಲ್ಲಿ ಇಫ್ತಾರ್ ಸಮಾವೇಶ ನೆರವೇರಿತು.


ಬಿಸಿಫ್ ಪ್ರಧಾನ ಕಾರ್ಯದರ್ಶಿ ಡಾ.ಕಾಪು ಮಹಮ್ಮದ್, ಬಿಸಿಫ್ ಇಫ್ತಾರ್ ಕಮಿಟಿಯ ಚೆಯರ್ಮ್ಯಾನ್ ‌ ಅಬ್ದುಲ್ ಲತೀಫ್ ಮುಲ್ಕಿ, ಉಪ ಚೆಯರ್ಮ್ಯಾನ್ ಅಫೀಕ್ ಹುಸೈನ್, ಕೋಶಾಧಿಕಾರಿ ಅಸ್ಲಾಂ ಕಾರಾಜೆ, ಬಿಸಿಫ್ ಗೌರವ ಸಲಹೆಗಾರರಾದ ಇಬ್ರಾಹಿಂ ಗಡಿಯಾರ್ ಮತ್ತು ಅಬೂಸಾಲಿಹ್, ಉಪಾಧ್ಯಕ್ಷರಾದ ಎಂ ಈ ಮೂಳೂರು, ಅಮೀರುದ್ದೀನ್ ಎಸ್‌ ಐ, ರಿಝ್ವಾನುಲ್ಲಾಖಾನ್, ಕೆ ಎಂ ಅಶ್ರಫ್, ಪ್ರವೀಣ್ ಅಮರನಾಥ್, ಅಡ್ವಕೇಟ್ ಖಲೀಲ್, ಸಲ್ಮಾನ್ ಅಬ್ದುಲ್ ಖಾದರ್, ಮಝ್‌ಹರ್ ಸಯ್ಯದ್ ಬ್ಯಾರಿ, ಖಾಲಿಕ್ ಅಲಿ, ಮುಝಫರ್, ಹಿದಾಯತ್ ಅಡ್ಡೂರು, ಅಶ್ರಫ್ ಎಸ್ ಮಂತೂರು, ನೂರ್ ಅಷ್ಫಾಕ್, ಬಶೀರ್ ಕಿನ್ನಿಂಗಾರ್ ಮೊದಲಾದ ವಿಶೇಷ ಅತಿಥಿಗಳು ಉಪಸ್ಥಿತರಿದ್ದರು.


BCF ಪದಾಧಿಕಾರಿಗಳಾದ ಯಾಕುಬ್ ದೀವಾ, ಇಕ್ಬಾಲ್ ಮೇಫ, ಸಮದ್ ಬೀರಾಲಿ, ಉಸ್ಮಾನ್ ಮೂಳೂರು, ನವಾಝ್ ಕೋಟೆಕಾರ್, ನಿಯಾಝ್, ಸತ್ತಿಕಲ್ ಅಶ್ರಫ್, ಸುಲೈಮಾನ್ ಮೂಳೂರು, ರಫೀಕ್ ಮುಲ್ಕಿ, ಅಮೀ‌ರ್ ಹಳೆಯಂಗಡಿ, ರಿಯಾಝ್ ಸುರತ್ಕಲ್ ಮತ್ತು BCF ಮಹಿಳಾ ಘಟಕದ ಪ್ರೆಸಿಡೆಂಟ್ ಮುಮ್ತಾಝ್ ಕಾಪು‌ ಮತ್ತು ಇತರ ಮಹಿಳಾ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡಿದ್ದ ಈ ಕಾರ್ಯಕ್ರಮಕ್ಕೆ ಸುಮಾರು 1,400 ಮಂದಿ ಅನಿವಾಸಿ ಕನ್ನಡಿಗರು ಸೇರಿದ್ದರು.


ವಿವಿಧ ಕನ್ನಡ ಪರ ಸೇವಾ ಸಂಸ್ಥೆಗಳ ಪ್ರತಿನಿಧಿಗಳು, ವಿವಿಧ ಮಾಧ್ಯಮದ ಪ್ರತಿನಿಧಿಗಳು ಸೇರಿದಂತೆ ಮಹನೀಯರು-ಮಹಿಳೆಯರು -ಮಕ್ಕಳು ಸೇರಿದಂತೆ ಬೃಹತ್ ಅನಿವಾಸಿ ಜಾತ್ಯಾತೀತ ಸಮಾವೇಶವಾದ BCF IFTAR MEET 2025 ಭಾರತದ, ಮುಖ್ಯವಾಗಿ ಕರ್ನಾಟಕದ ಭಾವೈಕ್ಯತೆಯ ಒಂದು ಮಾದರಿ ಜನಸಮೂಹವಾಗಿ ಕಂಡು ಬಂತು.




ಇಫ್ತಾರ್ ಗೆ ಮೊದಲು ಅಂದು ಸೇರಿದ ಮಕ್ಕಳಿಗೆ ಕಿರಾಅತ್ ಮತ್ತು ಇಸ್ಲಾಮಿಕ್ ರಸ ಪ್ರಶ್ನೆಯ ಕಾರ್ಯಕ್ರಮವನ್ನು ಅಶ್ರಫ್ ಸತ್ತಿಕಲ್ ಮಾಡಿದರು. ತಾಹಾ ಬಾಫಖಿ ತಂಙಳ್ ಅವರು ದುವಾ ಗೈದರು. ಇಫ್ತಾರ್ ಆದ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾರತೀಯ ರಾಯಭಾರಿಗಳಾದ ಸತೀಶ್ ಕುಮಾರ್ ಶಿವನ್ ತಮ್ಮ ದಿಕ್ಕೂಚಿ ಭಾಷಣದಲ್ಲಿ BCF ನ ಸೇವಾ ಕಾರ್ಯವನ್ನು ಶ್ಲಾಘಿಸುತ್ತಾ ಅನಿವಾಸಿ ಕನ್ನಡಿಗರ ದೇಶ ಪ್ರೇಮ ಮತ್ತು ಸೇವಾ ಮನೋಭಾವವನ್ನು ಕೊಂಡಾಡಿದರು.


ಇದೆ ಸಂದರ್ಭದಲ್ಲಿ ಭಾರತೀಯ ರಾಯಭಾರಿಗಳಾದ ಸತೀಶ್ ಕುಮಾರ್ ಶಿವನ್ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.


ನಂತರ ಅಧ್ಯಕ್ಷರಾದ ಡಾ. ಬಿ ಕೆ ಯೂಸುಫ್ BCF ನಡೆದು ಬಂದ ದಾರಿ ಮತ್ತು ಅದು ಇದುವರೆಗೆ ಮಾಡಿದ ಸೇವಾ ಕಾರ್ಯದ ಬಗ್ಗೆ ವಿವರಿಸಿದರು. BCF ಇಫ್ತಾರ್ ಕಮಿಟಿ ಚೆಯರ್ಮ್ಯಾನ್ ಅಬ್ದುಲ್ ಲತೀಫ್ ಮುಲ್ಕಿ ಇಫಾರ್ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೆ ಅಭಿನಂದನೆ ನೀಡಿ ಸೇರಿದ ಜನಕೂಟಕ್ಕೆ ಧನ್ಯವಾದ ನೀಡಿದರು.

BCF ಸ್ಕಾಲರ್ಷಿಪ್ ಚೆಯರ್ಮ್ಯಾನ್ ಎಂ ಈ ಮೂಳೂರು ಮಾತಾಡುತ್ತಾ ಮುಂದಿನ ಆಗಸ್ಟ್ ತಿಂಗಳಲ್ಲಿ ಮಂಗಳೂರಿನಲ್ಲಿ ನಡೆಯುವ BCF ವಿದ್ಯಾರ್ಥಿ ವೇತನ ಸಮಾವೇಶದ ಬಗ್ಗೆ ಮಾತಾಡುತ್ತಾ ಎಲ್ಲರ ನೆರವನ್ನು ಕೋರಿದರು. ರಿಝ್ವಾನುಲ್ಲಾ ಖಾನ್ ರವರು ತಮ್ಮ ಭಾಷಣದಲ್ಲಿ ಸಾಮಾಜಕ ಸೇವೆಯ ಪ್ರಾಮುಖತೆ ಬಗ್ಗೆ ಉಲ್ಲೇಖಿಸುತ್ತಾ BCF ಮಾಡುವ ಸೇವಾ ಕಾರ್ಯವನ್ನು ಶ್ಲಾಘಿಸಿದರು. ಅಫೀಕ್ ಹುಸೈನ್ ರವರು ತಮ್ಮ ಭಾಷಣದಲ್ಲಿ BCF ಇಫ್ತಾರ್ ಕಾರ್ಯಕ್ರಮಕ್ಕೆ ಸಹಕರಿಸಿದವರಿಗೆ ಧನ್ಯವಾದವನ್ನಿತ್ತರು.


ಕಿರಾಅತ್ ಮತ್ತು ಇಸ್ಲಾಮಿಕ್ ರಸ ಪ್ರಶ್ನೆಯಲ್ಲಿ ವಿಜೇತರಾದ ಮಕ್ಕಳಿಗೆ ಈ ಸಂದರ್ಭದಲ್ಲಿ ಬಹುಮಾನ ನೀಡಿ, ಗೌರವಿಸಲಾಯಿತು. ಸುಲೈಮಾನ್ ಮೂಳೂರು ಅವರು ಧನ್ಯವಾದ ಸಮರ್ಪಿಸಿದರು.


ಅಂದು ಸೇರಿದ ಎಲ್ಲ ಮಹಿಳೆಯರಿಗೆ ಮತ್ತು ಮಹನೀಯರಿಗೆ ವಿಶೇಷ ಉಡುಗೊರೆಗಳನ್ನು ನೀಡಲಾಯಿತು. ರುಚಿಕರ ಆಹಾರ ಮತ್ತು ಪಾನೀಯಗಳನ್ನು ಸುಸಜ್ಜಿತ, ವ್ಯವಸ್ಥಿತವೂ ಆದ ರೀತಿಯಲ್ಲಿ ವಿತರಿಸುವುದರೊಂದಿಗೆ ಅತ್ಯಂತ ಸ್ನೇಹಪೂರ್ವವಾಗಿ ಇಫ್ತಾರ್ ಕಾರ್ಯಕ್ರಮ ನಡೆಯಿತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X