Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಗಲ್ಫ್
  4. ದಮ್ಮಾಮ್: ಕಲ್ಲಡ್ಕ ಅಬ್ರಾಡ್ ಫೋರಮ್ ನಿಂದ...

ದಮ್ಮಾಮ್: ಕಲ್ಲಡ್ಕ ಅಬ್ರಾಡ್ ಫೋರಮ್ ನಿಂದ ಎನ್ ಆರ್ ಐ ಮೀಟ್

ವಾರ್ತಾಭಾರತಿವಾರ್ತಾಭಾರತಿ26 Nov 2024 11:30 AM IST
share
ದಮ್ಮಾಮ್: ಕಲ್ಲಡ್ಕ ಅಬ್ರಾಡ್ ಫೋರಮ್ ನಿಂದ ಎನ್ ಆರ್ ಐ ಮೀಟ್

ದಮ್ಮಾಮ್: ಕಲ್ಲಡ್ಕ ಅಬ್ರಾಡ್ ಫೋರಮ್ ವತಿಯಿಂದ ಗಲ್ಫ್ ಎನ್.ಆರ್. ಐ ಮೀಟ್ ನವೆಂಬರ್ 22ರೆಂದು ದಮ್ಮಾಮ್ ನ ದಿಲ್ಮುನ್ ರೆಸಾರ್ಟ್ ನಲ್ಲಿ ನಡೆಯಿತು.

ಸಮಾವೇಶದಲ್ಲಿ ಸೌದಿ ಅರೇಬಿಯಾದ ವಿವಿಧ ಪ್ರಾಂತ್ಯಗಳು, ಭಾರತ, ದುಬೈ, ಬಹರೈನ್ ನಿಂದ ಅತಿಥಿಗಳು ಭಾಗವಹಿಸಿದ್ದರು. ಕಲ್ಲಡ್ಕ, ಗೋಳ್ತಮಜಲು, ಕೆ.ಸಿ ರೋಡ್ ಜಮಾತ್ ನ ನಾಯಕರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಸುಮಾರು ಐವತ್ತಕ್ಕೂ ಹೆಚ್ಚು ಮಂದಿ ಎನ್.ಆರ್. ಐ ಮೀಟ್ ನಲ್ಲಿ ಪಾಲ್ಗೊಳ್ಳುವುದಕ್ಕಾಗಿ ಕಲ್ಲಡ್ಕದಿಂದ ಆಗಮಿಸಿದ್ದರು.

ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಲ್ಲಡ್ಕ ಅಬ್ರಾಡ್ ಫೋರಮ್ ಸೌದಿ ಅರೇಬಿಯಾ ಅಧ್ಯಕ್ಷ ಮೊಹಮ್ಮದ್ ಫಿರೋಜ್, ಕಲ್ಲಡ್ಕ ಅನಿವಾಸಿಗಳ ನೆರವಿಗಾಗಿ 2016ರಲ್ಲಿ ಕಲ್ಲಡ್ಕ ಅಬ್ರಾಡ್ ಫೋರಮ್ ಅನ್ನು ಸ್ಥಾಪಿಸಲಾಯಿತು. ದಕ್ಷಿಣ ಕನ್ನಡ ಮತ್ತು ಕೇರಳದಿಂದ ಬೃಹತ್ ಸಂಖ್ಯೆಯಲ್ಲಿ ಜನರು ಗಲ್ಫ್ ರಾಷ್ಟ್ರಗಳತ್ತ ಉದ್ಯೋಗಕ್ಕಾಗಿ ಬರಲಾರಂಭಿಸಿದ ಸಂದರ್ಭದಲ್ಲಿ ಕಲ್ಲಡ್ಕದಿಂದಲೂ ದೊಡ್ಡ ಸಂಖ್ಯೆಯ ಲ್ಲಿ ಗಲ್ಫ್ ರಾಷ್ಟ್ರಗಳಿಗೆ ಆಗಮಿಸಿದರು. ಕಲ್ಲಡ್ಕದಿಂದ ಆಗಮಿಸಿದ ಈ ಅನಿವಾಸಿಗಳನ್ನು ಒಗ್ಗೂಡಿಸಿ ಅವರು ಸೌದಿ ಅರೇಬಿಯಾದಲ್ಲಿ ಪರಸ್ಪರ ಹೇಗೆ ಸಹಕಾರವನ್ನು ವೃದ್ಧಿಸಿಕೊಳ್ಳಬಹುದು ಮತ್ತು ಕಲ್ಲಡ್ಕ ಜಮಾತ್ ನ ಒಟ್ಟು ಅಭಿವೃದ್ಧಿಯಲ್ಲಿ ಹೇಗೆ ಪಾಲ್ಗೊಳ್ಳುವಂತೆ ಮಾಡಬಹುದು ಎಂಬ ಚಿಂತನೆಯೊಂದಿಗೆ ಕಲ್ಲಡ್ಕ ಅಬ್ರಾಡ್ ಫೋರಮ್ ಸ್ಥಾಪಿಸಲಾಯಿತು ಎಂದರು.

ಅತಿಥಿಗಳಾಗಿ ಭಾಗವಹಿಸಿದ್ದ ಅಲ್ ಅಖ್ದೋದ್ ಸಂಸ್ಥೆಯ ಅಧ್ಯಕ್ಷ ಹುಸೈನ್ ಅಲ್ ಯಾಮಿ ಮತ್ತು ಬ್ರೈಟ್ ಸಪೋರ್ಟ್ ಕಂಪನಿಯ ಅಧ್ಯಕ್ಷ ಅಲ್ ಉಸ್ಮಾನ್ ಅಲ್ ಝಹ್ರಾನಿ, ಸೌದಿ ಅರೇಬಿಯಾವನ್ನು ಇಲ್ಲಿನ ಪ್ರಜೆಗಳು ಮಾತ್ರವಲ್ಲದೆ ಎಲ್ಲಾ ದೇಶಗಳ ಜನರು ಸೇರಿ ನಿರ್ಮಿಸಿದ್ದಾರೆ. ಹಿಂದೂ ಮುಸ್ಲಿಂ ಕ್ರೈಸ್ತವೆಂಬ ಭೇದ ಭಾವವಿಲ್ಲದೆ ಎಲ್ಲಾ ಧರ್ಮಗಳ, ದೇಶಗಳ ಒಳ್ಳೆಯ ಮನಸ್ಸುಳ್ಳವರಿಗೆ ಸೇರಿದ್ದಾಗಿದೆ ಸೌದಿ ಅರೇಬಿಯಾ ಎಂದು ಹೇಳಿದರು.

ಮುಹ್ಯುದ್ದೀನ್ ಜುಮ್ಮಾ ಮಸ್ಜಿದ್ ಕಲ್ಲಡ್ಕ ಇದರ ಅಧ್ಯಕ್ಷ ಅಬ್ದುಲ್ಲಾ ಕೋಡಿ, ರಹ್ಮಾನಿಯಾ ಜುಮ್ಮಾ ಮಸ್ಜಿದ್ ಗೋಳ್ತಮಜಲು ಇದರ ಅಧ್ಯಕ್ಷ ಹಾಗೂ ದಕ್ಷಿಣ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹನೀಫ್ ಹಾಜಿ, ಕಲ್ಲಡ್ಕ ಅಬ್ರಾಡ್ ಫೋರಮ್ ಯು.ಎ.ಇ ಅಧ್ಯಕ್ಷ ನವಾಜ್ ಗೋಳ್ತಮಜಲು, ಕಲ್ಲಡ್ಕ ಜಮಾತ್ ನ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಪನಾಮ, ಅಬ್ರಾಡ್ ಫೋರಮ್ ಉಪಾಧ್ಯಕ್ಷ ಜಾವೇದ್ ಕಲ್ಲಡ್ಕ, ಅಲ್ ಅಖ್ದೋದ್ ಕಂಪೆನಿ ಆಪರೇಷನ್ ಮ್ಯಾನೇಜರ್ ಉಮ್ಮರ್ ಫಾರೂಕ್ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಸಭೆಯಲ್ಲಿ ಕಲ್ಲಡ್ಕ ಇತಿಹಾಸ, ಕಲ್ಲಡ್ಕ ಅಬ್ರಾಡ್ ಫೋರಮ್ ಸ್ಥಾಪನೆ ಹಾಗೂ ಉದ್ದೇಶವನ್ನೊಳಗೊಂಡ ಡಾಕ್ಯುಮೆಂಟರಿ ಪ್ರದರ್ಶಿಸಲಾಯಿತು. ಕಲ್ಲಡ್ಕ ಜಮಾತ್ ನ ಸುಮಾರು ನೂರು ವರ್ಷಗಳ ಇತಿಹಾಸವನ್ನು ಕಾರ್ಯಕ್ರಮದಲ್ಲಿ ವಿವರಿಸಲಾಯಿತು. ನೂರು ವರುಷಗಳ ಹಿಂದೆ ಕಲ್ಲಡ್ಕ ಮಸೀದಿಯನ್ನು ನಿರ್ಮಿಸಿದ ಹಿರಿಯರಿಗೆ ಮತ್ತು ಆ ನಂತರದಲ್ಲಿ 1940ರಿಂದ 1965ರ ತನಕ ಜಮಾತ್ ಗಾಗಿ ಸೇವೆ ಸಲ್ಲಿಸಿದ ಮುಖಂಡರಿಗೆ ಮತ್ತು ಮುಸ್ಲಿಯಾರ್ ಗಳಿಗೆ 'ಕಲ್ಲಡ್ಕ ರತ್ನ' ಎಂಬ ಪದವಿ ನೀಡಿ ಗೌರವಿಸಲಾಯಿತು. ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮೊಹಮ್ಮದ್ ಹನೀಫ್ ರವರನ್ನು ಸಮಾವೇಶದಲ್ಲಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕಲ್ಲಡ್ಕ ಅಬ್ರಾಡ್ ಫೋರಮ್ ಉಪಾಧ್ಯಕ್ಷರುಗಳಾದ ಫಾರೂಕ್ ಪೋರ್ಟ್ ವೇ ಮತ್ತು ಮುಜೀಬ್ ಕಲ್ಲಡ್ಕ, ಕಲ್ಲಡ್ಕ ಅಬ್ರಾಡ್ ಫೋರಮ್ ದುಬೈ ಘಟಕದ ಉಪಾಧ್ಯಕ್ಷ ರಫೀಕ್ ನೆಕ್ಕರಾಜೆ, ಗೋಳ್ತಮಜಲು ರಹ್ಮಾನಿಯಾ ಜುಮ್ಮಾ ಮಸ್ಜಿದ್ ನ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಮದಕ, ಕೆ.ಸಿ ರೋಡ್ ಜಮಾತ್ ಪ್ರಧಾನ ಕಾರ್ಯದರ್ಶಿ ಫವಾಝ್, ಕೆ.ಎನ್ ಬೇಕರಿ ಮಾಲಕ ನವಾಝ್, ಗೋಳ್ತಮಜಲು ಜಮಾತ್ ಕಮಿಟಿ ಇಕ್ಬಾಲ್ ಗೋಳ್ತಮಜಲು ಪಾಲ್ಗೊಂಡಿದ್ದರು. ‌

ಇಮ್ತಿಯಾಝ್ ಗೋಳ್ತಮಜಲು, ಹಮೀದ್ ಗೋಳ್ತಮಜಲು ಮತ್ತು ಮುಹಮ್ಮದ್ ಷರೀಫ್ ಕೆ.ಸಿ ರೋಡ್ ಕಾರ್ಯಕ್ರಮವನ್ನು ನಿರೂಪಿಸಿದರು. ಕಲ್ಲಡ್ಕ ಅಬ್ರಾಡ್ ಫಾರ್ಮ್ ಕಾರ್ಯಕಾರಿ ಸಮಿತಿ ಸದಸ್ಯ ಅಕ್ಬರ್ ಸ್ವಾಗತಿಸಿ, ಜಾಬಿರ್ ವಂದಿಸಿದರು.


Delete Edit


share
ವಾರ್ತಾಭಾರತಿ
ವಾರ್ತಾಭಾರತಿ
Next Story
X