DKSC ರಾಷ್ಟ್ರೀಯ ಸಮಿತಿ ಮಹಾಸಭೆ : ಅಧ್ಯಕ್ಷರಾಗಿ ಹಾಜಿ ಮೋನಬ್ಬ ಅಬ್ದುಲ್ ರಹಿಮಾನ್ ಅವಿರೋಧ ಆಯ್ಕೆ

ಮೋನಬ್ಬ ಅಬ್ದುಲ್ ರಹಿಮಾನ್
ಮಸ್ಕತ್: ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ (DKSC) ಒಮಾನ್ ರಾಷ್ಟ್ರೀಯ ಸಮಿತಿಯ ಮಹಾಸಭೆಯು ಇತ್ತೀಚೆಗೆ ಮಸ್ಕತ್ನ ಡಿಕೆಎಸ್ಸಿ ಸಭಾಂಗಣದಲ್ಲಿ ಒಮಾನ್ ರಾಷ್ಟ್ರೀಯ ಸಮಿತಿಯ ಹಿರಿಯರಾದ ಮುಹ್ಯುದ್ದೀನ್ ಪಡುಬಿದ್ರಿ ಅವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆಯಿತು. ಸಭೆಯಲ್ಲಿ ಮುಂದಿನ ಸಾಲಿನ ನೂತನ ಅಧ್ಯಕ್ಷರಾಗಿ ಮೋನಬ್ಬ ಅಬ್ದುಲ್ ರಹಿಮಾನ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಡಿಕೆಎಸ್ಸಿ ಒಮಾನ್ ರಾಷ್ಟ್ರೀಯ ಸಮಿತಿಯ ವತಿಯಿಂದ 'ಲಾ ಕಾಲೇಜ್' ಕಟ್ಟಡ ನಿರ್ಮಿಸಲು ನಿರ್ಧರಿಸಲಾಗಿದ್ದು, ಈ ಕಟ್ಟಡ ನಿರ್ಮಾಣ ಸಮಿತಿಯ ಚೆಯರ್ಮಾನ್ ಆಗಿರುವ ಹಾಜಿ ಮೋನಬ್ಬ ಅಬ್ದುಲ್ ರಹ್ಮಾನ್ ಉಚ್ಚಿಲ ಅವರೇ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಹುದ್ದೆಯನ್ನೂ ಅಲಂಕರಿಸಬೇಕೆಂಬ ಸರ್ವ ಸದಸ್ಯರ ಒಕ್ಕೊರಲಿನ ಧ್ವನಿಗೆ ಮನ್ನಣೆ ನೀಡಿ ಈ ಆಯ್ಕೆ ಮಾಡಲಾಗಿದೆ.
ಒಮಾನ್ ರಾಷ್ಟ್ರೀಯ ಸಮಿತಿಯ ಸಂಚಾಲಕರಾದ ಉಮರ್ ಫಾರೂಕ್ ಸಖಾಫಿ ಅವರು ದುಆದೊಂದಿಗೆ ಸಭೆಯನ್ನು ಉದ್ಘಾಟಿಸಿದರು. ಪ್ರಧಾನ ಕಾರ್ಯದರ್ಶಿ ಯೂಸುಫ್ ಹೈದರ್ ಅವರು ವಾರ್ಷಿಕ ವರದಿ ಮತ್ತು ಲೆಕ್ಕಪತ್ರ ಮಂಡಿಸಿದರು.
ಸಮಿತಿಯ ಸದಸ್ಯರಾದ ಶುಕೂರ್ ಖಾಝಿ ಮತ್ತು ನಿಯಾಝ್ ಮಂಗಳೂರು ಅವರು ಚುನಾವಣಾ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು.
ನೂತನ ಪದಾಧಿಕಾರಿಗಳು
ಅಧ್ಯಕ್ಷರು: ಮೋನಬ್ಬ ಅಬ್ದುಲ್ ರಹಿಮಾನ್
ಪ್ರಧಾನ ಕಾರ್ಯದರ್ಶಿ: ಯೂಸುಫ್ ಹೈದರ್
ಉಪಾಧ್ಯಕ್ಷರು: ಅಲ್ತಾಫ್ ಬೋಳಾರ್ ಹಾಗೂ ಮೊಹಿದಿನ್ ಸುನ್ನತ್ ಕೆರೆ
ಜೊತೆ ಕಾರ್ಯದರ್ಶಿ: ಶಿಹಾಬ್ ಪಡುಬಿದ್ರಿ
ಹಣಕಾಸು ಕಾರ್ಯದರ್ಶಿ: ನಿಯಾಝ್ ಮಂಗಳೂರು
ಸಂಘಟನಾ ಕಾರ್ಯದರ್ಶಿಗಳು: ಶುಕೂರ್ ಖಾಝಿ ಹಾಗೂ ಮುನೀರ್
ಮುಖ್ಯ ಸಲಹೆಗಾರರು: ಸಯ್ಯದ್ ಮೊಹಿದಿನ್ ಸಾಹೇಬ್ ಸಾಸ್ತಾನ್
ಲೆಕ್ಕ ಪರಿಶೋಧಕರು: ಅಹ್ಮದ್ ಶಬೀರ್ ಕಾಟಿಪಳ್ಳ
ಸಭೆಯಲ್ಲಿ ಮುಹ್ಯುದ್ದೀನ್ ಪಡುಬಿದ್ರಿ ಅವರು ಅಧ್ಯಕ್ಷೀಯ ಭಾಷಣಗೈದರು. ಅನ್ಸಾರ್ ಕಾಟಿಪಳ್ಳ ಸ್ವಾಗತಿಸಿ, ಶಿಹಾಬ್ ಪಡುಬಿದ್ರಿ ಕಾರ್ಯಕ್ರಮ ನಿರೂಪಿಸಿದರು. ಅಹ್ಮದ್ ಶಬೀರ್ ಕಾಟಿಪಳ್ಳ ಧನ್ಯವಾದಗೈದರು.






