Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಲಂಡನ್ ಡೈರಿ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಗಲ್ಫ್
  4. GMU ಹಳೆಯ ವಿದ್ಯಾರ್ಥಿಗಳ ಶೃಂಗಸಭೆಯಲ್ಲಿ...

GMU ಹಳೆಯ ವಿದ್ಯಾರ್ಥಿಗಳ ಶೃಂಗಸಭೆಯಲ್ಲಿ ನಾಲ್ಕು ಹೊಸ ಅಂತರರಾಷ್ಟ್ರೀಯ ಘಟಕಗಳ ಉದ್ಘಾಟನೆ

► 5,000ಕ್ಕೂ ಅಧಿಕ ಪದವೀಧರರು; ಒಂದೇ ಜಾಗತಿಕ ಕುಟುಂಬ

ವಾರ್ತಾಭಾರತಿವಾರ್ತಾಭಾರತಿ24 Nov 2026 11:26 PM IST
share
GMU ಹಳೆಯ ವಿದ್ಯಾರ್ಥಿಗಳ ಶೃಂಗಸಭೆಯಲ್ಲಿ ನಾಲ್ಕು ಹೊಸ ಅಂತರರಾಷ್ಟ್ರೀಯ ಘಟಕಗಳ ಉದ್ಘಾಟನೆ

ಅಜ್ಮಾನ್: ಗಲ್ಫ್ ವೈದ್ಯಕೀಯ ಯುನಿವರ್ಸಿಸಿಯ (GMU) ತನ್ನ ಹಳೆಯ ವಿದ್ಯಾರ್ಥಿಗಳ ಜಾಗತಿಕ ಸಂಪರ್ಕ ಜಾಲವನ್ನು ಮತ್ತಷ್ಟು ವಿಸ್ತರಿಸಿದೆ. 2026ರ ಹಳೆಯ ವಿದ್ಯಾರ್ಥಿಗಳ ಶೃಂಗಸಭೆಯ ಅಂಗವಾಗಿ ಕೆನಡಾ, ಒಮಾನ್, ಖತರ್ ಮತ್ತು ಸ್ವೀಡನ್ ನಲ್ಲಿ ನಾಲ್ಕು ಹೊಸ ಅಂತರರಾಷ್ಟ್ರೀಯ ಘಟಕಗಳನ್ನು ಆರಂಭಿಸಲಾಗಿದೆ. ಇದರೊಂದಿಗೆ ವಿಶ್ವವಿದ್ಯಾಲಯದ ಅಂತರರಾಷ್ಟ್ರೀಯ ಹಳೆಯ ವಿದ್ಯಾರ್ಥಿಗಳ ಘಟಕಗಳ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಇದೇ ಸಂದರ್ಭದಲ್ಲಿ ಜಾಗತಿಕ ಆರೋಗ್ಯ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿರುವ 28 ಪದವೀಧರರನ್ನು ಗೌರವಿಸಲಾಗಿದೆ.

ರವಿವಾರ ಅಜ್ಮಾನ್ ನ ತುಂಬೆ ಮೆಡಿಸಿಟಿಯಲ್ಲಿರುವ GMU ಕ್ಯಾಂಪಸ್ ನಲ್ಲಿ ನಡೆದ ಶೃಂಗಸಭೆಯಲ್ಲಿ ತುಂಬೆ ಗ್ರೂಪ್ ನ ಸ್ಥಾಪಕ ಅಧ್ಯಕ್ಷ ಡಾ. ತುಂಬೆ ಮೊಯ್ದೀನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. GMU ಕುಲಪತಿ ಪ್ರೊ. ಮಂದಾ ವೆಂಕಟರಮಣ, ಹಳೆಯ ವಿದ್ಯಾರ್ಥಿಗಳ ವಿಭಾಗದ ಮುಖ್ಯಸ್ಥೆ ನೌಶೀನ್ ಸಲ್ಮಾ, GMU ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಡಾ. ಉಮರ್ ನಬಿ ಸೇರಿದಂತೆ ವಿಶ್ವವಿದ್ಯಾಲಯದ ಉಪಕುಲಪತಿಗಳು, ಡೀನ್ ಗಳು ಮತ್ತು ಅಧ್ಯಾಪಕರು ಉಪಸ್ಥಿತರಿದ್ದರು.

ಡಾ. ತುಂಬೆ ಮೊಯ್ದೀನ್ ಅವರು ಕೆನಡಾ, ಒಮಾನ್, ಖತರ್ ಮತ್ತು ಸ್ವೀಡನ್ ನಲ್ಲಿನ ನಾಲ್ಕು ಹೊಸ ಅಂತರ ರಾಷ್ಟ್ರೀಯ ಹಳೆಯ ವಿದ್ಯಾರ್ಥಿಗಳ ಘಟಕಗಳನ್ನು ಉದ್ಘಾಟಿಸಿದರು. ಅಮೆರಿಕ, ಬ್ರಿಟನ್, ಭಾರತ, ಜರ್ಮನಿ, ಬಹ್ರೇನ್ ಮತ್ತು ಪೋಲೆಂಡ್ ನಲ್ಲಿ ಈಗಾಗಲೇ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಹೊಸ ಘಟಕಗಳ ಆರಂಭದೊಂದಿಗೆ ಈ ಸಂಖ್ಯೆ 10ಕ್ಕೆ ತಲುಪಿದೆ.

ಕೆನಡಾದಲ್ಲಿ ಡಾ. ರಿಝ್ವಾನ್ ರಶೀದ್, ಒಮಾನ್‌ ನಲ್ಲಿ ಡಾ. ಫರ್ಹಾನಾ ಅಲ್ ಒತ್ಮಾನಿ, ಖತರ್ ನಲ್ಲಿ ಡಾ. ಜುಯೆಲ್ ಚೌಧರಿ ಮತ್ತು ಸ್ವೀಡನ್ ನಲ್ಲಿ ನರ್ಮೀನ್ ಅನೀಸ್ ಅವರು ಆಯಾ ಘಟಕಗಳ ನೇತೃತ್ವ ವಹಿಸಲಿದ್ದಾರೆ. ವಿದೇಶಗಳಲ್ಲಿ ನೆಲೆಸಿರುವ GMU ಪದವೀಧರರಿಗೆ ವಿಶ್ವವಿದ್ಯಾಲಯದೊಂದಿಗೆ ಸಂಪರ್ಕದಲ್ಲಿರಲು ಈ ಘಟಕಗಳು ವೇದಿಕೆಯಾಗಲಿವೆ. ಅಲ್ಲದೆ, ಮಾರ್ಗದರ್ಶನ, ವೃತ್ತಿಪರ ಬೆಳವಣಿಗೆ ಮತ್ತು ಸ್ಥಳೀಯ ಮಟ್ಟದಲ್ಲಿ ಸಂಪರ್ಕ ಜಾಲ ಬೆಳೆಸಿಕೊಳ್ಳಲು ಅವಕಾಶ ಕಲ್ಪಿಸಲಿವೆ.

ವಿಶ್ವವಿದ್ಯಾಲಯದ 28ನೇ ವರ್ಷಾಚರಣೆಯ ಅಂಗವಾಗಿ ಡಾ. ತುಂಬೆ ಮೊಯ್ದೀನ್ ಅವರು '28 GMU ಐಕಾನ್ಸ್' ಪುಸ್ತಕವನ್ನು ಅನಾವರಣಗೊಳಿಸಿದರು. ವಿವಿಧ ವಿಭಾಗಗಳನ್ನು ಮುನ್ನಡೆಸಿದ, ವೈದ್ಯಕೀಯ ಕ್ಷೇತ್ರದಲ್ಲಿ ತಮ್ಮದೇ ಆದ ಕಾರ್ಯಕ್ಷೇತ್ರಗಳನ್ನು ರೂಪಿಸಿಕೊಂಡ, ಸಂಶೋಧನೆಗೆ ಕೊಡುಗೆ ನೀಡಿದ ಹಾಗೂ ಸಮುದಾಯದ ಸೇವೆಯಲ್ಲಿ ತೊಡಗಿಸಿಕೊಂಡ ಪದವೀಧರರ ಸಾಧನೆಗಳನ್ನು ಈ ಪುಸ್ತಕ ದಾಖಲಿಸಿದೆ. ಪುಸ್ತಕದಲ್ಲಿ ಗುರುತಿಸಲಾದ 28 ಮಂದಿ ಸೇರಿದಂತೆ ಶೃಂಗಸಭೆಯ ಪ್ಯಾನಲಿಸ್ಟ್ ಗಳು ಮತ್ತು ಪ್ರಶಸ್ತಿ ಪುರಸ್ಕೃತರನ್ನು ಗೌರವಿಸಲಾಯಿತು.

ಇದಕ್ಕೂ ಮೊದಲು 'GMU ಹಳೆಯ ವಿದ್ಯಾರ್ಥಿಗಳು - ಭವಿಷ್ಯಕ್ಕೆ ಸಿದ್ಧರು' ಎಂಬ ವಿಷಯದಡಿ ನಡೆದ ಪ್ಯಾನಲ್ ಚರ್ಚೆಯಲ್ಲಿ ಆರು ಹಳೆಯ ವಿದ್ಯಾರ್ಥಿಗಳು ತರಗತಿಯಿಂದ ಕ್ಲಿನಿಕಲ್ ನಾಯಕತ್ವದವರೆಗಿನ ತಮ್ಮ ವೃತ್ತಿಪರ ಪಯಣವನ್ನು ಹಂಚಿಕೊಂಡರು. 1998ರಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಹಳೆಯ ವಿದ್ಯಾರ್ಥಿಗಳು ಡಾ. ತುಂಬೆ ಮೊಯ್ದೀನ್ ಅವರಿಗೆ ಸ್ಮರಣಿಕೆಯನ್ನು ನೀಡಿದರು.

"ನಮ್ಮ ಪದವೀಧರರು ಅತ್ಯುತ್ತಮರು. ಅವರು ನಮ್ಮೊಂದಿಗೆ ಇರಬೇಕೆಂದು ನಾವು ಬಯಸುತ್ತೇವೆ. ಈ ಕಾರಣ ಕ್ಕಾಗಿಯೇ ತುಂಬೆ ಗ್ರೂಪ್ ನಾದ್ಯಂತ ಇರುವ ಉದ್ಯೋಗಾವಕಾಶಗಳಲ್ಲಿ ಶೇ. 3ರಷ್ಟನ್ನು GMU ಹಳೆಯ ವಿದ್ಯಾರ್ಥಿಗಳಿಗಾಗಿ ಮೀಸಲಿಡಲಾಗಿದೆ. ಅವರು ಜಗತ್ತಿನ ಯಾವುದೇ ಭಾಗದಲ್ಲಿ ಕೆಲಸ ಮಾಡುತ್ತಿದ್ದರೂ GMU ಕುಟುಂಬ ಅವರ ಬೆಂಬಲಕ್ಕೆ ನಿಲ್ಲುತ್ತದೆ" ಎಂದು ಡಾ. ತುಂಬೆ ಮೊಯ್ದೀನ್ ಹೇಳಿದರು.

"ಒಂದು ವಿಶ್ವವಿದ್ಯಾಲಯದ ಸಾಧನೆಯನ್ನು ಅದರ ಪದವೀಧರರು ಶಿಕ್ಷಣ ಮುಗಿಸಿ ಹೊರಬಂದ ಬಳಿಕ ಏನು ಸಾಧಿಸುತ್ತಾರೆ ಎಂಬುದರ ಆಧಾರದಲ್ಲಿ ಅಳೆಯಲಾಗುತ್ತದೆ. ಇಂದಿನ 28 ಐಕಾನ್ಗಳು GMUನ ಮೌಲ್ಯಗಳನ್ನು ಪ್ರತಿಬಿಂಬಿಸುತ್ತಾರೆ. ನಾಲ್ಕು ಹೊಸ ಘಟಕಗಳ ಆರಂಭದೊಂದಿಗೆ ನಮ್ಮ ಹಳೆಯ ವಿದ್ಯಾರ್ಥಿಗಳಿಗೆ ಈಗ 10 ದೇಶಗಳಲ್ಲಿ GMUನ ಸಂಪರ್ಕ ವೇದಿಕೆ ಲಭ್ಯವಾಗಿದೆ. ಅಜ್ಮಾನ್ ನಲ್ಲಿ ನಾವು ನೀಡುವ ಶಿಕ್ಷಣವು ಪದವೀಧರರು ಸೇವೆ ಸಲ್ಲಿಸುವ ಪ್ರತಿಯೊಂದು ದೇಶದಲ್ಲೂ ಜನರ ಬದುಕನ್ನು ಬದಲಾಯಿಸುತ್ತಿದೆ ಎಂಬುದಕ್ಕೆ ಈ ಘಟಕಗಳು ಸಾಕ್ಷಿಯಾಗಿವೆ" ಎಂದು GMU ಕುಲಪತಿ ಪ್ರೊ. ಮಂದಾ ವೆಂಕಟರಮಣ ಹೇಳಿದರು.

ಪ್ರಸ್ತುತ GMU 7 ಕಾಲೇಜುಗಳು ಮತ್ತು 55 ಮಾನ್ಯತೆ ಪಡೆದ ಶೈಕ್ಷಣಿಕ ಕೋರ್ಸ್ ಗಳನ್ನು ಹೊಂದಿದೆ. ಇಲ್ಲಿ 117ಕ್ಕೂ ಅಧಿಕ ರಾಷ್ಟ್ರೀಯತೆಗಳ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು, 56 ದೇಶಗಳ ಅಧ್ಯಾಪಕರು ಮತ್ತು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಶ್ವದ ವಿವಿಧ ಭಾಗಗಳ ಆರೋಗ್ಯ ವ್ಯವಸ್ಥೆಗಳಲ್ಲಿ GMUನ 5,000ಕ್ಕೂ ಅಧಿಕ ಪದವೀಧರರು ಸೇವೆ ಸಲ್ಲಿಸುತ್ತಿದ್ದಾರೆ.

ಟೈಮ್ಸ್ ಹೈಯರ್ ಎಜುಕೇಶನ್ (THE) ವಿಶ್ವ ವಿಶ್ವವಿದ್ಯಾಲಯ ಶ್ರೇಯಾಂಕ 2027ರಲ್ಲಿ ಅಂತರರಾಷ್ಟ್ರೀಯ ದೃಷ್ಟಿಕೋನ ವಿಭಾಗದಲ್ಲಿ GMU ಜಾಗತಿಕವಾಗಿ ಮೊದಲ ಸ್ಥಾನ ಪಡೆದಿದೆ. 2,297 ವಿಶ್ವವಿದ್ಯಾಲಯಗಳ ಪೈಕಿ 99.4 ಅಂಕಗಳೊಂದಿಗೆ ಈ ಸಾಧನೆ ಮಾಡಿದೆ. QS ಅರಬ್ ಪ್ರದೇಶ ವಿಶ್ವವಿದ್ಯಾಲಯ ಶ್ರೇಯಾಂಕದಲ್ಲಿ ಅಂತರ ರಾಷ್ಟ್ರೀಯ ವಿದ್ಯಾರ್ಥಿಗಳ ಅನುಪಾತದ ವಿಚಾರದಲ್ಲಿ ಅರಬ್ ಪ್ರದೇಶದಲ್ಲೇ ಮೊದಲ ಸ್ಥಾನದಲ್ಲಿದೆ. THE ಅರಬ್ ವಿಶ್ವವಿದ್ಯಾಲಯ ಶ್ರೇಯಾಂಕದಲ್ಲಿ 88ನೇ ಸ್ಥಾನ ಪಡೆದಿದೆ.

2026ರ ಜೂನ್ ನಲ್ಲಿ ಬ್ರಿಟನ್ ನ ಗುಣಮಟ್ಟ ಭರವಸೆ ಸಂಸ್ಥೆ (QAA) GMUಗೆ ಸಾಂಸ್ಥಿಕ ಮಾನ್ಯತೆ ನೀಡಿದೆ. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು 3,100ಕ್ಕೂ ಅಧಿಕ ಹಾಸಿಗೆಗಳ ಸೌಲಭ್ಯ ಹೊಂದಿರುವ ಸಂಸ್ಥೆಯ 7 ಆಸ್ಪತ್ರೆಗಳಲ್ಲಿ ಪ್ರಾಯೋಗಿಕ ತರಬೇತಿ ಪಡೆಯುತ್ತಿದ್ದಾರೆ. ಈ ವ್ಯವಸ್ಥೆಗೆ 75ಕ್ಕೂ ಅಧಿಕ ಅಂತರರಾಷ್ಟ್ರೀಯ ವಿಶ್ವವಿದ್ಯಾಲಯಗಳು ಸಹಕಾರದ ಬೆಂಬಲ ನೀಡುತ್ತಿದೆ.








Tags

GraduateGlobal FamilyGMULaunchesInternational AlumniChapters
share
ವಾರ್ತಾಭಾರತಿ
ವಾರ್ತಾಭಾರತಿ
Next Story
X