ಮಕ್ಕಾ: IOC ವತಿಯಿಂದ ಸಾಗರೋತ್ತರ ಕಾಂಗ್ರೆಸ್ ಸಮಿತಿಯ ಸಭೆ, ಲೋಗೋ ಅನಾವರಣ

ಮಕ್ಕಾ: ಇಂಡಿಯನ್ ಓವರ್‌ಸೀಸ್ (IOC) ಕಾಂಗ್ರೆಸ್ ವತಿಯಿಂದ ಮಕ್ಕಾದ ಪಾನೂರ್ ಆಡಿಟೋರಿಯಂ ನಲ್ಲಿ ಹಮ್ಮಿಕೊಂಡಿದ್ದ ಸಾಗರೋತ್ತರ ಕಾಂಗ್ರೆಸ್ ಸಮಿತಿಯ ಸಭೆ ಹಾಗೂ ಲೋಗೋ ಅನಾವರಣ ಕಾರ್ಯಕ್ರಮ ನಡೆಯಿತು.
ಕರ್ನಾಟಕ ವಿಧಾನ ಪರಿಷತ್ ನ ಸರ್ಕಾರಿ ಮುಖ್ಯ ಸಚೇತಕರಾದ ಸಲೀಂ ಅಹ್ಮದ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ಮಾತನಾಡಿ ಅನಿವಾಸಿ ಭಾರತೀಯರ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಭೆಯಲ್ಲಿ IOC ರಾಷ್ಟ್ರೀಯ ಅಧ್ಯಕ್ಷ ಜಾವೇದ್ ಮಿಯಾಂದಾದ್, ಮಕ್ಕಾ ಕೇಂದ್ರ ಸಮಿತಿ ಅಧ್ಯಕ್ಷ ಶಾಜಿ ಚುನಕ್ಕರ, ಕೋಶಾಧಿಕಾರಿ ಇಬ್ರಾಹಿಂ ಕಣ್ಣಂಗಾರ್, ಶಾನಿಯಾಸ್ ಕುನ್ನಿಕೋಡು, ನೌಶಾದ್ ತೊಡುಪುಳ, ಇಕ್ಬಾಲ್ ಗಬ್ಗಲ್, ಅಝರ್ ಎಂ.ಕೆ, ಹಾರಿಸ್ ಮನ್ನಾರ್ಕಾಡ್, ಝಕೀರ್ ಕೊಡುವಳ್ಳಿ, ಅರ್ಮಾನ್ ಅಹ್ಮದ್ ಹಾಗು ಮತ್ತಿತರರು ಉಪಸ್ಥಿತರಿದ್ದರು.
Next Story





