ಗಲ್ಫ್ ಗೈಸ್ ಸೆಂಟ್ರಲ್ ಕಮಿಟಿ ಮಲ್ಲೂರು ಅಧ್ಯಕ್ಷರಾಗಿ ಅಬೂಬಕ್ಕರ್ ಸಿದ್ದೀಕ್ ಅಂಗಡಿ ಆಯ್ಕೆ

ಉದ್ಯಮಿ ಅಬೂಬಕ್ಕರ್ ಸಿದ್ದೀಕ್ ಅಂಗಡಿ
ಬುರೈದಾ : ಮಲ್ಲೂರು ಗ್ರಾಮದ ನಾಲ್ಕು ಪ್ರದೇಶಗಳ (ಮಲ್ಲೂರು, ದೆಮ್ಮಲೆ, ಬದ್ರಿಯಾನಗರ, ಉದ್ದಬೆಟ್ಟು) ಬಡ, ನಿರ್ಗತಿಕ, ಅನಾಥರಿಗೆ ಕಳೆದ 8 ವರ್ಷಗಳಿಂದ ಮೆಡಿಕಲ್ ಫಂಡ್, ಮ್ಯಾರೇಜ್ ಫಂಡ್, ಹೌಸಿಂಗ್ ಫಂಡ್, ರಮಝಾನ್ ಕಿಟ್, ಸಾರ್ವಜನಿಕ ಕುಡಿಯುವ ನೀರು ಮತ್ತಿತರ ಸೇವೆಗಳನ್ನು ಜಾತಿಮತ ಭೇದವಿಲ್ಲದೆ ನೀಡುತ್ತಿರುವ ಗಲ್ಫ್ ಗೈಸ್ ಸೆಂಟ್ರಲ್ ಕಮಿಟಿ (ಎಎಇಇ) ಮಲ್ಲೂರು ಇದರ 9ನೆ ಮಹಾಸಭೆಯು ಇತ್ತೀಚೆಗೆ ಬುರೈದಾದಲ್ಲಿ ಶಂಶುದ್ದೀನ್ ಜಿಎ ಅವರ ಅಧ್ಯಕ್ಷತೆಯಲ್ಲಿ ಜರಗಿತು.
ಗೌರವಾಧ್ಯಕ್ಷ ಉಮ್ಮರ್ ಬೊಳ್ಳಂಕಿನಿ ದುಆಗೈದರು. ಮಾಸ್ಟರ್ ಮುಹಮ್ಮದ್ ಶಿಫಾನ್ ಖಿರಾಅತ್ ಪಠಿಸಿದರು. ಮಾಜಿ ಅಧ್ಯಕ್ಷ ಎಂಐ ಶರೀಫ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಮುನೀರ್ ವರದಿ ಓದಿದರು. ಕೋಶಾಧಿಕಾರಿ ಎಂಜಿ ಇಕ್ಬಾಲ್ ಲೆಕ್ಕಪತ್ರ ಮಂಡಿಸಿದರು. ಹಿರಿಯ ಸಲಹೆಗಾರ ಅಬ್ದುಲ್ ಸತ್ತಾರ್ ದೆಮ್ಮಲೆ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
2025-26 ರ ಸಾಲಿನ ನೂತನ ಸಮಿತಿಯ ಅಧ್ಯಕ್ಷರಾಗಿ ಉದ್ಯಮಿ ಅಬೂಬಕ್ಕರ್ ಸಿದ್ದೀಕ್ ಅಂಗಡಿ, ಪ್ರಧಾನ ಕಾರ್ಯದರ್ಶಿಯಾಗಿ ಎಂಜಿ ಇಕ್ಬಾಲ್ ಮಲ್ಲೂರು, ಕೋಶಾಧಿಕಾರಿಯಾಗಿ ಮುನೀರ್ ಬದ್ರಿಯಾನಗರ ಆಯ್ಕೆಯಾದರು.
ಗೌರವಾಧ್ಯಕ್ಷರಾಗಿ ಶಂಶುಧ್ದೀನ್ ಜಿಎ, ಲೆಕ್ಕ ಪರಿಶೋಧಕರಾಗಿ ಸೆಲೀಂ ಉದ್ದಬೆಟ್ಟು, ಸಲಹೆಗಾರರಾಗಿ ಅಬ್ದುಲ್ ಸತ್ತಾರ್ ದೆಮ್ಮಲೆ, ಮುತ್ತಲಿಬ್ ಪಾದೆ, ಉಮ್ಮರ್ ಬೊಳಂಕಿನಿ, ಉಪಾಧ್ಯಕ್ಷರಾಗಿ ಎಂಐ ಶರೀಫ್, ಜೊತೆ ಕಾರ್ಯದರ್ಶಿಯಾಗಿ ಉಮ್ಮರ್ ಫಾರೂಕ್, ಕಚೇರಿ ಕಾರ್ಯದರ್ಶಿಯಾಗಿ ಸಿಯಾಝ್ ಉದ್ದಬೆಟ್ಟು ಹಾಗೂ 8 ಮಂದಿಯನ್ನು ಕಾರ್ಯಕಾರಿ ಸಮಿತಿಗೆ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.
ಈ ಸಂದರ್ಭ ಉಮ್ಮರ್ ಬೊಳ್ಳಂಕಿನಿಯವರನ್ನು ಸನ್ಮಾನಿಸಲಾಯುತು. ಮಕ್ಕಳಿಗೆ ವಿವಿಧ ಹಾಡು ಮತ್ತಿತರ ಸ್ಪರ್ಧೆಗಳನ್ನು ಆಯೋಜಿಸಿ ಬಹುಮಾನ ವಿತರಿಸಲಾಯಿತು. ಮಾಜಿ ಅಧ್ಯಕ್ಷ ಸೆಲೀಂ ಉದ್ದಬೆಟ್ಟು ವಂದಿಸಿದರು.







