ಅಜ್ಮಾನ್| ಬ್ಯಾರೀಸ್ ವೆಲ್ಫೇರ್ ಫೋರಂ 20ನೇ ವರ್ಷದ ಸ್ಮರಣಸಂಚಿಕೆ “ಸ್ಮೃತಿ ಚಿಲುಮೆ” ಬಿಡುಗಡೆ

ದುಬೈ: ಅಜ್ಮಾನ್‌ನ ತುಂಬೆ ಮೆಡಿಸಿಟಿಯಲ್ಲಿ ನಡೆದ ಸಮಾರಂಭದಲ್ಲಿ ಬ್ಯಾರೀಸ್ ವೆಲ್ಫೇರ್ ಫೋರಂ (BWF) ಸಂಸ್ಥೆಯ 20ನೇ ವರ್ಷದ ಸ್ಮರಣಾರ್ಥ ಪ್ರಕಟಿಸಲಾದ ಸ್ಮರಣ ಸಂಚಿಕೆ “ಸ್ಮೃತಿ ಚಿಲುಮೆ” ಯನ್ನು ತುಂಬೆ ಗ್ರೂಪ್ ಸಂಸ್ಥಾಪಕ ಅಧ್ಯಕ್ಷರಾದ ಡಾ. ತುಂಬೆ ಮೊಯ್ದೀನ್ ಅವರು ಬಿಡುಗಡೆಗೊಳಿಸಿದರು.
ಕಾರ್ಯಕ್ರಮವು ನೂಹ್ ಅಬ್ದುಲ್ ರಶೀದ್ ಅವರ ಪವಿತ್ರ ಕುರ್‌ಆನ್ ಪಠಣದೊಂದಿಗೆ ಆರಂಭವಾಯಿತು. BWF ಜಂಟಿ ಕಾರ್ಯದರ್ಶಿ ಅಬ್ದುಲ್ ಜಲೀಲ್ ಕಾರ್ಯಕ್ರಮ ನಿರೂಪಿಸಿದರು. ಹಿದಾಯತ್ ಅಡ್ಡೂರ್, ಫರ್ಹಾದ್ ಮೊಯಿದಿನ್ ಮತ್ತು ಹನಿ ಹನೀಫ್ ಅವರು ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದರು.
BWF ಅಧ್ಯಕ್ಷ ಮೊಹಮ್ಮದ್ ಅಲಿ ಉಚ್ಚಿಲ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಅತಿಥಿಗಳನ್ನು ಸ್ವಾಗತಿಸಿದರು ಮತ್ತು 20 ವರ್ಷದ ಬಿ ಡಬ್ಲ್ಯೂ ಫ್ ನ ಜೀವ ಕಾರುಣ್ಯ ಮತ್ತು ಇನ್ನಿತರ ಚಟುವಟಿಕೆಗಳ ಪರಿಚಯ ನೀಡಿದರು.
ಸಮುದಾಯ ಅಭಿವೃದ್ಧಿಗೆ ನೀಡಿರುವ ಅನನ್ಯ ಕೊಡುಗೆಯನ್ನು ಗುರುತಿಸಿ BWF ವತಿಯಿಂದ ಡಾ. ತುಂಬೆ ಮೊಯ್ದೀನ್ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಮಾತನಾಡಿದ ಅವರು BWF ಸಂಸ್ಥೆಯ ಎರಡು ದಶಕಗಳ ಸಮಾಜಮುಖಿ ಸೇವೆಯನ್ನು ಶ್ಲಾಘಿಸಿ, ತನ್ನ ಮತ್ತು ಮಹಮ್ಮದ್ ಅಲಿ ಅವರ ಸ್ನೇಹವನ್ನು ನೆನಪಿಸಿದರು. ಮತ್ತು ಯುವ ಉದ್ಯಮಿಗಳು ಹಾಗೂ ಸಮಾಜ ಸೇವಕರಿಗೆ ಮಾರ್ಗದರ್ಶನ ಮತ್ತು ಪ್ರೇರಣಾದಾಯಕ ಸಲಹೆಗಳನ್ನು ನೀಡಿದರು.
ಕಾರ್ಯಕ್ರಮದಲ್ಲಿ BWF ಸಂಸ್ಥೆಯ 20 ವರ್ಷಗಳ ಸಾಧನೆಗಳನ್ನು ಒಳಗೊಂಡ ವಿಶೇಷ ಸ್ಲೈಡ್ ಪ್ರದರ್ಶನ ಏರ್ಪಡಿಸಲಾಗಿತ್ತು. “ಸ್ಮೃತಿ ಚಿಲುಮೆ” ಸ್ಮರಣ ಸಂಚಿಕೆಯನ್ನು ಏಕಾಂಗಿಯಾಗಿ ಸಂಪಾದಿಸಿ ಯಶಸ್ವಿಯಾಗಿ ಪ್ರಕಟಿಸುವಲ್ಲಿ ಮಹತ್ವದ ಪಾತ್ರವಹಿಸಿದ ಸಂಪಾದಕರಾದ ಅಬ್ದುಲ್ ಜಲೀಲ್ ಅವರನ್ನು BWF ವತಿಯಿಂದ ವಿಶೇಷವಾಗಿ ಸನ್ಮಾನಿಸಲಾಯಿತು.
ಇದೇ ವೇಳೆ ಥಂಬೆ ಹಾಸ್ಪಿಟಾಲಿಟಿ ವಿಭಾಗದ ನಿರ್ದೇಶಕರಾದ ಫರ್ಹಾದ್ ಮೊಯ್ದೀನ್ ಅವರಿಗೆ BWF ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಉಪಾಧ್ಯಕ್ಷರಾದ ಹಂಝ ಖಾದರ್, ಅಬ್ದುಲ್ ರವೂಫ್ ಮತ್ತು ಇಮ್ರಾನ್ ಅಹ್ಮದ್, ನವಾಝ್ ಉಚ್ಚಿಲ್, ಹಮೀದ್ ಗುರುಪುರ್, ಮಜೀದ್ ಆಡಿಟರ್ ಮತ್ತು ವಿ ಕೆ ರಶೀದ್ ಕಾರ್ಯಕ್ರಮ ಸಂಘಟಿಸಿದ್ದರು.
ಕಾರ್ಯಕ್ರಮದಲ್ಲಿ BWF ಪದಾಧಿಕಾರಿಗಳಾದ ಹನೀಫ್ ಉಳ್ಳಾಲ್, ಇರ್ಫಾನ್ ಅಹ್ಮದ್, ಸಿರಾಜ್ ಪರ್ಲಡ್ಕ, ನಝೀರ್ ಉಬರ್, ಮಜೀದ್ ಆತೂರ್, ನಿಝಾಮ್ ವಿಟ್ಲ, ಅನ್ಸಾರ್ ಬೆಳ್ಳಾರೆ, ಮೊಯಿನುದ್ದೀನ್ ಹಂಡೇಲ್, ಬಷೀರ್ ಉಚ್ಚಿಲ್, ಇಮ್ರಾನ್ ಕೃಷ್ಣಾಪುರ ಹಾಗು ಸದಸ್ಯರು, ಅತಿಥಿಗಳು ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದು, ಸ್ಮರಣ ಸಂಚಿಕೆಯ ಪ್ರಕಟಣೆಯನ್ನು ಅಭಿನಂದಿಸಿದರು. ಅಬ್ದುಲ್ ಮುಜೀಬ್ ಉಚ್ಚಿಲ್ ವಂದಿಸಿದರು.






