ಅಬುಧಾಬಿಯಿಂದ Etihad Airways ನ 8 ಪ್ರಯಾಣಿಕ ವಿಮಾನಗಳ ಹಾರಾಟ ಆರಂಭ; ಭಾರತಕ್ಕೂ ಟೇಕ್ ಆಫ್ ಆದ 2 ವಿಮಾನ

Photo Credit : X
ಅಬುಧಾಬಿ, ಮಾ. 2: ಅಬುಧಾಬಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಧ್ಯಾಹ್ನ 2 ಗಂಟೆಯಿಂದ (GMT 11:00) ಎಂಟು ಪ್ರಯಾಣಿಕ ವಿಮಾನಗಳು ಹಾರಾಟ ಆರಂಭಿಸಿವೆ ಎಂದು ಫ್ಲೈಟ್ ಟ್ರ್ಯಾಕಿಂಗ್ ಸಂಸ್ಥೆ Flightradar24 ಮಾಹಿತಿ ನೀಡಿದೆ.
ಟ್ರ್ಯಾಕಿಂಗ್ ವಿವರಗಳ ಪ್ರಕಾರ, ಸ್ಥಳೀಯ ಸಮಯ ಮಧ್ಯಾಹ್ನ 2:00ರಿಂದ ಒಟ್ಟು 8 ಪ್ರಯಾಣಿಕ ವಿಮಾನಗಳು ಅಬುಧಾಬಿಯಿಂದ ವಿವಿಧ ಗಮ್ಯಸ್ಥಾನಗಳತ್ತ ಹೊರಟಿವೆ.
ಅವುಗಳಲ್ಲಿ ಒಂದು ವಿಮಾನ ದಿಲ್ಲಿಯತ್ತ ಹಾಗೂ ಮತ್ತೊಂದು ಮುಂಬೈನತ್ತ ಪ್ರಯಾಣ ಬೆಳೆಸಿದೆ. ಉಳಿದ ವಿಮಾನಗಳು ತಮ್ಮ ಗಮ್ಯಸ್ಥಾನಗಳತ್ತ ನಿಯಮಿತ ಹಾರಾಟ ಆರಂಭಿಸಿರುವುದಾಗಿ ತಿಳಿದುಬಂದಿದೆ.
ಅಮೆರಿಕ - ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ಮಾಡಿದ ಬಳಿಕ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆಯುಂಟಾಗಿದೆ. ಆ ಬಳಿಕ ವಿಮಾನ ಸಂಚಾರದಲ್ಲಿ ಉಂಟಾಗಿದ್ದ ವ್ಯತ್ಯಯದ ಬಳಿಕ ಇದೀಗ ಹಂತ ಹಂತವಾಗಿ ಸೇವೆಗಳು ಪುನರಾರಂಭವಾಗುತ್ತಿರುವ ಸೂಚನೆಗಳು ದೊರೆತಿವೆ.
Next Story






