ಅಜ್ಮಾನ್ | ತುಂಬೆ ಗ್ರೂಪ್ ನಿಂದ ಡಾ.ಯು.ಟಿ.ಇಫ್ತಿಕಾರ್ ಅಲಿಗೆ 'ಸ್ಟಾರ್ ಆಫ್ ದಿ ಇಯರ್' ಪ್ರಶಸ್ತಿ
ಯುಎಇ: ಅಜ್ಮಾನ್ ನ ತುಂಬೆ ಮೆಡಿಸಿಟಿಯಲ್ಲಿರುವ ತುಂಬೆ ಫಿಸಿಕಲ್ ಥೆರಪಿ ಮತ್ತು ರಿಹ್ಯಾಬಿಲಿಟೇಶನ್ ಆಸ್ಪತ್ರೆ ಆಯೋಜಿಸಿದ್ದ 5ನೇ ಅಂತಾರಾಷ್ಟ್ರೀಯ ವಾರ್ಷಿಕ ಪ್ರಶಸ್ತಿ ಪ್ರದಾನ ಮತ್ತು ಇನ್ನೋವೇಶನ್ ಇನ್ ರಿಹ್ಯಾಬಿಲಿಟೇಶನ್ ಪ್ರಾಕ್ಟೀಸ್ ಆಂಡ್ ಮೆಡಿಸಿನ್ ಕುರಿತ ಸಮ್ಮೇಳನದಲ್ಲಿ ರಾಜ್ಯ ಅಲೈಡ್ ಮತ್ತು ಹೆಲ್ತ್ ಕೇರ್ ಕೌನ್ಸಿಲ್ ಅಧ್ಯಕ್ಷ ಡಾ.ಯು.ಟಿ.ಇಫ್ತಿಕಾರ್ ಅಲಿಯವರಿಗೆ ಪ್ರತಿಷ್ಠಿತ 'ಸ್ಟಾರ್ ಆಫ್ ದಿ ಇಯರ್' ಪ್ರಶಸ್ತಿ ಪ್ರದಾನ ಮಾಡಲಾಯಿತು.
ಯುಎಇಯಲ್ಲಿ ಆರೋಗ್ಯ ಕ್ಷೇತ್ರದಲ್ಲಿನ ಗಮನಾರ್ಹ ಕೊಡುಗೆಗಳನ್ನು ಗುರುತಿಸಿ ಡಾ.ಇಫ್ತಿಕಾರ್ ಅಲಿಯವರಿಗೆ ಈ ಪ್ರಶಸ್ತಿ ನೀಡಲಾಗಿದೆ.
ತುಂಬೆ ಫಿಸಿಕಲ್ ಥೆರಪಿ ಮತ್ತು ರಿಹ್ಯಾಬಿಲಿಟೇಶನ್ ಆಸ್ಪತ್ರೆಯು ಗಲ್ಫ್ ಮೆಡಿಕಲ್ ಯುನಿವರ್ಸಿಟಿ (GMU) ಮತ್ತು ತುಂಬೆ ಹೆಲ್ತ್ ಕೇರ್ ನ ಕಾಲೇಜ್ ಆಫ್ ಹೆಲ್ತ್ ಸೈನ್ಸಸ್ ನ ವಿಭಾಗವಾಗಿದೆ.
ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅಜ್ಮಾನ್ ರೂಲರ್ಸ್ ಕೋರ್ಟ್ ಮುಖ್ಯಸ್ಥ ಶೇಖ್ ಡಾ.ಮಜೀದ್ ಬಿನ್ ಸಯೀದ್ ಅಲ್ ನುಐಮಿ ಮಾತನಾಡಿ,
ಶೇಖ್ ಡಾ. ಮಜೀದ್ ಅಲ್ ನುಐಮಿ ಮಾತನಾಡಿ, ತುಂಬೆ ರಿಹ್ಯಾಬಿಲಿಟೇಶನ್ ಆಸ್ಪತ್ರೆ ದೇಶದ ಅತ್ಯುತ್ತಮ ಆಸ್ಪತ್ರೆಗಳಲ್ಲಿ ಒಂದು ಎಂದು ಆಸ್ಪತ್ರೆಯ ಸೇವೆಯನ್ನು ಶ್ಲಾಘಿಸಿದರು.
ತುಂಬೆ ಗ್ರೂಪ್ ಸ್ಥಾಪಕಾಧ್ಯಕ್ಷ ಡಾ.ತುಂಬೆ ಮೊಯ್ದಿನ್ ಭಾಗವಹಿಸಿದ್ದರು.
ಈ ಸಮ್ಮೇಳನದಲ್ಲಿ ದೇಶದ ಅತ್ಯಾಧುನಿಕ ಹೈಪರ್ಬೇರಿಕ್ ಆಕ್ಸಿಜನ್ ಥೆರಪಿ(HBOT) ಮತ್ತು ಟ್ರಾನ್ಸ್ಕ್ರೇನಿಯಲ್ ಮ್ಯಾಗ್ನೆಟಿಕ್ ಸ್ಟಿಮ್ಯುಲೇಶನ್ (TMS) ಚಿಕಿತ್ಸೆಗಳನ್ನು ಪ್ರಾರಂಭಿಸಲಾಯಿತು. ಇದು ಯುಎಇಯಲ್ಲಿ ಪುನರ್ವಸತಿ ಮತ್ತು ನರರೋಗ ಚಿಕಿತ್ಸಾ ಆರೈಕೆಯಲ್ಲಿ ಪ್ರಮುಖ ಮೈಲಿಗಲ್ಲಾಗಿದೆ ಎಂದು ಆಸ್ಪತ್ರೆಯ ಪ್ರಕಟನೆ ತಿಳಿಸಿದೆ.







